ಚಿತ್ತಾಪುರ:ತಹಶೀಲ್ದಾರರ ಕಚೇರಿ ಆವರಣದಲ್ಲಿ ಶರಣ ನಿಜಸುಖಿ ಹಡಪದ ಅಪ್ಪಣ್ಣ ನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ಗ್ರೇಡ್-೨ ತಹಶೀಲ್ದಾರರ ಮತ್ತು ಸಮಾಜದ ಭಾಂಧವರು ಸಮ್ಮುಖದಲ್ಲಿ ಚಾಲನೆ ನೀಡಿ ಚಿತ್ತಾಪುರ ನಗರದ ಪ್ರಮುಖ ಬೀದಿ ಬೀದಿಗಳನ್ನು ಭಾವಚಿತ್ರದ ರಥದ ವಾಹನವನ್ನು ಸಂಚಾರ ಮಾಡುತ್ತಾ ನಾಗಾವಿ ಚೌಕ್, ಬಂಜಾರ್, ಭುವನೇಶ್ವರಿ ಚೌಕ್ ಅಂಬೇಡ್ಕರ್ ಚೌಕ್, ಬಸವೇಶ್ವರ ಚೌಕ್, ಮೂಲಕ ಅಂಬಿಗರ ಚೌಡಯ್ಯ ನವರ ಸಮುದಾಯ ಭವನ ತಲುಪಿತು,ಗ್ರೇಡ್-ತಹಶೀಲ್ದಾರರ ಮಾತನಾಡಿ ಮಹಾಶರಣ ಹಡಪದ ಅಪ್ಪಣ್ಣ ಅವರ ವಚನಗಳನ್ನು ಸಮಾಜದ ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಬೇಕು ಗ್ರೇಡ್ ೨ ತಹಶಿಲ್ದಾರ ರಾಜಕುಮಾರ ಮರತೂರಕರ್ ಅವರು ಹೇಳಿದರು.
ನಗರದ ಅಂಬಿಗರ ಚೌಡಯ್ಯ ಸಮುದಾಯ. ಭವನದಲ್ಲಿ ತಾಲೂಕು ತಹಶಿಲ್ದಾರರ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ತಾಪುರ ತಾಲೂಕಿನ ಹಡಪದ ಅಪ್ಪಣ್ಣ ಸಮಾಜ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾದ ಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಉದ್ಘಾಟಿಸಿ ತಾಲೂಕು ದಂಡಾಧಿಕಾರಿಗಳು ಮಾತನಾಡಿದರು.
ಶಿವಶರಣರ ಜಯಂತಿಗಳಲ್ಲಿ ಮಕ್ಕಳಿಗೆ ಆ ಮಹಾಶರಣರ ವಚನಗಳನ್ನು ಅರ್ಥೈಸುವ ಕೆಲಸಗಳೊಂದಿಗೆ ಸರ್ಕಾರದ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಡಪದ ಅಪ್ಪಣ್ಣ ಸಮುದಾಯವು ಚಿಕ್ಕದಾದರೂ ಸಹ ಜಯಂತಿ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಆಗಮಿಸಿದ್ದು ಸಂತಸ ತಂದಿದೆ ಎಂದರು.
ನಗರದಲ್ಲಿ
ಪೂಜ್ಯ ಶ್ರೀ ಷ.ಬ್ರ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ,ಜಾತಿ, ಮತ ಪಂಥ ತೊಡೆದು ಹಾಕಲು ಹೋರಾಟ ನಡೆಸಿದ ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು ಹಡಪದ ಅಪ್ಪಣ್ಣ. ಬಸವಣ್ಣನವರ ಮಹಾಮನೆಯ ಮುಖ್ಯಸ್ಥರಾಗಿ ಸಹ ಅವರು ಕಾರ್ಯ ಮಾಡಿದ್ದಾರೆ ಎಂದರು.
ಶರಣರು ಸಮ ಸಮಾಜ ಕಟ್ಟಲು ಶ್ರಮಿಸಿದವರು. ಅಂದಿನ ಅನುಭವ ಮಂಟಪ ಇಂದು ಸಂಸತ್ತು ಆಗಿದೆ. ವಚನ ಸಾಹಿತ್ಯದ ಅನುಭವ ಬದುಕಿನ ಜೀವನವಾಗಬೇಕು. ಸಮ ಸಮಾಜ ನಿರ್ಮಾಣಕ್ಕೆ ಅಂದಿನ ಅನುಭವ ಮಂಟಪದ ಉಸ್ತುವಾರಿ ವಹಿಸಿದ್ದವರು ಅಪ್ಪಣ್ಣರಾಗಿದ್ದರು. ಅವರ ನೀಜವಾದ ಹೆಸರು ಜೀವಣ್ಣ ಎಂದು ಬಸವಣ್ಣನವರು ಕರೆಯುತ್ತಿರುವುದು ಅಪ್ಪಣ್ಣ ಎಂದು ತಿಳಿಸಿದರು. ಸಮಾಜದ ಸಂಘಟನೆಯ ಚೆನ್ನಾಗಿ ಬೆಳೆಯಬೇಕು, ಸಮಾಜವನ್ನು ಒಡೆಯುವ ಕೆಲಸ ಯಾರು ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.
ಶಿವಶರಣರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶಿವಶರಣರ ವಚನಗಳನ್ನು ಮಕ್ಕಳು ಕಲಿತರೆ ನಮ್ಮ ಸಂಸ್ಕೃತಿಯ ಅರಿವು ಅರಿತು ಮುಂದುವರೆಸುತ್ತಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಶಿಕ್ಷಣದಿಂದ ಮಾತ್ರವೇ ಪರಿಪೂರ್ಣ ವಿಕಾಸ ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಅವರು ಪ್ರಾಸ್ತಾವಿಕ ಮಾತನಾಡಿ ಶಿವಶರಣ ಹಡಪದ ಅಪ್ಪಣ್ಣನವರ 890 ನೇ ಜಯಂತಿ ಇದಾಗಿದೆ.ಈ ಸಂದರ್ಭದಲ್ಲಿ ಮಹಾಸ್ವಾಮಿಗಳು ಅಂಬಿಗರ ಚೌಡಯ್ಯ ನವರ ಸಭಾ ಮಂಟಪದಲ್ಲಿ ಆಚರಿಸಲು ಅವಕಾಶ ಮಾಡಿಕೊಟ್ಟ ಸರ್ವರಿಗೂ ವಂದನೆಗಳು ಎಂದರು ಅವರು ಹಡಪದ ಅಪ್ಪಣ್ಣನವರ ಜೀವನ ಮತ್ತು ಸಂದೇಶ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ಸಂಧರ್ಭದಲ್ಲಿ ಶ್ರೀ ಬಾಲ ರಾಜಶಿವಯೋಗಿ ಮಹಾಸ್ವಾಮಿಗಳು ಶಹಾಬಾದ,ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ ಮತ್ತು ನಿರೂಪಣೆ-ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ ಮತ್ತು ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ ಹಾಗೂ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್, ಮಹಾದೇವ ಹಡಪದ ರಾವೂರ ಜಿಲ್ಲಾ ಸಹಕಾರ್ಯದರ್ಶಿ ಮತ್ತು ಕಲಬುರಗಿ ನಗರ ಘಟಕಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ತಾಲೂಕು ಪ್ರದಾನ ಕಾರ್ಯದರ್ಶಿ ವಿನೋದ ಅಂಬಲಗಾ ಹಾಗೂ ಶ್ರೀಮಂತ ಮಳಗಿ ಕಾಳಗಿ ತಾಲೂಕಾಧ್ಯಕ್ಷ ಮತ್ತು ನಂದಕುಮಾರ ಹಡಪದ ನಿಡಗುಂದಿ ಸೇಡಂ ತಾಲೂಕಾಧ್ಯಕ್ಷ ಮತ್ತು ಶಹಾಬಾದ ತಾಲೂಕಾಧ್ಯಕ್ಷ ಶಿವಕುಮಾರ್ ಹಡಪದ ಮಾರಡಗಿ, ಚಿತ್ತಾಪುರ ತಾಲೂಕಿನ ಕಾರ್ಯಾಧ್ಯಕ್ಷರು ನಾಗರಾಜ ಸಾತನೂರ, ವಂದನಾರ್ಪಣೆ- ಚಿತ್ತಾಪುರ ಕಾರ್ಯದರ್ಶಿ ಶಂಕರ ಹಡಪದ, ಬಸವರಾಜ ಹಡಪದ ಮಾಡಬೂಳ, ಭೀಮರಾವ್ ಹಡಪದ ವಾಡಿ, ಶರಣಪ್ಪ ಹಡಪದ ವಾಡಿ,ಸಿದ್ದಾರ್ಥ ಭೀಮನಹಳ್ಳಿ ಮತ್ತು ಶ್ರೀ ಮುರುಳಿ ಕುಮಾರ ಮತ್ತು ಸೋಮಶೇಖರ್ ಹಡಪದ ಚಿತ್ತಾಪುರ, ಸಿದ್ದು ಹಡಪದ ಚಿತ್ತಾಪುರ, ರಾಘವೇಂದ್ರ ಹಡಪದ ಮಾಡಬೂಳ,ಹಣಮಂತ ತರಕಸಪೇಠ್, ಶಂಕರ ಹಡಪದ ರಾವೂರ, ಮಲ್ಲಿಕಾರ್ಜುನ ಹಡಪದ ರಾಜೋಳ್ಳಾ, ಭೀಮಾಶಂಕರ ಶಹಾಬಾದ, ಭಾಗಣ್ಣ ದಂಡಗುಂಡ, ತೋಟೇಂದ್ರ ಶಹಾಬಾದ,ಚಂದ್ರಶೇಖರ ಹಡಪದ ದಿಗ್ಗಾಂವ್, ಸಾಬ್ಬಣ್ಣ ದಿಗ್ಗಾಂವ್ ಹಾಗೂ ಅನೇಕ ಸಮಾಜದ ಗುರುಹಿರಿಯರು ಮತ್ತು ಯುವಕ ಮಿತ್ರರು ಹಾಗೂ ಮಹಿಳಾ ತಾಯಂದಿರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.