ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕ್ಲಸ್ಟರ್ ಎಂ ದಾಸರಹಳ್ಳಿ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು.
ತಾಲೂಕು ವೈದ್ಯ ಅಧಿಕಾರಿಗಳ ಕಚೇರಿ ಶಿರಾ
ಪ್ರಾಥಮಿಕ ಆರೋಗ್ಯ ಕೇಂದ್ರ ಮದಲಲೂರು ಇವರ ವತಿಯಿಂದ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಶಾಲೆಯ ವಿದ್ಯಾರ್ಥಿಗಳಿಗೆ ಮಲೇರಿಯಾ,ಡೆಂಗ್ಯೂ ನಿಯಂತ್ರಣ ಸೊಳ್ಳೆಗಳು ಹೇಗೆ ಉತ್ಪತಿ ಆಗುತ್ತವೆ ಎಂಬ ಮಾಹಿತಿಯನ್ನು ಹಾಗೂ ಮಳೆಗಾಲದಲ್ಲಿ ಸ್ವಚ್ಛತೆಯಿಂದ ಹೇಗೆ ಇರಬೇಕು ಎಂದು ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಮದಲುರು ಕ್ಲಸ್ಟರ್ ಎಂ ದಾಸರಹಳ್ಳಿ ಶಾಲಾ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮದಲೂರು ಕ್ಲಸ್ಟರ್ ಎಂ ದಾಸರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ರತ್ನಮ್ಮ ಬಿ ಎಂ ಹಾಗೂ ಜಲಜಾ ಸಹ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆ ರೇಣುಕಮ್ಮ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು ವೆಂಕಟೇಶ್ ಸರ್ ಮತ್ತು ಕೊಟ್ಟ ಕರಿಯಣ್ಣ ಅತಿಥಿ ಶಿಕ್ಷಕರು ಹಾಜರಿದ್ದರು.
ವರದಿಗಾರರು ಕೊಟ್ಟ ಕರಿಯಣ್ಣ