ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿನ ಧರ್ಮಾ ಜಲಾಶಯ ವೀಕ್ಷಣೆಗೆಂದು ತೆರಳಿದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು, ಇದರಲ್ಲಿ ಓರ್ವ ಯುವಕನನ್ನು ರಕ್ಷಿಸಲಾಗಿತ್ತು,ಆದರೆ ಮುಡಸಾಲಿ ಗ್ರಾಮದ ಶ್ರೀನಾಥ್ ಹರಿಜನ್ ಎಂಬ ಯುವಕ ಪತ್ತೆ ಆಗಿರಲಿಲ್ಲ, ಗುರುವಾರ ಸತತ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಶ್ರೀನಾಥ್ ಹರಿಜನ್ ಮೃತದೇಹ ಸಿಕ್ಕಿದ್ದು, ದುರ್ಘಟನೆ ಯಿಂದ ಅಪಾಯ ಮುನ್ಸೂಚನೆ ಅರಿತ ತಾಲೂಕಾಡಳಿತ ಮುಂಜಾಗ್ರತಾ ಕ್ರಮವಾಗಿ ಧರ್ಮಾ ಜಲಾಶಯಕ್ಕೆ ಪ್ರವಾಸಿಗರು ಪ್ರವೇಶ ಮಾಡುವುದನ್ನು ನಿರ್ಭಂದ ವಿಧಿಸಿ, ಆದೇಶ ಹೊರಡಿಸಿದೆ.ದುರ್ಘಟನೆ ತಡೆಯಲು ಮುಂಡಗೋಡದ ಪ್ರಮುಖ ಜಲಾಶಯಗಳಿಗೆ ಕಾವಲುದಾರರನ್ನು (ಸೆಕ್ಯೂರಿಟಿ) ನೇಮಿಸುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹ ಮಾಡುತ್ತಿದ್ದಾರೆ.ಇನ್ನಾದರೂ ಜಲಮೂಲಗಳ ಬಳಿ ಕುಚೇಷ್ಟೆ ಮಾಡಿ ಪ್ರಾಣ ಹಾನಿ ಮಾಡಿಕೊಳ್ಳುವುದನ್ನು ಪ್ರವಾಸಿಗರು ಬಿಡಬೇಕಿದೆ.
