ಬೆಂಗಳೂರು:2024-25ನೇ ಸಾಲಿನ ಪೂರ್ಣ ಪ್ರಮಾಣದ ಮುಂಗಡಪತ್ರವನ್ನು ಕೇಂದ್ರ ಸರ್ಕಾರದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಚುನಾವಣೆ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದುದರಿಂದ ಈ ಮುಂಗಡಪತ್ರಕ್ಕೆ ಹೊಸ ಮಹತ್ವ ದೊರೆತಂತಾಗಿದೆ. ಸಾಮಾಜಿಕ ನ್ಯಾಯ ಎಂಬ ಪ್ರಮುಖ ಅಂಶವನ್ನು ಮುಂದಿಟ್ಟುಕೊಂಡು ಈ ಮುಂಗಡ ಪತ್ರವನ್ನು ಮಂಡಿಸಿದ್ದಾರೆ ಎಂದರೆ ತಪ್ಪಾಗಲಾರದು.
ಈ ಮುಂಗಡ ಪತ್ರ ಎಲ್ಲರ ಕ್ಷೇಮಕ್ಕಾಗಿ,ಎಲ್ಲಾ ಪ್ರದೇಶ ಅಭಿವೃದ್ಧಿ ಹಾಗೂ ಆರ್ಥಿಕ ವಲಯಗಳ ಅಭಿವೃದ್ಧಿಗಾಗಿ ಮಂಡಿಸಿದ ಅತ್ಯಂತ ಜನಪ್ರಿಯ ಮುಂಗಡಪತ್ರವಾಗಿತ್ತು.
ಮಹಿಳೆಯರು,ಯುವಕರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮುಂಗಡಪತ್ರ ಒಳಗೊಂಡಿದೆ.
ಯುವಕರಿಗೆ ಉದ್ಯೋಗ ಒದಗಿಸುವ ಸಲುವಾಗಿ ಎ.ಬಿ.ಸಿ ಎಂಬ ಮೂರು ವಿವಿಧ ಪ್ರಕಾರಗಳನ್ನು ಮುಂಗಡಪತ್ರದಲ್ಲಿ ಘೋಷಿಸಲಾಗಿದೆ. ಕೃಷಿ ವಲಯದ ಪ್ರೋತ್ಸಾಹಕ್ಕೆ ವಿಶೇಷ ಅನುದಾನ ಘೋಷಿಸುವ ಮೂಲಕ ರೈತ ವಲಯಕ್ಕೆ ಹೊಸ ಚಿಗುರು ಮೂಡಿಸುವಂತೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಕೌಶಲ್ಯ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಿದ ವಿತ್ತ ಸಚಿವರು ಎಲ್ಲಾ ವರ್ಗದ ಜನರಿಗೆ ಕೌಶಲ ತರಬೇತಿ ನೀಡಿ ಅದನ್ನು ಉನ್ನತಿಕರಿಸಲು ಹಾಗೂ ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾದ ತರಬೇತಿ ನೀಡಲು ಕಾರ್ಯಕ್ರಮ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 3 ಕೋಟಿ ಮನೆಗಳ ನಿರ್ಮಾಣದ ಹೊಸ ಹೆಜ್ಜೆ ಇಟ್ಟಿರುವ ಸರ್ಕಾರ ಸುರಿಲ್ಲದ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಬುಡಕಟ್ಟಿನ ಜನರ ಅಭಿವೃದ್ಧಿಗೊ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ, ಕೈಗಾರಿಕಾ ವಲಯದ ಉತ್ತೇಜನಕ್ಕಾಗಿ MSME ಗಳಿಗೆ ಕ್ರೆಡಿಟ್ ಗ್ಯಾರಂಟಿ ,ಮುದ್ರಾ ಸಾಲದ ಮಿತಿಯನ್ನು ರೂಪಾಯಿ 10ಲಕ್ಷದಿಂದ 20ಲಕ್ಷಕ್ಕೆ ಏರಿಕೆ ಮಾಡುವ ಮೂಲಕ ಹೊಸ ಹೆಜ್ಜೆ ಇರಿಸಿದೆ, ಕಾರ್ಮಿಕರಿಗೆ ರೆಂಟಲ್ ಹೌಸಿಂಗ್ ಸ್ಕೀಮ್ ಅನುಷ್ಠಾನಗೊಳಿಸಲು ಬಜೆಟ್ ನಲ್ಲಿ ತೀರ್ಮಾನಿಸಿದೆ ಒಟ್ಟಾರೆ ಹೇಳುವುದಾದರೆ ಈ ಮುಂಗಡಪತ್ರ ರೈತ ಪ್ರೇಮಿ, ಮಹಿಳಾ ಸಬಲೀಕರಣ,ಯುವಕರಿಗೆ ಪ್ರೋತ್ಸಾಹ ನೀಡಿ ಹೊಸ ಬೆಳಕು ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಡಿ ಎಸ್ ಅರುಣ್ ಅವರು ಇಂದಿಲ್ಲಿ ವಿಶ್ಲೇಶಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.