ಕಲಬುರಗಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಸಿಐಟಿಯು ಸಂಯೋಜಿತ ರಾಜ್ಯ ಸಮಿತಿ ವತಿಯಿಂದ ಜುಲೈ 23 ರಿಂದ ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ಬೆಳಿಗ್ಗೆ 10 ಗಂಟೆಗೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಲಿದೆ ಜಿಲ್ಲೆಯಿಂದ 1500 ಕ್ಕೊ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (CITU) ಸಂಯೋಜಿತ ಚಿತ್ತಾಪುರ ತಾಲ್ಲೂಕ ಅಧ್ಯಕ್ಷರು ಹಾಗೂ ಹೆಚ್ಚುವರಿ ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಎಸ್ ಸುಗ್ಗಾ ನಾಲವಾರ ರಾಜ್ಯ ಸರ್ಕಾರವು ಗ್ರಾ.ಪಂಚಾಯತಿಗಳಲ್ಲಿರುವ ಶಾಶ್ವತ ಹುದ್ದೆಗಳನ್ನು ಸ್ಥಾನ ಪಲ್ಲಟ ಮಾಡಿ ಹೊರ ಗುತ್ತಿಗೆ ನೀಡುವುದನ್ನು ಕೈಬಿಡಬೇಕು ಕರವಸೂಲಿಗಾರ,ಕ್ಲರ್ಕ,ಡಿಟಿಪಿ,ನೀರುಗಂಟಿಗಳು,
ಜವಾನ,ಸ್ವಚ್ಚತಾ ಹುದ್ದೆಗಳನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು ವೇತನವನ್ನು 31 ಸಾವಿರಕ್ಕೆ ಹೆಚ್ಚಳ ಹಾಗೂ ನಿವೃತ್ತಿ ಅಥವಾ ಮೃತಪಟ್ಟ ಗ್ರಾ.ಪಂ,ನೌಕರರ ಕುಟುಂಬಕ್ಕೆ ಕನಿಷ್ಠ 6 ಸಾವಿರ ರೂ ಪಿಂಚಣಿ ವ್ಯವಸ್ಥೆ ಮಾಡಬೇಕು ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಲೋಪಗಳಿದ್ದು ಸರಿಪಡಿಸುವವರೆಗೂ ಪೂರ್ಣ ವೇತನ ನೀಡಬೇಕು ಎಂದು ಆಗ್ರಹಿಸಿದರು,ಗ್ರೇಡ್-1 ಕಾರ್ಯದರ್ಶಿಯಿಂದ ಪಿಡಿಓ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಮುಂಬಡ್ತಿ ನೀಡಲಾಗುತ್ತಿದ್ದು ಅದನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ನೀಡಬೇಕು ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಷರತ್ತುಗಳನ್ನು ವಿಧಿಸದೆ ಕ್ಲರ್ಕ ಹುದ್ದೆಗೆ ಅನುಮೋದನೆ ನೀಡಬೇಕು.ಗ್ರಾ.ಪಂ,ನೌಕರರ ವರ್ಗಾವಣೆ, ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿ ಪಂಚಾಯತಿಗಳ ಮೇಲ್ದರ್ಜೆಗೇರಿಸುವುದು ಸೇವಾ ಹಿರಿತನ ಆದರಿಸಿ ವೇತನ ಹೆಚ್ಚಳ ಮಾಡಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯದಲ್ಲಿರುವ ಎಲ್ಲಾ ಗ್ರಾ.ಪಂ ಗಳಿಂದ ಸುಮಾರು 45 ಸಾವಿರಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷಿತ ಇದೆ ಎಂದು ತಿಳಿಸಿದರು.
