ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯತಿಯಲ್ಲಿ “ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಫಾಗಿಂಗ್ ಮತ್ತು ಬೈ ಲಾರ್ವಾ ಸಿಂಪಡಣೆ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಜಾ ಚಿಕಾಗಸಿ ಅವರು ತಿಳಿಸಿದರು.ಡೆಂಗ್ಯೂ ಜ್ವರವು “ಈಡಿಸ್ “ಸೊಳ್ಳೆಗಳಿಂದ ಹರಡುತ್ತದೆ ಇದು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ ಮತ್ತು ಬೆಚ್ಚಗಿನ ಆರ್ದ ವಾತಾವರಣದಲ್ಲಿ ಬೆಳೆಯುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಪ್ರವೀಣ್ ಕೂಟಗನಕೇರಿ ಅವರು ತಿಳಿಸಿದರು.
ಸಾರ್ವಜನಿಕರು ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೂವಿನ ಕೊಂಡಾಳೆ,ನೀರು ಶೇಖರಿಸಿಟ್ಟ ಬಕೆಟ್ ಗಳಲ್ಲಿ , ಟೈರ್‌ಗಳಲ್ಲಿ ,ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಕಾಂತ್ ಹಡಲಸಂಗ ಅವರು ಎಚ್ಚರಿಕೆ ನಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಣ್ಣ ಕಲ್ಲೂರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಉಮೇಶ್ ನಾಟೀಕಾರ,
ಸದಸ್ಯರಾದ ಪರಸು ಬಿಸನಾಳ,
ಮಾಸಿಮ ವಾಲಿಕಾರ್,
ಅರ್ಜುನ್ ಚಟ್ಟರಕಿ,ಪರಸು ಬರಮಣ್ಣನವರ್,
ಸಿದ್ದು ಹತ್ತಳ್ಳಿ , ಮಹಮ್ಮದ್ ದಡೆದ್,
ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳಾದ ಶ್ರೀಮತಿ ಟಿ ಹೆಚ್ ಪಿಂಜಾರ, ಬಿ ಎಸ್ ಬಿರಾದಾರ್.
ಶ್ರೀಮತಿ ಆರ್ ಎಸ್ ಬಿರಾದರ್ ಇತರರು ಹಾಜರಿದ್ದರು.
ವರದಿ:ಲೋಹಿತಕುಮಾರ ರೂಗಿ