ಚಾಮರಾಜನಗರ:ಕಾಡಾನೆಗಳು ದಿನನಿತ್ಯ ರೈತರ ಜಮೀನು ಸೇರಿದಂತೆ ಗ್ರಾಮದ ಮನೆಗಳ ಮುಂಭಾಗವೇ ಬಂದು ಆತಂಕ ಸೃಷ್ಟಿ ಮಾಡಿದೆ ಅರಣ್ಯ ಅಧಿಕಾರಿಗಳು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಬೈಲೂರು ಗ್ರಾಮ ಪಂಚಾಯಿತಿ ಸದಸ್ಯ ಉಮಾಮಹೇಶ್ವರಿ ಆರೋಪಿಸಿದ್ದಾರೆ.
ಹನೂರು ತಾಲೂಕಿನ ಲೋಕ್ಕನಹಳ್ಳಿ ಹೋಬಳಿಯ ಗಡಿಗ್ರಾಮ ಚಿಕ್ಕ ಹುಣಸೆಪಾಳ್ಯ ಗ್ರಾಮದ ಶಿವ ಮಾದಪ್ಪ ಅವರ ಮನೆ ಮುಂಭಾಗ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಕಾಡಾನೆಗಳು ಮನೆಯ ಮುಂಭಾಗವೇ ಬಂದು ಗ್ರಾಮದಲ್ಲಿ ನಿವಾಸಿಗಳಿಗೆ ಭಯದ ವಾತಾವರಣ ಉಂಟು ಮಾಡಿದೆ ಎಂದು ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಪ್ರಾಣ ಹಾನಿ ಸಂಭವಿಸಿದರೆ ಯಾರು ಹೊಣೆ :
ಕಳೆದ ಒಂದು ವಾರದಿಂದ ಚಿಕ್ಕ ಹುಣಸೆಪಾಳ್ಯ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ಕಾಡಾನೆಗಳು ನುಗ್ಗಿ ರೈತರು ಸಾಲ ಮಾಡಿ ತಮಿಳುನಾಡಿನಿಂದ ತಂದು ಬಿತ್ತನೆ ಮಾಡಿರುವ ಬೆಳ್ಳುಳ್ಳಿ ಆಲೂಗಡ್ಡೆ ಮತ್ತು ಎಲೆಕೋಸು ವಿವಿಧ ತರ ಬೆಳೆಗಳನ್ನು ಕಾಡಾನೆಗಳು ತಿಂದು ತುಳಿದು ನಾಶಗೊಳಿಸಿದೆ ಜೊತೆಗೆ ಕೃಷಿ ಚಟುವಟಿಕೆಯ ಪರಿಕರಗಳು ಸಹ ಹಾಳಾಗಿದೆ ಕೂಡಲೇ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯಾಧಿ ಕಚೇರಿಗೆ ಭೇಟಿ :
ಬಿ ಆರ್ ಟಿ ವಲಯ ಅರಣ್ಯಾಧಿ ಕಚೇರಿಗೆ ರೈತರು ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಡಾನೆಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದು ರೈತರು ಜಮೀನುಗಳಲ್ಲಿ ಬೆಳೆ ಹಾಳು ಮಾಡುವುದರ ಜೊತೆಗೆ ರಾತ್ರಿ ಗ್ರಾಮಕ್ಕೆ ಕಾಡಾನೆಗಳು ಬಂದಿರುವುದರಿಂದ ಗ್ರಾಮದಲ್ಲಿ ಯಾರಾದರೂ ಕಾಡಾನೆಗೆ ಬಲಿಯಾದರೆ ಯಾರು ಹೊಣೆ ಅಧಿಕಾರಿಗಳು ಕಾಡು ಪ್ರಾಣಿಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಅರಣ್ಯಾಧಿಕಾರಿ ಭರವಸೆ:
ಬಿ ಆರ್ ಟಿ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಮಾತನಾಡಿ ಕಾಡಾನೆಗಳು ಬರುತ್ತಿರುವ ಗುಂಡಿಮಾಳ ರಸ್ತೆಯ ಗೇಟ್ ಅನ್ನು ಸಂಜೆ ಆರರಿಂದ ಬೆಳಗ್ಗೆ ಆರರವರೆಗೆ ಬಂದ್ ಮಾಡುವ ಮೂಲಕ ಬಿ ಆರ್ ಟಿ ಹಾಗೂ ಮಲೆ ಮಾದೇಶ್ವರ ವನ್ಯ ಧಾಮದ ಅರಣ್ಯ ಸಿಬ್ಬಂದಿ ಜಂಟಿಯಾಗಿ ಕಾಡಾನೆಗಳನ್ನು ತಡೆಗಟ್ಟಲು ಗಸ್ತು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ವರದಿ ಉಸ್ಮಾನ್ ಖಾನ್