ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅತಿ ಗಣ್ಯ ವ್ಯಕ್ತಿಗಳ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರೇಡ್ 2 ತಹಸಿಲ್ದಾರ್ ಧನಂಜಯ್ ಮಾತನಾಡಿ ಕಂದಾಯ ನಿರೀಕ್ಷಕ ಮಾದೇಶ್ ಅವರ ಕಾರ್ಯ ವೈಖರಿಯ ಮೆಚ್ಚಿ ಮಾತನಾಡಿ ನಂತರ ಅವರ ವೃತ್ತಿ ಜೀವನದಲ್ಲಿ ಮುಂದವರೆಯಲು ಶುಭ ಹಾರೈಸಿದರು.
ಕಂದಾಯ ನಿರೀಕ್ಷಕ ಮಾದೇಶ್ ಮಾತನಾಡಿ ಕಂದಾಯ ನಿರೀಕ್ಷಕರಾಗಿ ನಾನು ಸುಮಾರು 10 ವರ್ಷದಿಂದ ನಿರಾಳವಾಗಿ ಸಾರ್ವಜನಿಕರ ಕುಂದು ಕೊರತೆಗಳು ಹಾಗೂ ಕೆಲಸ ಕಾರ್ಯಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ಸಹಕಾರದಿಂದ ಯಾವುದೂ ತೊಂದರೆ ಇಲ್ಲದೆ ಸುಗಮವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿದೆ ಹಾಗೂ ನನಗಿಂತ ಮೇಲ್ಮಟ್ಟದ ಅಧಿಕಾರಿ ಗಳು ಸಹ ನನಗೆ ಸಹಕಾರ ಕೊಟ್ಟರು ಅವರಿಗೂ ನಾನು ಆಭಾರಿ ಆಗಿದ್ದೇನೆ ಇಷ್ಟು ವರ್ಷ ಮಾಡಿದ್ದ ನನ್ನ ವೃತ್ತಿ ಸಮಯದಲ್ಲಿ ತಮಗೆ ಗೊತ್ತಿದ್ದೂ ಗೊತ್ತಿಲ್ಲದೆ ಸಣ್ಣ ಪುಟ್ಟ ಬೇಜಾರು ಆಗಿದ್ದರೆ ನನ್ನ ಕಡೆಯಿಂದ ಏನಾದರೂ ಬೇಜಾರು ನೋವು ಆಗಿದ್ದರೆ ನಿಮ್ಮ ಅಣ್ಣ ಅಥವಾ ತಮ್ಮನ ಹಾಗೆ ಭಾವಿಸಿ ನನ್ನನ್ನು ಕ್ಷಮಿಸಬೇಕು ಎಂದರು.
ನಂತರ ಮಾತನಾಡಿದ ಅವರು ನನಗೆ ಈ ಸಂದರ್ಭದಲ್ಲಿ ಮಾಲಾರ್ಪಣೆ ಪುಷ್ಪ ಹಾರ ಹಾಕಿ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳು ಎಂದರು.
ನಂತರ ತಹಸಿಲ್ದಾರ್ ಗುರುಪ್ರಸಾದ್ ಮಾತನಾಡಿ
ಕಂದಾಯ ನಿರೀಕ್ಷಕರಾದ ಮಾದೇಶ ಅವರ ಕಾರ್ಯವೈಖರಿ ಮೆಚ್ಚಿ ಅವರಿಗೆ ಉಪತಹಸಿಲ್ದಾರ್ ಆಗಿ ನೇಮಕ ಮಾಡಿ ಬೇರೆ ಕಡೆ ಬೀಳ್ಕೊಡುಗೆ ಮಾಡುತ್ತಿರುವುದು ಸಂತಸದ ವಿಷಯ ಹಾಗೂ ಅವರಲ್ಲಿ ಇರುವಂತಹ ನಾಯಕತ್ವ ಗುಣ ನನಗೆ ತುಂಬಾ ಮೆಚ್ಚುಗೆಯಾಯಿತು, ಮುಂದಿನ ದಿನಗಳಲ್ಲಿ ಇವರ ವೃತ್ತಿ ಜೀವನ ಇನ್ನೂ ಸುಖಕರವಾಗಿರಲಿ ಇನ್ನೂ ಹೆಚ್ಚಿನ ಉತ್ತುಂಗಕ್ಕೆ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಗುರುಪ್ರಸಾದ, ಗ್ರೇಡ್ 2 ತಹಸಿಲ್ದಾರ್ ಧನಂಜಯ,ವಿರೂಪಾಕ್ಷ ಶಿರಸ್ತೇದಾರ್, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್