ಹನೂರು: ಗುರುವಾರದಂದು ಪಟ್ಟಣದಲ್ಲಿ ಬೃಹತ್ ಬೆಂಗಳೂರಿನ ನಿರ್ಮಾತೃ ಕೆರೆಗಳ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿರುವ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು ಹನೂರು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಶಾಖ ಮಠದ ಸೋಮೇಶ್ವರ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದ ಅವರು ನಾಡನ್ನು ಕಟ್ಟಿದ ಕೆಂಪೇಗೌಡ ಜಯಂತಿ ರಾಜ್ಯದ ಮೂಲೆ ಮೂಲೆಯಲ್ಲಿ ಆಚರಣೆ ಮಾಡುತ್ತಿದ್ದೇವೆ ಜಯಂತಿಗಳು ನಡೆಯುತ್ತಿವೆ ಎಂದರೆ ಅದರ ಹಿಂದೆ ವಿಶೇಷವಾದ ಭಾವನೆಗಳು ಇರುತ್ತವೆ ಜಯಂತಿ ಆಚರಣೆ ಮಾಡುವ ನಾವು ಅವರ ಬದುಕು ಅವರ ಹೊರಾಟವನ್ನು ನಾವು ಅನುಸರಿಸಬೇಕು ನಮ್ಮ ಪೂರ್ವಿಕರು ಕೊಟ್ಟಿರುವಂತ ಹಬ್ಬಗಳು ಜಯಂತಿಗಳನ್ನು ಮಾಡುವುದರಿಂದ ನಮ್ಮಲ್ಲಿ ಒಗ್ಗಟ್ಟು ಬೆಳೆಯುತ್ತದೆ ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಎಲ್ಲಾ ನಾಯಕರುಗಳು ಕೂಡ ನಾಡಿಗೆ ಅತ್ಯಂತ ಮರೆಯಲಾಗದ ಕೊಡುಗೆಯನ್ನು ಕೊಟ್ಟಿದ್ದಾರೆ, ರಾಷ್ಟ್ರಕವಿ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದಾರೆ ಅದನ್ನು ಅನುಸರಿಸುತ್ತ ಕೆಂಪೇಗೌಡರು ಕಟ್ಟಿದ್ದ ಬೃಹತ್ ಬೆಂಗಳೂರು ಇಂದು ಸರ್ವ ಜನಾಂಗದ ಜನರಿಂದ ಕಂಗೊಳಿಸುತ್ತಿದೆ ನಮ್ಮ ಪೂರ್ವಿಕರುಗಳು ಅವರದೇ ಆದ ವಿಶೇಷ ಕೊಡುಗೆಯನ್ನು ನಾಡಿಗೆ ಕೊಟ್ಟಿದ್ದಾರೆ, ಅದನ್ನು ನಾವು ಅನುಸರಣೆ ಮಾಡುವ ಮೂಲಕ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವಂತವರಾಗಬೇಕು ನಮ್ಮ ಮಕ್ಕಳಿಗೆ ಎಲ್ಲಾ ನಮ್ಮ ಪೂರ್ವಿಕರ ಇತಿಹಾಸ ಚರಿತ್ರೆಯನ್ನು ತಿಳಿಸುವ ಜೊತೆಗೆ ಜೀವನದಲ್ಲಿ ನಗು ನಗುತ ಬಾಳಬೇಕು ಭಗವಂತ ಕೊಟ್ಟಿರೋ ಜೀವನ ಅಮೂಲ್ಯವಾದದ್ದು ಅದನ್ನು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಸದಾ ಯೋಚನೆ ಮಾಡೋಣ ಮಾನವೀಯತೆಯನ್ನು ಜಗತ್ತಿಗೆ ಸಾರೋಣ ಎಂದು ಹೇಳಿ ಹನೂರಿನ ಯುವಕರು ಒಳ್ಳೆಯ ಸಂಘಟಿತರಾಗಿದ್ದೀರಾ ಶುಭವಾಗಲಿ ನಿಮಗೆ ಎಂದು ಹಾರೈ ಸಿದರು.ವೇದಿಕೆ ಕಾರ್ಯಕ್ರಮ ಮುಗಿದ ನಂತರ ಅಜ್ಜಿಪುರ ಮುಖ್ಯರಸ್ತೆಯಿಂದ ಹೊರಟು ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೆಳ್ಳಿರಥದ ಮೂಲಕ ಕೆಂಪೇಗೌಡರ ಪ್ರತಿಮೆ ಮೆರವಣಿಗೆ ಮಾಡಲಾಯಿತು ಕಾರ್ಯಕ್ರಮಕ್ಕೆ ವಿವಿಧ ಕಲಾ ತಂಡಗಳಾದ ಮಳವಳ್ಳಿ ಮೂಲದ ದುರ್ಗ ಬಾಲಕಿಯರ ದೊಣ್ಣೆ ವರಸೆ ತಂಡ,ಶ್ರೀ ವೀರಗಾಸೆ ಕನ್ನಡ ಕಲಾ ತಂಡ,ಉಡುಪಿ ಮೂಲದ ಶನೇಶ್ವರ ಚಂಡೆ ಬಳಗ ತಂಡಗಳು ಕಾರ್ಯಕ್ರಮಕ್ಕೆ ಮೆರುಗು ತಂದವು ಮೆರವಣಿಗೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಕನ್ನಡದ ಶಾಲು ತೊಟ್ಟು ಪಾಲ್ಗೊಂಡಿದ್ದರು ಹನೂರು ಪಟ್ಟಣದ ಹಾಗು ಸುತ್ತ ಮುತ್ತಲ ಗ್ರಾಮದ ಒಕ್ಕಲಿಗ ಮತ್ತು ವಿವಿಧ ಸಮುದಾಯದ ಮುಖಂಡರುಗಳು ಹಾಗೂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.ಮೆರವಣಿಗೆ ಹಿನ್ನೆಲೆ ಕೆಲ ಕಾಲ ವಾಹನ ಸವಾರರಿಗೆ ಅಡಚಣೆ ಉಂಟಾಯಿತು ಮಳೆಯನ್ನು ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ಎಂ ಆರ್ ಮಂಜುನಾಥ್ ಅವರು ದಾರಿಯುದ್ಧಕ್ಕೂ ಮೆರವಣಿಗೆ ಜೊತೆಗೆ ಹೆಜ್ಜೆ ಹಾಕಿದರೂ ಮಾಜಿ ಶಾಸಕರುಗಳಾದ ಆರ್ ನರೇಂದ್ರ, ಪರಿಮಳ ನಾಗಪ್ಪ, ತಾಲೂಕು ಅರೋಗ್ಯಧಿಕಾರಿ ಡಾ ಪ್ರಕಾಶ್,ಇಓ ಉಮೇಶ್, ದತ್ತೆಶ್ ಕುಮಾರ್,ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರ, ಮರಿಸ್ವಾಮಿ, ರಾಜೇಗೌಡ,ಪ್ರವೀಣ್ ಕುಮಾರ್,ಮಂಜೇಶ್ ಗೌಡ, ಗಿರೀಶ್,ಹರೀಶ್ ಕುಮಾರ್, ಆನಂದ್ ಕುಮಾರ್,ಒಕ್ಕಲಿಂಗ ಸಂಘದ ನಿರ್ದೇಶಕರು ಮಂಜುನಾಥ್,ವೆಂಕಟೇಗೌಡ,ನವನಿತ್ ಗೌಡ, ಗಿರೀಶ್,ಇನ್ನೂ ಹಲವಾರು ಮುಖಂಡರುಗಳು ಇದ್ದರು.
ವರದಿ: ಉಸ್ಮಾನ್ ಖಾನ್