ಪಾವಗಡ:ಆಗಸ್ಟ್ 5 ರಂದು ಮುಖ್ಯ ಮಂತ್ರಿಗಳ ಮನೆಗೆ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ಚಲೋ ಮೂಲಕ ಮುಖ್ಯ ಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಎ.ಐ.ಟಿ.ಯು.ಸಿ ಜಿಲ್ಲಾ ಮುಖಂಡರಾದ ಗಿರೀಶ್ ತಿಳಿಸಿ ನಂತರ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಾಂತರ ಸೆಸ್ ಹಣ ವಸೂಲಿಯಾಗಿದೆ.ಸೆಸ್ ಹಣವು ಕಾರ್ಮಿಕರ ಶ್ರಮದ ಹಣ ಇದನ್ನು ಆಡಳಿತ ನಡೆಸುವ ಸರ್ಕಾರಗಳು ಕಾರ್ಮಿಕ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲವಾಗಿದೆ ಕಾರ್ಮಿಕರ ಶ್ರಮದ ಹಣವನ್ನು ಪೋಲು ಮಾಡಲಾಗುತ್ತಿದೆ.ಕಳೆದ ಎರಡು ವರ್ಷದಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ನೀಡುತ್ತಿಲ್ಲ.8 ತಿಂಗಳಿಂದ ಯಾವುದೇ ಸೌಲಭ್ಯಗಳಿಗೆ ಅರ್ಜಿಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಕಾರ್ಮಿಕ ಕಿಟ್,ಲ್ಯಾಪ್ ಟಾಪ್ ಹಾಗೂ ಕ್ಯಾಲೇಂಡರ್ ಖರೀದಿ,ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡುವ ಮುಖಾಂತರ ಮಂಡಳಿಯ ಹಣವನ್ನು ಲೂಟಿ ಮಾಡಿ ಭ್ರಷ್ಟಾಚಾರ ನಡೆದಿದೆ.ಈ ಬಗ್ಗೆ ಯಾವುದೇ ರೀತಿಯ ತನಿಖೆ ನಡೆದಿಲ್ಲ.ಮುಖ್ಯ ಮಂತ್ರಿಗಳಿಂದ ಹಿಡಿದು ಕಾರ್ಮಿಕ ಕಲ್ಯಾಣ ಮಂತ್ರಿಗಳಿಗೆ,ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಬದಲಾವಣೆಯಾಗುತ್ತಿಲ್ಲ.ಕಲ್ಯಾಣ ಮಂಡಳಿಯನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ ಆದ್ದರಿಂದ ಆಗಸ್ಟ್ 5 ರಂದು ರಾಜ್ಯದ ಮೂಲೆ ಮೂಲೆಯಿಂದ ಕಾರ್ಮಿಕ ಸಂಘಟನೆಗಳು ಫ್ರೀಡಂ ಪಾರ್ಕನಲ್ಲಿ ಜಮಾವಣೆಗೊಂಡು ಸಬೆ ನಡೆಸಿ,ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಮುಖ್ಯ ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಲಾಗುವುದು.ಕಾರ್ಮಿಕ ಮುಖಂಡರು,ಕಾರ್ಮಿಕ ಸಂಘ,ಸಂಸ್ಥೆಯ ಮುಖಂಡರು ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವೇಳೆಯಲ್ಲಿ ಕೃಷ್ಣಮೂರ್ತಿ ಕಾರ್ಯದರ್ಶಿ
ಶ್ರೀ ಶಿರಡಿಸಾಯಿ ಕಟ್ಟಡ ಕಾರ್ಮಿಕರ ಸಂಘ ಪಾವಗಡ, ಗೌಡರಂಗಪ್ಪ,ಟಿ.ರಾಮಕೃಷ್ಣ, ಗಿರಿಸ್ವಾಮಿ,ರಾಮಾಂಜಿನಪ್ಪ ಇತರರು ಇದ್ದರು.
ವರದಿ-ಕೆ.ಮಾರುತಿ