ಪಾವಗಡ: ಮನೆಯ ಹತ್ತಿರ ಮೆಟ್ಟಿಲುಗಳನ್ನು ನಿರ್ಮಿಸಿ ಕೆಲಸ ಮಾಡಲಾಗುತ್ತಿದ್ದು ಖಾಸಗಿ ವ್ಯಕ್ತಿಗಳು ಬಂದು ಮೆಟ್ಟಿಲುಗಳನ್ನು ಹೊಡೆದು ಹಾಕಿರುತ್ತಾರೆ ಎಂದು ಪುಟ್ಟಸ್ವಾಮಿಯವರು ಆರೋಪ ಮಾಡಿದ್ದಾರೆ.
ಇದರ ಬಗ್ಗೆ ರೈನ್ ಗೇಜ್ ಬಡವಾಣೆಯಲ್ಲಿ ವಾಸವಾಗಿರುವ ಮುಸ್ಲಿಂ ಜನಾಂಗದ ಟಿಪ್ಪು ದುಷ್ಮಂಜು ತಿಮ್ಮಪ್ಪರವರು ಸೇರಿಕೊಂಡು ಇವರ ಜೊತೆ ಪುರಸಭೆಯ ಸ್ವೀಪರ್ ಗಳನ್ನು ಕರೆದುಕೊಂಡು ಬಂದು ಸಿಮೆಂಟ್ ನಲ್ಲಿ ನಿರ್ಮಿಸಿದ ಮೆಟ್ಟಿಲುಗಳನ್ನು ಹೊಡೆದು ಹಾಕಿರುತ್ತಾರೆ ಇದರಿಂದ ನನಗೆ ತುಂಬಲಾರದ ನಷ್ಟವಾಗಿರುತ್ತದೆ ಎಂದು ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆ ಮುಖಂಡರಾದ ಪುಟ್ಟಸ್ವಾಮಿ ಮಾತನಾಡಿ ನಮ್ಮ ಮನೆ ಹತ್ತಿರ ನಿರ್ಮಾಣ ಮಾಡಿದ ಮೆಟ್ಟಿಲುಗಳನ್ನು ಹೊಡೆದು ಹಾಕಿರುತ್ತಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.