ಪಾವಗಡ: ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು 50 ವರ್ಷ ಹೊಸ್ತಿಲಲ್ಲಿ ಸುವರ್ಣ ವರ್ಷಾಚರಣೆ ಅಂಗವಾಗಿ ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ಸೋಮವಾರ ಪಟ್ಟಣಕ್ಕೆ ಆಗಮಿಸಿತು. ತಾಲ್ಲೂಕು ಆಡಳಿತ, ಕಸಾಪ, ಕರವೇ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿ ಬೀಳ್ಕೊಟ್ಟರು.
ಶಿರಾ ತಾಲ್ಲೂಕಿನಿಂದ ಬೆಳ್ಳಗ್ಗೆ ಹೊರಟ ರಥಯಾತ್ರೆಯನ್ನು ಆಂಧ್ರ ಗಡಿ ಭಾಗದಲ್ಲಿ ಶಿರಾ ತಹಶೀಲ್ದಾರ್ ಶ್ರೀನಿವಾಸ ರವರಿಂದ ಪಾವಗಡ ತಹಶೀಲ್ದಾರ್ ಗೆ ಹಸ್ಥಾಂತರಿಸಲಾಯಿತು.ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ವನಿತೆಯರು ಪೂರ್ಣಕುಂಭ ಕಳಶಗಳನ್ನು ಹೊತ್ತು ಶುಭಕೋರಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರಮೆರವಣಿಗೆ ನಡೆಸಿ ತಹಶೀಲ್ದಾರ್ ವರದರಾಜು ಹಾಗೂ ತಾ.ಪಂ ಇ.ಒ ಜಾನಕೀರಾಮ್ ತಾಲ್ಲೂಕು ಕಸಾಪ ಪದಾಧಿಕಾರಿಗಳು ಸ್ವಾಗತಿಸಿದರು.
ನಂತರ ಅರಸೀಕೆರೆ, ಮಂಗಳವಾಡ ಮಾರ್ಗವಾಗಿ ಪಾವಗಡ ಪಟ್ಟಣಕ್ಕೆ ಆಗಮಿಸಿತು.ಪಟ್ಟಣದ ಶನಿಮಹಾತ್ಮ ವೃತ್ತದ ಬಳಿ ಸ್ವಾಗತ ನೀಡಲಾಯಿತು. ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ಸಾಗಿದ ರಥವನ್ನು ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಯಘೋಷ ಕೂಗುತ್ತಾ ನಿರೀಕ್ಷಣ ಮಂದಿರದವರೆಗೆ ಮೆರವಣಿಗೆಯಲ್ಲಿ ಸಾಗಿ ಬೀಳ್ಕೊಟ್ಟರು.
ಈ ವೇಳೆ ಮಾಜಿ ಸಚಿವರು ವೆಂಕಟರಮಣಪ್ಪ, ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ ಅಂಜಿನಪ್ಪ, ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಕಟ್ಟ ನರಸಿಂಹಮುರ್ತಿ,ಕನ್ನಡ ಸಂಸ್ಕೃತಿ ಸಹಾಯಕ ನಿರ್ಧೇಶಕರು, ರವಿ ಕುಮಾರ್, ಸಿ.ಪಿ.ಐ ಸುರೇಶ್, ಬಿ.ಇ.ಓ ಇಂದ್ರಣಮ್ಮ, ಪಿ.ಇ.ಒ ಬಸವರಾಜು, ಅರಸೀಕೆರೆ ಎಸ್.ಐ ತಾರಾಸಿಂಗ್, ಪ್ರಭಾರಿ ಮುಖ್ಯಶಿಕ್ಷಕ ರೇಣುಕಾರಾಜ್, ಮುಖ್ಯಶಿಕ್ಷಕ ಸಿದ್ದೇಶ್, ಶಿಕ್ಷಕರಾದ ಮಂಜುನಾಥ, ಎಸ್.ಡಿ.ಎಂ.ಸಿ ಅಧ್ಯಕ್ಷ ಗುರುರಾಜು, ಹೊ.ಮ.ನಾಗರಾಜು, ನಿಂಗಪ್ಪ, ಎಂ.ಗಂಗಾಧರಯ್ಯ, ಲೋಕೇಶ್ ಪಾಳೆಗಾರ, ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ, ಶಿವಕುಮಾರ್, ಮಂಜುಳ ಸೇರಿದಂತೆ, ಅಂಗನವಾಡಿ ಕಾರ್ಯಕರ್ತರು, ಎಲ್ಲಾ ಶಾಲಾ ಶಿಕ್ಷಕರು, ಕನ್ನಡ ಪರ ಸಂಘನೆಗಳ ಸದಸ್ಯರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.