ಪಾವಗಡ:ಕಾನೂನು ಬಾಹಿರ ಚಟುವಟಿಕೆಗಳು ತಾಲ್ಲೂಕಿನಲ್ಲಿ ಮಿತಿಮೀರಿದ್ದು ಇವುಗಳನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವ ಪೊಲೀಸರು ರಾಜಕೀಯ ದುರುದ್ದೇಶದಿಂದ ಕೇವಲ ಜೆಡಿಎಸ್ ಕಾರ್ಯಕರ್ತವನ್ನು ಗುರಿಯಾಗಿಸಿಕೊಂಡು ವಿನಾಕಾರಣ ಕೇಸುಗಳನ್ನು ದಾಖಲಿಸಿಕೊಂಡು ಜೈಲಿಗಟ್ಟಿ ಹಿಂಸೆ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕಿನ 4 ಹೋಬಳಿಗಳಲ್ಲಿಯೂ ಮಟ್ಕಾ ಇಸ್ಪೀಟು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದನ್ನು ನಿಯಂತ್ರಿಸುವ ಸಂಪೂರ್ಣ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದೆ. ಇಂತಹ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವ ಎಲ್ಲರ ವಿರುದ್ಧವು ಸಹ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕೀಯ ದುರುದ್ದೇಶದಿಂದ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕೇಸ್ ದಾಖಲಿಸುವುದು ಖಂಡನೀಯ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿ ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರಿಗೆ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಅಪಾರ ಕಾರ್ಯಕರ್ತರು ಮಾಜಿ ಶಾಸಕರಾದ ಕೆ ಎಂ ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಪಟ್ಟಣದ ಎಸ್ ಎಸ್ ಕೆ ಬಯಲು ರಂಗ ಮಂದಿರದಲ್ಲಿ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರು ಮನವಿ ಪತ್ರವನ್ನು ಸ್ವೀಕರಿಸಿ ನಂತರ ಮಾತನಾಡುತ್ತಾ , ಕಾನೂನು ಪ್ರತಿಯೊಬ್ಬರಿಗೂ ಒಂದೇ ಇದರಲ್ಲಿ ಯಾವುದೇ ಪಕ್ಷಭೇದವಿಲ್ಲ ಜಾತಿ ತಾರತಮ್ಯವಿಲ್ಲ ಕಾನೂನು ಅಡಿಯಲ್ಲಿ ಪ್ರತಿಯೊಬ್ಬರ ಒಂದೆ. ಯಾರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರು ಸಹ ಕೇಸ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಒಂದು ವೇಳೆ ನಿಮಗೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ನಿಮ್ಮ ಕೇಸನ್ನು ದಾಖಲಿಸಿ ಪಡೆದಿದ್ದರೆ ನನ್ನ ನಂಬರಿಗೆ ನೇರವಾಗಿ ಫೋನ್ ಮಾಡುವ ಮೂಲಕ ನನ್ನ ಗಮನಕ್ಕೆ ತಂದರೆ ನಿಮಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ತಿಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಆರ್ ಸಿ ಅಂಜನಪ್ಪ , ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ,ತಾಲೂಕು ಘಟಕದ ಅಧ್ಯಕ್ಷರಾದ ಎನ್ಎ ಈರಣ್ಣ, ಬಲರಾಮರೆಡ್ಡಿ, ಕೊತ್ತೂರು ನಾಗೇಶ್, ಕಾವಲಗೆರೆ ರಾಮಾಂಜಿ, ಗಂಗಾಧರ ನಾಯ್ಡು,ರಾಜಗೋಪಾಲ, ಭರತ್, ಗುಟ್ಟಳ್ಳಿ ಮಣಿ, ನಾಗೇಂದ್ರ,ವೆಂಕಟಮಣಸ್ವಾಮಿ, ಸತ್ಯಪ್ಪ, ಮಂಜುನಾಥ ಚೌದರಿ, ಯೂನಿಸ್ ಸೇರಿದಂತೆ ಜೆ,ಡಿ,ಎಸ್ ಕಾರ್ಯಕರ್ತರಿದ್ದರು.