ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾ.ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಜ್ಞಾನ ಪೀಠ ಗಾರುಡಿಗರು ಸರಣಿ ಕಾರ್ಯಕ್ರಮದಡಿಯಲ್ಲಿ ಶನಿವಾರ ಕಡಲ ತೀರ ಭಾರ್ಗವ ಡಾ.ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮುಖ್ಯ ಗುರು ಮಲ್ಲಪ್ಪ ಚನ್ನಮಲ್ಲಪ್ಪ ಉದ್ಘಾಟಿಸಿದರು.

ಕರದಾಳ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಪಂಡಿತ್ ನೆಲ್ಲಗಿ ಮಾತನಾಡಿ ಕನ್ನಡ ನಾಡಿಗೆ ಶಿವರಾಮ ಕಾರಂತರು ಒಂದು ದೊಡ್ಡ ಶಕ್ತಿ ಜಗತ್ತಿಗೆ ಬೆಳಕು ನೀಡುವ ಸೂರ್ಯ ಅಕ್ಷರ ಕ್ರಾಂತಿ ಮಾಡಿದ ಕಾರಂತರು ಅನೇಕ ಚಳುವಳಿ,ಕಾಡು ನಾಶವಾಗಬಾರದು ಎಂದು ಹೋರಾಟ ಮಾಡಿದ್ದರು.
ಸ್ವಯಂ ಅಧ್ಯಯನ ಮಾಡಿ ಸಾಹಿತ್ಯ ಕಡೆ ಒಲವು ತೋರಿದ್ದರು.ಚಲನ ಚಿತ್ರ,ರಂಗಭೂಮಿ,ಯಕ್ಷಗಾನ ಸೇರಿದಂತೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದರು.
ಸಾಹಿತ್ಯ ಸೇರಿದಂತೆ ಅನೇಕ ರಂಗಗಳಲ್ಲಿ ಸಂಶೋಧನೆ ಮಾಡಿದ್ದರು. ಅವರ ಮೂಕಜ್ಜಿಯ ಕನಸುಗಳ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಕಾರಂತರಿಗೆ ಡಾಕ್ಟರೇಟ್ ಪದವಿ ನೀಡಿ, ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಮೈಸೂರಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತ್ತು. 
ಅವರ ಚೋಮನ ದುಡಿ, ಬೆಟ್ಟದ ಜೀವ, ಕುಡಿಯರ ಕೂಸು, ಜಿಗುರಿದ ಕನಸು ಕಾದಂಬರಿಗಳು ಚಲನ ಚಿತ್ರಗಳಾಗಿವೆ.
96 ವರ್ಷಗಳ ಬದುಕಿನಲ್ಲಿ ಉತ್ತಮ ಕಾರ್ಯಕ್ರಮ ಮಾಡಿ, ಕನ್ನಡದ ಅಭಿಮಾನದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು.
ಕನ್ನಡ ಬೆಳೆಸಲು ಉಳಿಸಲು ಶಿವರಾಮ ಕಾರಂತರ ಸಾಹಿತ್ಯ ಓದಬೇಕು,ಆಳವಡಿಸಿಕೊಳ್ಳಬೇಕು ಈಗ ಕನ್ನಡದ ವಾರಸುದಾರರಾದ ವಿದ್ಯಾರ್ಥಿಗಳು ಅವರ ಸಾಹಿತ್ಯ ಆಳವಡಿಸಿಕೊಂಡು ಕನ್ನಡ ಬೆಳೆಸಬೇಕೆಂದು ಹೇಳಿದರು.
ಕಸಾಪ ತಾಲೂಕು ಗೌರವ ಸಲಹೆಗಾರ ಚಂದ್ರಶೇಖರ ಕಾಶಿ ಮಾತನಾಡಿ, ಶಿವರಾಮ ಕಾರಂತರು ಸುಮಾರು 423 ಕ್ಕೂ ಹೆಚ್ಚು ಪುಸ್ತಕಗಳು ಬರೆದಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಆಳವಡಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರ ಬದುಕು ಹಸನಾಗುತ್ತದೆ ಎಂದು ಹೇಳಿದರು. 
ಕಸಾಪ ತಾಲೂಕು ಗೌರವ ಸಲಹೆಗಾರ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿದರು. 
ಸರ್ಕಾರಿ ಕನ್ಯಾ ಪ್ರೌಢ ಶಾಲೆ ಮುಖ್ಯಗುರು ಮಲ್ಲಪ್ಪ ಚನ್ನಮಲ್ಲಪ್ಪ ಉದ್ಘಾಟಿಸಿ,ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ಗಂಡು ಮಕ್ಕಳ ಪ್ರೌಢ ಶಾಲೆ ಮುಖ್ಯಗುರು, ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಕಾಶಿರಾಯ ಕಲಾಲ ನಿರೂಪಣೆ ಮಾಡಿದರು. ರಾಮಣ್ಣ ಡೋಣಗಾಂವ ಸ್ವಾಗತಿಸಿದರು,ಸಂಘಟನಾ ಕಾರ್ಯದರ್ಶಿ ಬಸಪ್ಪ ಯಂಬತ್ತನಾಳ ವಂದಿಸಿದರು.
ಕಸಾಪ ಪದಾಧಿಕಾರಿಗಳಾದ ಮಹ್ಮದ್ ಇಬ್ರಾಹಿಮ್, ವೆಂಕಟೇಶ ಬಳಿಚಕ್ರ, ಶಾಮ ಮುಕ್ತೇದಾರ, ವೀರಭದ್ರಪ್ಪ ಗುರುಮಿಠಕಲ್, ರಮೇಶ ಬಟಗೇರಿ, ನರಸಪ್ಪ ಚಿನ್ನಾಕಟ್ಟಿ, ವೀರಸಂಗಪ್ಪ ಸುಲೇಗಾಂವ, ಚಂದ್ರಶೇಖರ ಕಾಶಿ, ರವೀಂದ್ರ ಸಜ್ಜನಶೆಟ್ಟಿ, ಪಂಡಿತ್ ನೆಲ್ಲಗಿ, ಕಾಶಿರಾಯ ಕಲಾಲ,ವೀರೇಂದ್ರಕುಮಾರ ಕೊಲ್ಲೂರ ಇದ್ದರು.

ವರದಿ-ಮಂಜುನಾಥ ಶಾಸ್ತ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ