ವಿಜಯನಗರ/ಕೊಟ್ಟೂರು:ಸಾರ್ವಜನಿಕ ಗ್ರಂಥಾಲಯದಲ್ಲಿ ಇಂದು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು ,
ಹಡಪದ ಅಪ್ಪಣ್ಣನವರು ಕಲ್ಯಾಣದಲ್ಲಿ ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು ಇವರ ಧರ್ಮಪತ್ನಿ ಲಿಂಗಮ್ಮ ಲೌಕಿಕ ಬದುಕಿಗಿಂತ ಆಧ್ಯಾತ್ಮಿಕ ಬದುಕೇ ಮುಖ್ಯವೆಂದು ನಡೆ-ನುಡಿಯಲ್ಲಿ ತೊಡಗಿಸಿಕೊಂಡಿದ್ದರು ಅಪ್ಪಣ್ಣನವರನ್ನು ನಿಜಸಖಿ ಕರೆಯುತ್ತಿದ್ದರು ಎಂದು ಎಸ್ ಕೆ ಗಿರೀಶ್ ಗ್ರಂಥಾಲಯ ಸದಸ್ಯರು ಮಾತನಾಡಿದರು ಈ ಸಂದರ್ಭದಲ್ಲಿ ಮಲ್ಲಪ್ಪ ಗುಡ್ಲಾನೂರ್,ಹಡಪದ ಕೊಟ್ರೇಶ, ಕೊಪ್ಪಳದ ವೀರಭದ್ರಪ್ಪ, ಮಮತಾ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಓದುಗರು, ಗ್ರಂಥಾಲಯ ಸದಸ್ಯರು ಇದ್ದರು.
