ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪಾಲಕರ ಸಮ್ಮುಖದಲ್ಲಿ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ನಡೆಯಿತು.
2022-23 ಹಾಗೂ 2023-24 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಇಂಡಿ ನೋಡಲ್ ಅಧಿಕಾರಿಗಳಾದ ಶ್ರೀ ಬಸವರಾಜ್.ಎಂ.ಮದನಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 18-07-2024 ರಿಂದ 24-07-2024 ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಮಾಡಿ ಇಂದು ಶಾಲೆಯಲ್ಲಿ ಓದುವ ಮಕ್ಕಳ ಎಲ್ಲಾ ಪಾಲಕರನ್ನು ಸಭೆಗೆ ಕರೆಯಿಸಿ ವರದಿಯನ್ನು ಅವರ ಸಮ್ಮುಖದಲ್ಲಿ ಒಪ್ಪಿಸಲಾಯಿತು.
2022-23 ನೇ ಸಾಲಿನಿಂದ ಇಲ್ಲಿಯವರೆಗೂ ಶಾಲೆಯಿಂದ ಬಂದ ಅನುದಾನದ ಲೆಕ್ಕ ಹಾಗೂ ಸರಕಾರದಿಂದ ವಿವಿಧ ಯೋಜನೆಗಳಾದ ಸಮವಸ್ತ್ರ ವಿತರಣೆ,ಶೂ ಸಾಕ್ಸ್ ವಿತರಣೆ ಮತ್ತು ಪುಸ್ತಕಗಳ ವಿತರಣೆ ಬಗೆಗಿನ ಮಾಹಿತಿಯನ್ನು ಪೋಷಕರಿಗೆ ವಿವರಿಸಲಾಯಿತು.
ಶಾಲಾ ಮಕ್ಕಳ ಕಲಿಕೆಗೆ ಪೂರಕವಾಗುವಂತಹ ವಾತಾವರಣ ಶಾಲೆಯಲ್ಲಿ ಇದೆಯೋ ಇಲ್ಲವೋ, ಮಕ್ಕಳ ಸುರಕ್ಷತೆ ಇದೆಯೋ ಇಲ್ಲವೋ ಎಂಬುವುದರ ಬಗ್ಗೆ ಪರಿಶೋಧನೆ ನಡೆಸಲಾಯಿತು.ಶಾಲೆಯ ಕುಂದು ಕೊರತೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಶಾಲೆಯ ಡಿಜಿಟಲ್ ವ್ಯವಸ್ಥೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಾಲಕರಿಗೆ ನೀಡಲಾಯಿತು.
ಒಟ್ಟು 134 ಪ್ರಶ್ನೆಗಳಿಗೆ ಉತ್ತರವನ್ನು ಪಾಲಕರಿಗೆ ಒಪ್ಪಿಸಲಾಯಿತು.ಅದರ ಜೊತೆಗೆ ಸಾಧಕ ಬಾಧಕಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಎಂ.ಮದನಶೆಟ್ಟಿ,ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಜ್ಯೋತಿಬಾ ರಾಣೆ, ಮಹೇಶ್ ಅಗರಖೇಡ,ಶ್ರೀ ರಶೀದ್ ಪಟೇಲ್,
ಶ್ರೀ ಶಿವಕುಮಾರ್ ಅಂದೇವಾಡಿ,ಶ್ರೀ ಅರ್ಜುನ್ ಭಜಂತ್ರಿ, ಶ್ರೀ ಗಣಪತಿ ಹಾವಳಗಿ,ಶ್ರೀ ಶಂಕರ್ ಹಳಗುಣಕಿ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್ ಬಿ ರಾವಜಿ ಹಾಗೂ ಸಿಬ್ಬಂದಿ ವರ್ಗ ಮತ್ತು ಪಾಲಕರು ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ