ಶಿವಮೊಗ್ಗ :ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಬಡಾವಣೆಗಳಲ್ಲಿ G+2 ಮಾದರಿಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ 4836 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್ ಐ.ಎ.ಎಸ್, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಕವಿತಾ ಹಾಗೂ ಆಶ್ರಯ ಯೋಜನೆಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ ಈ ಕೆಳಗಿನ ವಿಷಯಗಳ ಬಗ್ಗೆ ಪರಮರ್ಶಿಸಿದರು.
- ಗೋವಿಂದಾಪುರದಲ್ಲಿ ಈಗಾಗಲೇ ನಿರ್ಮಿಸಿ ಹಂಚಿಕೆ ಮಾಡಲಾಗಿರುವ 624 ಮನೆಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಪ್ರತ್ಯೇಕ ವಿದ್ಯುತ್ ಸರಬರಾಜು ಯೋಜನೆ, ಕಸವಿಲೇವಾರಿ ವಾಹನವನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು ಹಾಗೂ ಉಳಿದ ಮನೆಗಳ ನಿರ್ಮಾಣಕ್ಕೆ ತುರ್ತಾಗಿ ಕ್ರಮವಹಿಸಲು ಕಾಲಮಿತಿಯನ್ನು ನಿಗಧಿ ಪಡಿಸಲು ಸೂಚಿಸಿದರು.
- ಗೋಪಶೆಟ್ಟಿಕೊಪ್ಪದಲ್ಲಿ 1836 ಮನೆಗಳ ನಿರ್ಮಾಣಕ್ಕೆ ತುರ್ತಾಗಿ ಕಾಮಗಾರಿ ಆರಂಭಿಸಲು ಸೂಚಿಸಿದರು.
- ಅತೀವೃಷ್ಠಿ ಹಾನಿಯಿಂದ ಮನೆಗಳು ಬಿದ್ದಿರುವ ಬಗ್ಗೆ ತುರ್ತಾಗಿ ಪರಿಹಾರ ನೀಡಲು ಮತ್ತು ಅನಧಿಕೃತ ಮನೆಗಳಿಗೆ ವಿಶೇಷ ಪರಿಹಾರ ಒದಗಿಸಲು ಸೂಚಿಸಿದರು.
- ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ನೀಡಲು ಬಾಕಿಯಿರುವ ಪ್ರಕರಣಗಳನ್ನು ತುರ್ತಾಗಿ ಕ್ರಮವಹಿಸಲು ಸೂಚಿಸಿದರು.
- ನಿನ್ನೆ ದಿನ ನಡೆದ ಸ್ಥಳ ಪರಿಶೀಲನೆಯನುದಾರ ಮಹಾನಗರ ಪಾಲಿಕೆ, ಮೆಸ್ಕಾಂ,ನೀರು ಸರಬರಾಜು, ಸ್ಲಂ ಬೋರ್ಡ್ನ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ
ಸಭೆ ನಡೆಸಿದರು.
ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ