ಈಗಿನ ಯುಗವನ್ನು ಬ್ರಾಂಡ್ ಯುಗವೆಂದೇ ಪರಿಗಣಿಸಬಹುದು.ಬ್ರಾಂಡ್ ಸೃಷ್ಟಿಸುವುದು ಅಂದರೆ ನಮ್ಮ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದಂತೆ ನಮ್ಮಲ್ಲಿ ಪಗಣಿಸಲ್ಪಡುವ ಅಂಶ ಇದ್ದರೆ ಮಾತ್ರ ನಮ್ಮನ್ನು ಪರಿಗಣಿಸುತ್ತಾರೆ.
ಆಹಾರ ಧಾನ್ಯಗಳಲ್ಲಿ ಜೊಳ್ಳು ಇದ್ದರೆ ಹೇಗೆ ಪರಿಗಣಿಸಲಾಗದು ಹಾಗೆ ನಮ್ಮಲ್ಲಿ ಪ್ರತಿಭೆಗೆ ಪೂರಕ ಅಂಶಗಳನ್ನು ಮಾತ್ರ ಪರಿಗಣಿಸುತ್ತಾರೆ ಅದಕ್ಕೆ ಇಂಗ್ಲಿಷಿನಲ್ಲಿ “Be considerable and not negligible”ಎಂದು ಗಣಿಸಲಾಗುತ್ತದೆ.
ಬ್ರಾಂಡ್ ಸೃಷ್ಟಿಯಾದರೆ ಅದು ನಮ್ಮ ಕೌಶಲ್ಯ ಮತ್ತು ವರ್ತನೆಯ ಪ್ರತಿಬಿಂಬ ಆಗಿರುತ್ತದೆ.ಹೇಗೆ ಈಗಲೂ Tata,Birla,Bajaj,ಗಳನ್ನು ಬ್ರಾಂಡ್ ಎಂದು ಪರಿಗಣಿಸುತ್ತಾರೆ ಏಕೆಂದರೆ ಈಗಲೂ ಅವು ಕೆಲವು ಅಂಶಗಳಿಂದ ಪರಿಗಣಿತವಾಗಿವೆ.
ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ತಿದ್ದಿ ತೀಡಿಕೊಂಡು ನಮ್ಮದೇ ಆದ ಬ್ರಾಂಡ್ ಸೃಷ್ಟಿಸಿ ಕೊಂಡು ನಮ್ಮ ಕ್ಷೇತ್ರದಲ್ಲಿ ಪರಿಗಣಿಸುವ ಅಂಶವಾಗಿ ನಿಲ್ಲೋಣ…
ಲೇಖನ-ಗಾಯತ್ರಿ ಸುಂಕದ