ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಲವರಹಳ್ಳಿ ಕೆ ರಂಗನಹಳ್ಳಿ ಮಾರ್ಗ ಮಧ್ಯದಲ್ಲಿ ಚಾಲಕನ ಜಾಗರೂಕತೆಯಿಂದ ನಡೆಯುವ ದೊಡ್ಡ ದುರಂತ ತಪ್ಪಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿರಾ ಘಟಕದಿಂದ ಬಸ್ಸು ಶಿರಾ ನಿಲ್ದಾಣಕ್ಕೆ ಹೋಗಿ ಅಲ್ಲಿಂದ 8,30 ಕ್ಕೆ ಸಿರಾ ಬಸ್ ನಿಲ್ದಾಣದಿಂದ ತಾವರೆಕೆರೆ ಮಾರ್ಗವಾಗಿ ಮಸರಕುಂಟೆ ಕೆ ರಂಗನಹಳ್ಳಿ ಕಳವರಲ್ಲಿ ಗೇಟ್ ಹೊಸೂರು ಅಲ್ಲಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವ ಸಂದರ್ಭದಲ್ಲಿ ಕಳವನಹಳ್ಳಿ.ಕೆ ರಂಗನಹಳ್ಳಿ ಮಾರ್ಗ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಜಮೀನಿಗೆ ಇಳಿದಿದೆ, ಅಷ್ಟರಲ್ಲಿ ಎಚ್ಚೆತ್ತುಕೊಂಡ ಚಾಲಕ ಜಮೀನಿನ ಪಕ್ಕದಲ್ಲಿಯೇ ಬಸ್ಸನ್ನು ನಿಲ್ಲಿಸಿದರು. ತಕ್ಷಣ ಎಚ್ಚೆತ್ತುಕೊಂಡ ನಿರ್ವಾಹಕ ಕಂಡಕ್ಟರ್ ಬಸ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಬೇಗ ಬೇಗನೆ ಇಳಿಸಿದರು ಬಸ್ಸಿನ ತುಂಬಾ ಶಾಲಾ ಕಾಲೇಜು,ವಿದ್ಯಾರ್ಥಿಗಳು ಇದ್ದರು ಅವರಿಗೆ ಯಾವುದೇ ಅನಾಹುತವಾಗಲಿ ಗಾಯಗಳಾಗಲಿ ಆಗದೆ ಮುನ್ನೆಚ್ಚರಿಕೆ ವಹಿಸಿ ಈ ಅನಾಹುತವನ್ನು ತಪ್ಪಿಸಿದ್ದಾರೆ.ಅಲ್ಲಿದ್ದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಹಾಗೂ ಸಾರ್ವಜನಿಕರು ಅಲ್ಲಿಗೆ ಬಂದರು ನೋಡಿ ನಮ್ಮ ಊರಿನ ಅಕ್ಕ-ಪಕ್ಕದ ವಿದ್ಯಾರ್ಥಿಗಳ ಸಾರ್ವಜನಿಕರ ಪ್ರಯಾಣಿಕರ ಜೀವಕ್ಕೆ ಏನೋ ತೊಂದರೆ ಆಗದೆ.ಈ ಅನಾಹುತವನ್ನು ತಪ್ಪಿಸಿದ ಚಾಲಕ,ನಿರ್ವಾಹಕರಿಗೆ ಸಮಾಧಾನ ಹೇಳಿ ಅವರಿಗೆ ಕುಡಿಯಲು ನೀರು ಕೊಟ್ಟು ಧನ್ಯವಾದಗಳನ್ನು ತಿಳಿಸಿದರು.
ವರದಿಗಾರರು ಕೊಟ್ಟ ಕರಿಯಣ್ಣ