ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪೆದ್ದು ಮಠದಲ್ಲಿ ಗುರುವಂದನಾ ಕಾರ್ಯಕ್ರಮ

ಭಕ್ತರ ಬದುಕು ಸುಂದರವಾಗಲಿ:ದಿಗ್ಗಾಂವ ಶ್ರೀ,ಚಿತ್ತಾಪುರ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಕಡಬೂರ ಬಡಾವಣೆಯ ಪೆದ್ದು ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದಿಗ್ಗಾಂವ್‌ ದ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ
ಶರಣು ಊಡಗಿ,ಜಗದೀಶ ಶಾಸ್ತ್ರೀ ಹಿರೇಮಠ, ಸಂಗಯ್ಯಸ್ವಾಮಿ ಸ್ಥಾವರಮಠ, ಶರಣಯ್ಯಸ್ವಾಮಿ ಇದ್ದರು.
ಭಕ್ತರ ಭಕ್ತಿ ಉನ್ನತವಾಗಿ ಬೆಳಯಲಿ,ಎಲ್ಲಾ ಭಕ್ತರಿಗೂ ಸುಂದರವಾದ ಬದುಕು ಲಭಿಸಲಿ ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಪೀಠಾಧಿಪತಿ ಶ್ರೀ ಸಿದ್ದವೀರ ಶಿವಾಚಾರ್ಯ ನುಡಿದರು.
ಪಟ್ಟಣದ ಕಡಬೂರ ಬಡಾವಣೆಯ ಸಿದ್ದೇಶ್ವರ ಪೆದ್ದು ಮಠದಲ್ಲಿ ಕಡ್ಲಿಗಾರ ಹುಣ್ಣಿಮೆಯ ಪ್ರಯುಕ್ತ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಭಕ್ತರು ಗುರುವಿಗೆ ವಿಶೇಷ ಸ್ಥಾನ ನೀಡು ತ್ತಾರೆ.ಭಕ್ತರ ಇಷ್ಟಾರ್ಥಗಳು ಈಡೇರಲಿ ಎಂದು ಗುರುಗಳು ಹಾರೈಸಿದರು. 
ಭಸ್ಮ, ರುದ್ರಾಕ್ಷಿ ಪ್ರತಿಯೊಬ್ಬರೂ ಧರಿಸಬೇಕು. ಇದರಿಂದ ಅವರ ಬದುಕು ಹಸನಾಗುತ್ತದೆ. 
ಭಕ್ತಿ ತೋರಿಕೆಗಾಗಿ ಇರಬಾರದು.ಗುರಿ ಸಾಧಿಸಲು ಗುರುವಿನ ಮಾರ್ಗ ಸಕಲ ಮುಖ್ಯವಾಗಿರುತ್ತದೆ. ಭಕ್ತರ ಒಳಿತನ್ನ ಗುರುವಿನ ದರ್ಶನ ಸ್ಥಾನದಲ್ಲಿ ಇರುವರು ಬಯಸಬೇಕು. ಒಳ್ಳೆಯದು ಮಾಡುವುದೇ ಸ್ವರ್ಗ, ಕೆಟ್ಟದ್ದು ಮಾಡುವುದು ನರಕಕ್ಕೆ ಸಮಾನ. ಇದನ್ನು ಅರಿತು ಸಕಲ ಜೀವಿಗಳ ಒಳಿತನ್ನು ಬಯಸಬೇಕು. ಭಕ್ತರ ಜೀವನ ಕಲ್ಪವೃಕ್ಷದಂತೆ ಬೆಳೆಯಲಿ ಎಂದು ಹೇಳಿದರು.
ದಿಗ್ಗಾಂವ ಶ್ರೀಗಳಿಗೆ ಭಕ್ತರು ಪಾದಪೂಜೆ ಮಾಡಿ, ಗುರುವಂದನಾ ಕಾರ್ಯ ನಡೆಸಿದರು.
ಸನ್ನತಿಯ ಜಗದೀಶ ಶಾಸ್ತ್ರೀ ಹಿರೇಮಠ ಪ್ರವಚನ ಹೇಳಿದರು. ಕಲಾವಿದರಾದ ಸಂಗಯ್ಯಸ್ವಾಮಿ ಸ್ಥಾವರಮಠ ಹೊನಗುಂಟಿ, ಶರಣಯ್ಯಸ್ವಾಮಿ ಮಠಪತಿ, ಆಶಾ ಭಜಂತ್ರಿ, ಗುರುರಾಜ್ ಪಾಟೀಲ್ ಹಂಗನಳ್ಳಿ ಸಂಗೀತ ಸೇವೆಯನ್ನು ಸಲ್ಲಿಸಿದರು.
ಪ್ರಮುಖರಾದ ವಿಶ್ವರಾಜ ಜಗನ್ನಾಥ್, ಶಿವನಾಗಪ್ಪ ಮುತ್ತಲಗಡ್ಡಿ,  ಶರಣು ಬಮ್ಮನಳ್ಳಿ, ರಾಚಯ್ಯಸ್ವಾಮಿ ಬಟಗೇರಿ, ಮಲ್ಲಿಕಾರ್ಜುನ ಹೂಗಾರ, ಮಲ್ಲಿಕಾರ್ಜುನ ಗಂಗಾಣಿ,ಸರಸ್ವತಿ ರೇಷ್ಮಿ,ಹೀರಾಬಾಯಿ ಹತ್ತಿ,ಶಾರದಾ ಜಗನ್ನಾಥ, ತನುಜಾ ರೇಷ್ಮಿ, ಈರಮ್ಮ ಚನ್ನವೀರಪ್ಪ, ಲಲಿತಾ ರೇಷ್ಮಿ, ಬಸಮ್ಮ ಮಟ್ಟಿ, ಅನ್ನದಾನಿ ಯರಗಲ, ಜಗದೇವಿ ಗಂಗಾಣಿ, ರಾಜೇಶ್ವರಿ ಸ್ವಾಮಿ ಸೇರಿದಂತೆ ಇತರರಿದ್ದರು. 
ಶರಣು ಉಡಗಿ ಸ್ವಾಗತಿಸಿ, ನಿರೂಪಣೆ ಮಾಡಿದರು.

ದಿಗ್ಗಾವ:
ಕನ್ನಡ ನಾಡಿನ ಕಲ್ಯಾಣ ಕರ್ನಾಟಕ ಒಂದು ಸುಂದರ ನಾಡು ಈ ನಾಡಿನಲ್ಲಿ ಹೆಸರುವಾಸಿಯಾದ ಊರು ದಿಗ್ಗಾವ ಭೂಲೋಕದ ಕೈಲಾಸವೆಂದು ಪ್ರಖ್ಯಾತಿ ಪಡೆದಿದೆ ಇಲ್ಲಿ ಶಂಭುಲಿಂಗನ ದೇವಸ್ಥಾನ ಹಾಗೂ ಪರಂಪರಗತವಾಗಿ ಬಂದಿರುವ ಪಂಚಗ್ರಹ ಹಿರೇಮಠ ಮಠವು ಅನೇಕ ಧಾರ್ಮಿಕ ಪೌರಾಣಿಕ ಪರಂಪರೆಗಳ ಉಳಿವಿಗಾಗಿ ಸದಾ ಕಾಲ ಶ್ರಮಿಸುತ್ತಾ ಬಂದಿದೆ ಅದೇ ಮಾರ್ಗದಲ್ಲಿ ಇಂದಿನ ಶ್ರೀಮಠದ ಒಡೆಯರಾದ ಕ್ರಿಯಾಶೀಲ ಶ್ರೀ ಷಟ್ ಸ್ಥಲ ಬ್ರಹ್ಮ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿಯವರು ಅಲಂಕರಿಸಿ ಪೀಠ ಹಾಗೂ ಊರಿನ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದಾರೆ.

ವರದಿ:ಮಂಜುನಾಥ ಶಾಸ್ತ್ರೀ ಹಿರೇಮಠ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ