ಗುರುಮಿಟ್ಕಲ್ ತಾಲೂಕಿನ ಕೊಂಕಲ್ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ದಿ ಅಸೋಸಿಯೇಷನ್ ಪೀಪಲ್ ವಿತ್ ದಿಸೆಬಿಲಿಟಿ ಸಂಸ್ಥೆ” ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ. ಅಂಗವಿಕಲರು ಬಳಸುವ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮಕ್ಕೆ ಡಾ.ಉದಯ್ ಕುಮಾರ್ ಆರೋಗ್ಯ ಅಧಿಕಾರಿಗಳು ಚಾಲನೆ ನೀಡಿ ಮಾತನಾಡಿದ ಅವರು ” ಅಂಗವಿಕಲರಿಗೆ ಅನುಕಂಪ ತೋರಿಸುವುದಕ್ಕಿಂತ ಅವರಿಗೆ ಅವಕಾಶ ನೀಡುವುದು ಅವಶ್ಯಕವಾಗಿದೆ,ಎಂದು ತಿಳಿಸಿದರು. ಅಂಗವಿಕಲರ ಹಾರೈಕೆ ಮತ್ತು ಶ್ರೀಯೊಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎ.ಪಿ.ಡಿ ಸಂಸ್ಥೆಯ ಇಂತಹ ಸಮಾಜಮುಖಿ ಕಾರ್ಯಗಳು ಸದಾ ಕಾಲ ಮುಂದುವರಿಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಹಮ್ಮದ್ ಕಾಸಿಂ ಕೊಂಕಲ್ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಹಾಗೂ ಎ.ಪಿ.ಡಿ ಸಂಸ್ಥೆಯ ತಾಲೂಕ ಸಂಯೋಜಕರಾದ ವಿರುಪಾಕ್ಷಿ ಮಾಲಿ ಪಾಟೀಲ್ ಹಾಗೂ ಡಾ. ರಾಜೇಶ್ವರಿ ,ಶಿಲ್ಪ ,ಮಲ್ಲಿಕಾರ್ಜುನ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು. ಎ.ಎಫ್.ಓ.ಆರ್ಟಿಫಿಷಿಯಲ್ ಲಿಂಬ್, ಸ್ಟಾಂಡಿಗ್ ಪ್ರೇಮ್, ಸಿ.ಪಿ ಚೇರ್ ಇನ್ನಿತರ ಸಾಧನಗಳನ್ನು ವಿತರಿಸಲಾಯಿತು.
ವರದಿ: ಶಿವರಾಜ ಸಾಹುಕಾರ್ ವಡಗೇರಾ