ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ವಿಜಯನಗರ/ಕೊಟ್ಟೂರು: ಶಿಕಾರಿಪುರ ಆಗಿದ್ದ ಈ ಊರು ಕೊಟ್ಟೂರೇಶ್ವರ ಸ್ವಾಮಿ ಬಂದು ಇಲ್ಲಿ ನೆಲೆಸಿದ ಮೇಲೆ ಕೊಟ್ಟೂರು ಎಂದು ಪ್ರಖ್ಯಾತಿ ಪಡೆದಿದೆ ಕೊಟ್ಟೂರೇಶ್ವರ ಸ್ವಾಮಿ ಇರುವುದರಿಂದ ಈ ಕ್ಷೇತ್ರವು ಪುಣ್ಯಕ್ಷೇತ್ರ ಎಂದು ಹೆಸರುವಾಸಿಯಾಗಿದೆ ಆದರೆ ತೇರು ಬೀದಿಯ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿದೆ ಇದರಿಂದ ದುರ್ವಾಸನೆ ಬೀರುತ್ತಿದೆ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಪಟ್ಟಣ ಪಂಚಾಯ್ತಿಯ ಕಸದ ಗಾಡಿಗಳಲ್ಲಿ “ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ ಎಂದು ಹಾಡನ್ನು ಹಾಕುತ್ತಾ ಜನರನ್ನು ಎಚ್ಚರಗೊಳಿಸುತ್ತಾರೆ ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿಡಿ” ಎಂದು ಆದರೆ ಪ್ರತಿದಿನ ಸಾವಿರಾರು ಮಂದಿ ಓಡಾಡುವ ಕೊಟ್ಟೂರು ತರಕಾರಿ ಮಾರ್ಕೆಟ್ ಕೆಸರು ಗದ್ದೆಯಾಗಿದರೂ ಇದನ್ನು ಸ್ವಚ್ಛ ಮಾಡುವುದು ಆಗುತ್ತಿಲ್ಲ ಉದಾಹರಣೆಗೆ ಮಾಡುವುದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅನ್ನೋ ತರ ಇದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ರಾಜ್ಯದಂತ ಡೆಂಗ್ಯೂ ಜ್ವರದಿಂದ ಜನರು ತತ್ತರಿಸಿ ರೋಸಿ ಹೋಗಿದ್ದಾರೆ ಈ ರೀತಿ ವ್ಯವಸ್ಥೆ ಇದ್ದರೆ ಜನರು ಕಾಯಿಲೆಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಇನ್ನಾದರೂ ಕೊಟ್ಟೂರು ತರಕಾರಿ ಮಾರ್ಕೆಟ್ ಸ್ವಚ್ಛ ಮಾಡಬೇಕು ಇದರಿಂದ ಅನೇಕ ತೊಂದರೆಗಳು ಉಂಟಾಗಿವೆ ಕೆಸರು ಗದ್ದೆಯಲ್ಲಿ ಚಿಕ್ಕ ಮಕ್ಕಳು ಅಜ್ಜ ಅಜ್ಜಿಯರು ಬಿದ್ದಿರುವ ಎಷ್ಟೋ ಘಟನೆಗಳು ನಡೆದಿವೆ ಬೈಕ್ ಸವಾರರು ಬಿದ್ದಿರುವ ಸಂಗತಿಗಳು ಇವೆ ಇದನ್ನು ಅನುಭವಿಸಿದ ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಇಡೀ ಶಾಪವನ್ನು ಹಾಕಿದರು.ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸರಿಪಡಿಸಿ ಜನರು ಓಡಾಡುವುದು ಅನುಕೂಲ ಮಾಡಬೇಕು ಎಂದು ನಮ್ಮ ಪತ್ರಿಕೆಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ವರದಿ. ವೈ. ಮಹೇಶ್ ಕುಮಾರ್ ಕೊಟ್ಟೂರು