ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿ.ಹೊಸಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದಿಂದ ಕಲಿಕಾ ಸಾಮಗ್ರಿ ವಿತರಣೆ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅತ್ಯಂತ ಹಿಂದುಳಿದ ಹಾಗೂ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಇರುವ ಬಿ.ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 150 ಮಕ್ಕಳಿಗೆ ಶಾಲಾ ಬ್ಯಾಗು, ನೋಟ್ ಪುಸ್ತಕಗಳು ಹಾಗೂ ನಿತ್ಯ ಉಪಯೋಗಿಸುವ ಕುಡಿಯುವ ನೀರಿನ ಬಾಟಲ್‌ ಗಳನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ವಿತರಿಸಲಾಯಿತು.
ಈ ಕಾರ್ಯಕ್ರಮವು ಕುಗ್ರಾಮವಾದ ಬಿ.ಹೊಸಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಪೂಜ್ಯ ಸ್ವಾಮೀಜಿಯವರನ್ನು ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಶಾಲೆಯ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮಕ್ಕಳಿಗೆ ಶಾಲಾ ಬ್ಯಾಗು ಮತ್ತಿತರ ಪರಿಕರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಸ್ವಾಮಿ ಜಪಾನಂದಜೀ ಮಹಾರಾಜ್,ಬಿ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಭಾರತೀಯ ಸಂಸ್ಕೃತಿಯ, ಪರಂಪರೆಯನ್ನು ಉಳಿಸಿಕೊಂಡು ಬರಲು ಒತ್ತುಕೊಟ್ಟಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಅತ್ಯಂತ ಕುಗ್ರಾಮವಾಗಿರುವ ಹಾಗೂ ಮುಖ್ಯ ವಾಹಿನಿಯಿಂದ ದೂರವಾಗಿರುವ ಶಾಲೆಗಳನ್ನು ಗುರುತಿಸಿ ಪ್ರತಿ ವರ್ಷ ಈ ತೆರನಾದ ಸೇವೆಯನ್ನು ಮಾಡುತ್ತಿದ್ದೇವೆ. ಈ ಬಾರಿ ಬಿ.ಹೊಸಹಳ್ಳಿಗೆ ಭೇಟಿ ನೀಡಿದ್ದು, ಇಲ್ಲಿಯ ಸ್ಥಿತಿಗತಿಗಳನ್ನು ಕಂಡು ನಿಜಕ್ಕೂ ಸಹಕಾರ ನೀಡಿದ್ದು, ಇಲ್ಲಿಯ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹ ಸೇವೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿ.ಹೊಸಹಳ್ಳಿ ಗ್ರಾಮದ ಶ್ರೀ ಪ್ರಜ್ವಲರೆಡ್ಡಿ ಇತ್ತೀಚಿನ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 710 ಅಂಕಗಳನ್ನು ಪಡೆದು ರಾಷ್ಟ್ರದಲ್ಲಿಯೇ ಹೆಸರು ಮಾಡಿದ್ದಾನೆ. ಇಂತಹ ಅನೇಕಾನೇಕ ವಿದ್ಯಾರ್ಥಿಗಳು ಗ್ರಾಮಗಳಲ್ಲಿದ್ದು ಅದರಲ್ಲಿಯೂ ಬಿ.ಹೊಸಹಳ್ಳಿಯಂತಹ ಅತ್ಯಂತ ಕುಗ್ರಾಮ, ಸುತ್ತಲೂ ಬೆಟ್ಟಗುಡ್ಡಗಳು ಹಾಗೂ ಅರಣ್ಯ ಪ್ರದೇಶವನ್ನು ಹೊಂದಿರುವಂತಹ ಜೊತೆಯಲ್ಲಿ ಸರಿಯಾದ ವಾಹನ ಸೌಕರ್ಯಗಳಿಲ್ಲದೆ ಕಷ್ಟಪಟ್ಟು ಓದುತ್ತಿರುವ ಈ ಮಕ್ಕಳಿಗೆ ಎಷ್ಟು ಸಹಾಯ ಮಾಡಿದರೂ ಸಾಲದು. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಆದಷ್ಟು ಶ್ರೀ ರಾಮಕೃಷ್ಣ ಸೇವಾಶ್ರಮದ ಮೂಲಕ ಸಹಾಯಹಸ್ತ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಶಾಸಕರಾದ ತಿಮ್ಮರಾಯಪ್ಪ, ಪೂಜ್ಯ ಸ್ವಾಮೀಜಿಯವರು ರಾಷ್ಟ್ರದಲ್ಲಿಯೇ ತಮ್ಮ ಸೇವಾ ಯಜ್ಞಗಳನ್ನು ಅವಿರತವಾಗಿ ನಡೆಸುತ್ತಾ ಇಂದು ಬಿ.ಹೊಸಹಳ್ಳಿಯ ಸೌಭಾಗ್ಯದಂತೆ ಈ ಗ್ರಾಮಕ್ಕೆ ತಲುಪಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ, ಈ ಕುಗ್ರಾಮದ ಶಾಲೆಗೆ ಶಾಶ್ವತ ಶಿಕ್ಷಕರೇ ಇಲ್ಲ, ಕೇವಲ ನಿಯೋಜಿತರಾದ ಶಿಕ್ಷಕರು ಕೆಲಸ ಮಾಡುತ್ತಿದ್ದು, ಸದರಿ ಶಾಲೆಗೆ ಶಾಶ್ವತ ಶಿಕ್ಷಕರನ್ನು ನೇಮಿಸಬೇಕೆಂದು ಸರ್ಕಾರದ ಗಮನಕ್ಕೆ ತಂದರು.

ವರದಿ:ಕೆ.ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ