ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲಬುರ್ಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ್ಣ

ಕಲಬುರಗಿ:ಬೇರೆ ಬೇರೆ ಸಮಾಜದವರು ಕ್ಷೌರಿಕ ಕಾಯಕ ಮಾಡಿ ಕಾರಿನಲ್ಲಿ ತಿರುಗಾಡುತ್ತಿದ್ದಾರೆ. ಹಡಪದ ಸಮಾಜದವರು ಕಾಯಕ ಮರೆಯದೆ ಅದರ ಸದ್ವಿನಿಯೋಗ ಮಾಡಿಕೊಂಡು ಮುಂದೆ ಸಾಗಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ಮುದಗಲ್ಲದ ಮಹಾಂತೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಹಿತೋಪದೇಶ ನೀಡಿದರು‌ .
ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಯಂತೋತ್ಸವ ಸಮಿತಿ ಸಹಯೋಗದಡಿ ಡಾ.ಎಸ್.ಎಮ್ ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ ಶಿವಶರಣ ಹಡಪದ ಅಪ್ಪಣ್ಣ ಜಯಂತೋತ್ಸವದಲ್ಲಿ ಮಾತನಾಡಿ ಅವರು ಆರ್ಥಿಕ,ಸಾಮಾಜಿಕ,ಔದ್ಯೋಗಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಹಡಪದ ಸಮಾಜ ಶಿಕ್ಷಣ ಕ್ಕೆ ಆದ್ಯತೆ ನೀಡಿದಾಗ ಎಲ್ಲದಕ್ಕೂ ಪರಿಹಾರ ದೊರೆಯಲಿದೆ ಎಂದರು. ಹಡಪದ ಅಪ್ಪಣ್ಣ ಸೇವಾನಿಷ್ಠ, ಸಮ ಸಮಾಜ ನಿರ್ಮಿಸುವ ಕೈಂಕರ್ಯಕ್ಕೆ ನಿಧಿಯಾಗಿದ್ದರು. ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಅಪ್ಪಣ ಶರಣರು ಜ್ಞಾನಿಯಾಗಿ ಹೊರಹೊಮ್ಮಿದರು. ಅವರ 243 ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ . ಸೂರ್ಯ ಚಂದ್ರ ಇರುವವರೆಗೂ ಶರಣರ ವಚನಗಳು ಅಮರವಾಗಿರುತ್ತದೆ.ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಶರಣರ ವಚನಗಳ ಅಧ್ಯಯನ ಮಾಡಿಸಬೇಕು, ಅಂಗದ ಮೇಲೆ ಲಿಂಗ ,ಹಣೆ ಮೇಲೆ ವಿಭೊತಿ ಧರಿಸಿ ಕಾಯಕ ನಿಷ್ಠರಾಗಬೇಕು ಎಂದು ಸಲಹೆ ನೀಡಿದರು,

12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಇವರು ಹಡಪದ ಸಮಾಜದವರಾಗಿದ್ದು, ಬಸವಣ್ಣನವರು ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು ಎಂದು ಮುದಗಲ್ಲ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.
ಭಾನುವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್, ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಶರಣರ ಸಂತ ಪೂಜ್ಯರ ಆಚಾರ ವಿಚಾರಗಳಿಂದ ಸಮಾಜಕ್ಕೆ ಮಹಾನ ಜ್ಞಾನವನ್ನು ನೀಡಿದ್ದಾರೆ ನಮ್ಮ ಈ ಸರ್ಕಾರ ಇಡೀ ರಾಜ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ ಸರ್ಕಾರಿ ಕಛೇರಿಗಳ ಹಡಪದವರು.ಅಪ್ಪಣನವರ ಅಪರೂಪದ ವಚನಗಳಿವೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವಂತಹ ವಚನಗಳಾಗಿದ್ದವು ಶರಣರ ಹೆಸರುಗಳು ಕಾಲ ಕಾಲದವರಿಗೆ ಇರುತ್ತವೆ ಅದಕ್ಕೆ ಕಾರಣ ಅವರ ನಡೆ ನುಡಿಯಾಗಿದೆ. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಅರ್ಥಪೂರ್ಣ ಜಯಂತಿಯನ್ನ ಆಚರಣೆಯ ಮಾಡಿದ್ದನ್ನು ಸ್ವಾಗರ್ತವಾಗಿದೆ ಎಂದರು.
ಹಡಪದ ಸಮಾಜ ಒಂದು ಕಾಲದಲ್ಲಿ ಸಮಾಜವನ್ನು ಕಂಡರೆ ಗೌರವಿಲ್ಲದೆ ವ್ಯವಸ್ತೆ ಇತ್ತು.ಎಷ್ಟು ಹಳ್ಳಿಗಳಲ್ಲಿ ಅವರು ಮುಖನೋಡಬಾರದು ಪಂಚಾಂಗ ಶಾಸ್ತ್ರದ ಅವರನ್ನು ನೋಡಿದರೆ ಅಶುಭ ಎಂದು ಬರೆದಿಟ್ಟಿದ್ದರು ಎಂದರು.

ಶಿವಶರಣ ಹಡಪದ ಅಪ್ಪಣ ಜಯಂತಿ ಸಮಿತಿ ಅಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ ಅವರು ಪ್ರಾಸ್ತಾವಿಕ ಮಾತನಾಡಿ, ಆಸ್ತಿ ಮಾಡುವದಕ್ಕಿಂತ ಮಕ್ಕಳನ್ನೆ ಆಸ್ತೆಯನ್ನಾಗಿ ಪರಿವರ್ತನೆ ಮಾಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕಿಯವಾಗಿ ತುಂಬಾ ಹಿಂದೆ ಉಳಿದಿರುವ ಸಮಾಜವಾಗಿದೆ ನಮ್ಮ ಸಮಾಜದ ಅಭಿವೃದ್ಧಿಗಾಗಿ ನಿಗಮಕ್ಕೆ ಸರ್ಕಾರ 100 ಕೋಟಿ ಅನುದಾನ ನೀಡಬೇಕು ಎಂದರು.

ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ.ಷ.ಬ್ರ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ರವರು ಶರಣ ಹಡಪದ ಅಪ್ಪಣ್ಣ ನವರ ಬಗ್ಗೆ ಅನೇಕ ವಿಚಾರಗಳನ್ನು ಕುರಿತು ಮತ್ತು ಹಡಪದ ಅಪ್ಪಣ್ಣ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಜತೆಗೆ ಕಾಯಕ ಮತ್ತು ದಾಸೋಹದ ಮಹತ್ವ ಹೇಳಿಕೊಡಬೇಕು ಎಂದು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಬಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು ಶಹಾಬಾದ, ಮತ್ತು ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕರು ಬಸವರಾಜ ಹಡಪದ ಮಾತನಾಡಿ ಹಡಪದ ಅಪ್ಪಣ್ಣನವರು ಕಾಯಕ ಮಾಡಿ ಬಸವಣ್ಣನವರ ಕಾರ್ಯದರ್ಶಿಯಾಗಿದ್ದರು.ಅಂತರಾತ್ಮದ ಶೋಭೆ ಮೂಲಕ ಶ್ರೀಮಂತರಾಗಿದ್ದರು ಶರಣರು ನೀಡಿದ ವಚನಗಳ ಸಾರ ಅರಿತು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು ಎಂದು ಹೇಳಿದರು, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿಷ್ಠಾಚಾರ ತಹಶೀಲ್ದಾರ ಜಗದೀಶ ಚೌರ್, ದತ್ತಪ್ಪ ಸಾತನೂರ, ಹಾಗೂ ಶಿವಶರಣಪ್ಪ ಯಳವಂತಗಿ ಸಮಾಜದ ಹಿರಿಯ ದಾನಿಗಳು, ಮತ್ತು ಶಿವಶರಣಪ್ಪ ಹಾಗರಗಿ ಮಾಜಿ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ , ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಈ ಕಾರ್ಯಕ್ರಮದ ನಿರೂಪಣೆ – ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು -ಭಗವಂತ ಹಡಪದ ಶಿಕ್ಷಕರು ಕಿರಣಗಿ ನಿರೊಪಣೆ ಮಾಡಿದರು , ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ಅವರು ಈ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದರು.ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ , ಶಿವಾನಂದ ಬಬಲಾದಿ ಜಿಲ್ಲಾ ಖಜಾಂಚಿ , ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ-ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಹಡಪದ ನೌಕರ ಸಂಘದ ಅಧ್ಯಕ್ಷ ಕುಪೇಂದ್ರ ಲಾಡವಂತಿ, ಸುಭಾಷ್ ಹಡಪದ ಕರಾರಿ, ಕಲಬುರಗಿ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ,ಶರಣು ಸುಭಾಷ್ ಬಾದಾಮಿ ಕಲಬುರಗಿ, ಮಲ್ಲಿಕಾರ್ಜುನ ಮಾನೆ ,ಮಲ್ಲಣ್ಣ ಫರತಭಾದ . ಸಂತೋಷ ಹಡಪದ ಬಗದುರಿ, ನಿಂಗಣ್ಣ ಯಾತನೂರ , ಆನಂದ ಖೇಳಗಿ, ಮಹಾತೇಶ ಇಸ್ಲಾಂಪೂರೆ, ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಶ್ರೀಮಂತ ಹಡಪದ ಮಳಗಿ ಕಾಳಗಿ ತಾಲೂಕಾಧ್ಯಕ್ಷ, ಭೀಮರಾವ್ ಹಡಪದ ಮಾಸ್ತರ ಚಿತ್ತಾಪುರ ತಾಲೂಕಾಧ್ಯಕ್ಷ, ಮಹಾಂತೇಶ ಹಡಪದ ಹವಳಗಾ ಅಫಜಲಪುರ ತಾಲೂಕಾಧ್ಯಕ್ಷ, ಎಸ್.ಕೆ ತೆಲ್ಲೂರ್ ಸರ . ವಿನೋದ ಹಡಪದ ಅಂಬಲಗಾ, ರಮೇಶ್ ಕವಲಗಾ, ಹುಚ್ಚಪ್ಪ ಭೋದನಾ, ಸುನೀಲ್ ಕುಮಾರ್ ಭಾಗಹಿಪ್ಪರಗಿ, ಶಿವಕುಮಾರ್ ಹಡಪದ ಮಾರಡಗಿ.ಶೇಖರ ಪಟ್ನಾ, ಶಂಕರ ಹರವಾಳ, ಸಂಗಮೇಶ ಹಡಪದ ಹೊಸ್ಸಳ್ಳಿ, ಶಂಭುಲಿಂಗ ಹಡಪದ ಮುತ್ತಕೋಡ್, ಮಲ್ಲಿಕಾರ್ಜುನ ಬನ್ನೂರ, ಶಿವಕುಮಾರ್ ಸಿಂದಗಿ, ಶರಣು ಹರವಾಳ, ರಮೇಶ ಕರಾರಿ ಸಮಾಜದ ಯುವ ಮುಖಂಡ, ನಿಂಗಣ್ಣ ಹಾವನೂರ, ಸಿದ್ರಾಮ ಯಾಗಾಪೂರ, ಶಿವಲಿಂಗ ಹಡಪದ ಶಹಾಬಾದ, ಮತ್ತು ಹಡಪದ ಸಮಾಜದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯ ಮುಖಂಡರು. ಮತ್ತು ಮಹಿಳಾ ತಾಯಂದಿರು ಹಾಗೂ ಯುವಕ ಮಿತ್ರರು ಸೇರಿದಂತೆ ನಿಜಸುಖಿ ಹಡಪದ ಅಪ್ಪಣ್ಣ ನವರ ೮೯೦ನೇ ಜಯಂತೋತ್ಸವ ಸಂಭ್ರಮ ಸಡಗರದಿಂದ ಆಚರಣೆ ಮಾಡಿ ಈ ವೇದಿಕೆಯಲ್ಲಿ ಸಮಾಜದ ಸಾವಿರ ಮುಖಂಡರು ಉಪಸ್ಥಿತರಿದ್ದರು.
ಸಂಗೀತ ಸೇವೆಯನ್ನು-ಸಿದ್ದಾರೂಢ ಅವರಳ್ಳಿ ಅವರು ಸಂಗಡಿಗರು ಸಲ್ಲಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ