ಪಾವಗಡ. ಜು 26 :ಕಾರ್ಗಿಲ್ ಬರೀ ಯುದ್ಧವಲ್ಲ. ಭಾರತದ ಕಿಚ್ಚು ಮತ್ತು ನಮ್ಮ ಸೈನಿಕರ ಅಸೀಮ ಸಾಹಸವನ್ನು ವಿಶ್ವಕ್ಕೆ ಪ್ರದರ್ಶಿಸಿದ ಅಸಾಮಾನ್ಯ ವಿದ್ಯಮಾನ. ಕಾರ್ಗಿಲ್ ವಿಜಯಕ್ಕಾಗಿ ನೂರಾರು ಸೈನಿಕರು ಬಲಿದಾನ ಮಾಡಬೇಕಾಯಿತು ಈ ತ್ಯಾಗ, ಸೇವೆಯನ್ನು ಸ್ಮರಿಸಿ ಕಾರ್ಗಿಲ್ ವಿಜಯ ದಿನ ಆಚರಿಸಲಾಗುತ್ತಿದೆ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ತಿಳಿಸಿದರು.
ಪಾವಗಡ ಪಟ್ಟಣದ ಶಿಕ್ಷಣ ಇಲಾಖೆ ಕಚೇರಿ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಿ ಮಾತನಾಡಿ ಭಾರತದ ಸೇನೆ ಆಪರೇಷನ್ ವಿಜಯ್ ಮೂಲಕ ಶತ್ರು ರಾಷ್ಟ್ರವನ್ನು ಹೆಡೆಮುರಿ ಕಟ್ಟಿದ ಐತಿಹಾಸಿಕ ದಿನ ಇಂದು ನಾವೆಲ್ಲರೂ ಕೆಚ್ಚೆದೆಯ ಸಮರ ಸಾಹಿಸಿಗಳ ಸ್ಮರಿಸೋಣ ನಮ್ಮ ಹೆಮ್ಮೆಯ ವೀರ ಯೋಧರಿಗೆ ನಮಿಸೋಣ ಎಂದು ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಬಗ್ಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ವಿವರಿಸಿದರು.
ಮುಖ್ಯೋಪಾಧ್ಯಾಯರು ಗಂಗಪ್ಪರವರು ಮಾತನಾಡುತ್ತಾ ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಪಾಠ ಕಳಿಸಿದ ದಿನ, ರಾಷ್ಟ್ರಕ್ಕಾಗಿ ಪ್ರಾಣಾತ್ಯಾಗ ಮಾಡಿದ ವೀರ ಯೋಧರನ್ನು ಗೌರವಿಸುವ ವಿಶೇಷ ಹಬ್ಬ ಕಾರ್ಗಿಲ್ ವಿಜಯ್ ದಿವಸ್ ಎಂದು ಸೈನಿಕರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಸತ್ಯ ಲೋಕೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಶಶಿಕಲಾ, ಶಾಲಾ ಮುಖ್ಯ ಶಿಕ್ಷಕರಾದ ಗಂಗಪ್ಪ, ವೆಂಕಟ ನಾಯ್ಕ್, ಆನಂದಪ್ಪ, ದೈಹಿಕ ಶಿಕ್ಷಕರಾದ ನಾಗಬುಷನ,ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಭಾರತಾಂಬೆಯ ಬಾವುಟ ಎತ್ತಿ ಹಿಡಿದು ಕಾರ್ಗಿಲ್ ವಿಜಯ್ ದಿವಸ ಆಚರಿಸಿದರು.
ವರದಿ-ಕೆ.ಮಾರುತಿ