ಶಿವಮೊಗ್ಗ; ದಿನಾಂಕ 18.07.2024 ರಂದು ಜನ ಶಿಕ್ಷಣ ಸಂಸ್ಥೆಯು ಅಶ್ವಥ್ ನಗರದ ಶ್ರೀ ಕೃಷ್ಣಮಠದ ಸಭಾಂಗಣದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ವಿವಿಧ ವೃತ್ತಿ ಕೌಶಲ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಟಿ.ವಿ. ನರಸಿಂಹಮೂರ್ತಿ, ಶ್ರೀ ಕೃಷ್ಣಮಠದ ಅಧ್ಯಕ್ಷರು ಹಾಗು ಸಂಸ್ಕೃತ ಭಾರತಿಯ ಜಿಲ್ಲಾ ಸಂಯೋಜಕರು ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿದರು.
ಜನ ಶಿಕ್ಷಣ ಸಂಸ್ಥೆಯು ಶ್ರೀಕೃಷ್ಣಮಠದಂತಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ವ್ಯಕ್ತಿ ಕೌಶಲ್ಯ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವೆಂದು ಕೊಂಡಾಡಿದರಲ್ಲದೆ ಸಾರ್ವಜನಿಕ ಸ್ಥಳ ಸಾರ್ವಜನಿಕರ ಕೆಲಸಕ್ಕೆ ಮೀಸಲೆಂದರಲ್ಲದೆ “ವಿದ್ಯೆ ವಿನಯವನ್ನು ಕೊಡುತ್ತದೆ”, ಕಲಿಕೆಯಲ್ಲಿ ಗುರುವಿನಿಂದ 75 ಭಾಗ ಕಲಿತರೆ ಉಳಿದ 25 ಭಾಗ ನಿಮ್ಮ ಸ್ವಂತ ಶ್ರಮ ಮತ್ತು ನಿರಂತರ ಕಲಿಕೆಯಿಂದ ಸಂಪೂರ್ಣಗೊಳಿಸಲು ಸಾಧ್ಯ ಶ್ರದ್ದೆಯಿಂದ ಕಲಿತು ಯಶಸ್ಸು ಸಾಧಿಸಿ ಸಬಲರಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎಸ್.ವೈ.ಆರುಣಾದೇವಿಯವರು ಯಶಸ್ವಿ ತರಬೇತಿಯ ನಂತರ ಫಲಾನುಭವಿಗಳು ಪಡೆಯುವ ಪ್ರಮಾಣಪತ್ರದ ಆಧಾರದ ಮೇಲೆ ಅಧಿಕೃತ ಬ್ಯಾಂಕ್‌ಗಳಿಂದ ಲೋನ್ ಪಡೆದು ಸ್ವಂತ ಉದ್ಯಮದ ಮೂಲಕ ಗಳಿಕೆ ಆರಂಭಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಂದ್ರಿಕಾ, ಯೋಗ ತರಬೇತುದಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ಜನ ಶಿಕ್ಷಣ ಸಂಸ್ಥೆಯ ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ಶೋಭಾ ಎಂ.ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಸಂತ ಕುಮಾರಿ ಮತ್ತು ಕಲಿಕಾರ್ಥಿಗಳು ಭಾಗವಹಿಸಿದ್ದರು.
ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.