ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮಕ್ಕೆ 2 ಬಸ್ಸುಗಳು ಕೂಡ್ಲಿಗಿಯಿಂದ ಸೂಲದಹಳ್ಳಿ, ಪೂಜಾರಳ್ಳಿ, ಗಂಗಮ್ಮನಹಳ್ಳಿ ಗ್ರಾಮಗಳ ಮಾರ್ಗದಿಂದ ನಮ್ಮ ರಾಂಪುರ ಗ್ರಾಮಕ್ಕೆ ಬೆಳಿಗ್ಗೆ 9.15 ಕ್ಕೇ ಸರ್ಕಾರಿ ಬಸ್ಸು ಬರುತ್ತವೆ ಆದರೆ ನಮ್ಮ ಊರಿಗೆ ಬಂದಾಗ 2 ಬಸ್ಸುಗಳು ಕೂಡಾ ತುಂಬಿ ತುಳುಕಾಡುತ್ತಿರುತ್ತವೆ.
ಮತ್ತೆ ರಾಂಪುರ ಗ್ರಾಮದದಿಂದ ಕೊಟ್ಟೂರಿಗೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗುವ ಕಾರಣದಿಂದ ವಿದ್ಯಾರ್ಥಿಗಳು ಹರ ಸಾಹಸ ಪಟ್ಟು ಹೇಗೋ ಬಸ್ಸು ಹತ್ತಿ ಊರಿನಿಂದ ಶಾಲೆ ಕಾಲೇಜಿಗೆ ಹೊರಟರೆ
ಮತ್ತೆ ಹೊಸಕೋಡಿಹಳ್ಳಿಗೆ ಹೋದಾಗ ಅಲ್ಲಿ ಸಹ ವಿದ್ಯಾರ್ಥಿಗಳು ಬಸ್ಸು ಹತ್ತಲಾಗದೆ ದಿನಾಲೂ ಎಷ್ಟೋ ವಿದ್ಯಾರ್ಥಿಗಳು ಬಸ್ ನಲ್ಲಿ ಜಾಗ ಇಲ್ಲದೆ ಪಾದಯಾತ್ರೆ ಮೂಲಕ ಕೊಟ್ಟೂರು ಶಾಲೆ ಕಾಲೇಜ್ ಗೆ ಹೋಗುತ್ತಾರೆ ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಂಪುರ ಮತ್ತು ಹೊಸಕೊಡಿಹಳ್ಳಿಗೆ ಮಾತ್ರ ದಿನ ಬೆಳಿಗ್ಗೆ 9 ಗಂಟೆಗೆ ಒಂದು ಬಸ್ಸು ಬಿಡಬೇಕು ಎಂದು ರಾಂಪುರ ಗ್ರಾಮದ ಶಿಕ್ಷಕರಾದ ಏಕಾಂತ ಮತ್ತು ಶಾಲಾ ಕಾಲೇಜ್ ನ ವಿದ್ಯಾರ್ಥಿಗಳು ಮತ್ತು ಊರಿನ ಪ್ರಮುಖರು ರಾಂಪುರ ಗ್ರಾಮದಲ್ಲಿ ಸರ್ಕಾರಿ ಬಸ್ಸು ನಿಲ್ಲಿಸಿ ಸಂಭಂದಪಟ್ಟ ಅಧಿಕಾರಿಗಳು ಅತೀಶೀಘ್ರದಲ್ಲಿ ನಮ್ಮಗ್ರಾಮಗಳಿಗೆ ಇನ್ನೊಂದು ಬಸ್ಸು ಬಿಡಬೇಕೆಂದು ಆಗ್ರಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.