ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ರಾಜ್ಯದ ಮುಖ್ಯಮಂತ್ರಿಯನ್ನು ಕಂಡಂತಹ ತಾಲೂಕಾವಾಗಿದ್ದು ಸುಮಾರು 40 ವರ್ಷಗಳಿಂದ ಕುಟುಂಬ ರಾಜಕಾರಣ ಕಂಡಂತಹ ತಾಲೂಕು ಪ್ರಸ್ತುತ ತಾಲೂಕಿನ ಶಾಸಕ 15 ವರ್ಷಗಳಿಂದ ತಾಲೂಕಿನಲ್ಲಿ ಆಡಳಿತ ನಡೆಸುತ್ತಿದ್ದು ಒಬ್ಬ ಶಾಸಕನಿಗೆ ತನ್ನ ತಾಲೂಕನ್ನು ಅಭಿವೃದ್ಧಿಪಡಿಸಲು ಇನ್ನೂ ಎಷ್ಟು ಸಮಯ ಬೇಕಾಗಬಹುದು ತಾಲೂಕಿನಲ್ಲಿ ಹೆಣ್ಣು ಮಕ್ಕಳ ಮರ್ಯಾದೆಗೆ ಯಾವುದೇ ಕಿಮ್ಮತ್ತು ಇಲ್ಲ ತಾಲೂಕಿನ ಹಳ್ಳಿಗಳಲ್ಲಿ ಇವತ್ತಿಗೂ ಕೂಡಾ ಮಹಿಳೆಯರಿಗೆ ರಸ್ತೆ ಬದಿಯ ಶೌಚಾಲಯವೇ ಗತಿಯಾಗಿದೆ ಇವತ್ತಿಗೂ ಕೂಡ ಸಾಯಂಕಾಲದ ಸಮಯದಲ್ಲಿ ಹಳ್ಳಿಗಳಲ್ಲಿ ಸಂಚರಿಸುವಾಗ ರಸ್ತೆ ಬದಿಯಲ್ಲಿ ಶೌಚಾಲಯ ಮಾಡುತ್ತಿರುವ ಹೆಣ್ಣು ಮಕ್ಕಳು ವಾಹನ ಬಂದಾಗ ಶೌಚಾಲಯ ಬಿಟ್ಟು ಎದ್ದು ನಿಂತುಕೊಳ್ಳುವುದು ಇದೊಂದು ಕೆಟ್ಟ ಆಡಳಿತ ವ್ಯವಸ್ಥೆಯ ಸಂಕೇತದಂತೆ ಕಂಡು ಬರುತ್ತದೆ ಇಂತಹ ಒಂದು ಸನ್ನಿವೇಶ ಯಾವ ಹೆಣ್ಣು ಮಕ್ಕಳಿಗೂ ಕೂಡ ಬರಬಾರದು ಇದನ್ನೆಲ್ಲಾ ಗೊತ್ತಿದ್ದರೂ ಕೂಡ ಭ್ರಷ್ಟ ಆಡಳಿತಕ್ಕೆ ನಾವು ಪ್ರಶ್ನೆ ಮಾಡದೆ ತಲೆತಗ್ಗಿಸಿ ಕುಳಿತಿರುವುದು ನಮ್ಮಲ್ಲಿರುವ ಆತ್ಮಭಿಮಾನ ಅಥವಾ ನಮ್ಮತನವನ್ನು ಮಾರಿಕೊಂಡಂತೆ ಕಾಣುತ್ತಿದೆ ನಮ್ಮ ಮನೆಯ ಹೆಣ್ಣು ಮಕ್ಕಳಿಗಿಂತ ನಮಗೆ ಎಂಜಲು ಕಾಸಿನ ಹಣವೇ ಮುಖ್ಯವಾಗಿದೆ ಈ ಕೆಟ್ಟ ಶೌಚಾಲಯದ ವ್ಯವಸ್ಥೆಯ ವಿರುದ್ಧ ಇಲ್ಲಿವರೆಗೆ ನಾವು ಯಾವ ಅಧಿಕಾರಿಯನ್ನಾಗಲಿ ಅಥವಾ ಶಾಸಕನಿಗಾಗಲಿ ಕೊರಳು ಪಟ್ಟಿ ಹಿಡಿದು ಕೇಳಿಲ್ಲ ನಾವು ಎಲ್ಲಿವರೆಗೂ ಕೇಳುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೆಣ್ಣು ಮಕ್ಕಳು ರಸ್ತೆ ಬದಿಯ ಶೌಚಾಲಯವೇ ಗತಿ ಇನ್ನು ರಾಜಕಾರಣಿಗಳಾಗಲಿ ಅಧಿಕಾರಿಗಳಾಗಲಿ ಕೆಲಸ ಮಾಡುವ ಮನಸ್ಥಿತಿಯವರು ಇಲ್ಲ ಇನ್ನು ಶಾಸಕರ ವಿಚಾರಕ್ಕೆ ಬರುವುದಾದರೆ ದುಡ್ಡಿನ ಮೇಲೆ ರಾಜಕಾರಣ ಮಾಡುತ್ತಿರುವ ದುಡ್ಡಿನ ಅಹಂ ತುಂಬಿರುವ ದುರಹಂಕಾರಿ ಈತನಿಂದ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತು ಇಂತಹ ಭ್ರಷ್ಟ ಶಾಸಕನ ಪಡೆದ ಜೇವರ್ಗಿ ತಾಲೂಕಿನ ಜನರು ನಿಜವಾಗಲೂ ನತದೃಷ್ಟರು ಅದೇ ರೀತಿಯಾಗಿ ಸುಮಾರು ಮೂರು ದಶಕಗಳಿಂದ ಮಲ್ಲಬಾದ್ ಏತ ನೀರಾವರಿಗಾಗಿ ತಾಲೂಕಿನ ರೈತರು ನಡೆಸುತ್ತಿರುವ ಹೋರಾಟ ಸಣ್ಣದಲ್ಲ ಪ್ರಸ್ತುತ ಶಾಸಕನ ತಂದೆಯಾದ ದಿವಂಗತ ಧರ್ಮಸಿಂಗ್ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದರು ಆಗಿನ ಕಾಲದಲ್ಲಿ ಅವರು ಮನಸ್ಸು ಮಾಡಿದರೆ ಮಲ್ಲಾಬಾದ್ ಏತ ನೀರಾವರಿಯ ಯೋಜನೆಯು ಕಾರ್ಯಗತಗೊಳಿಸುವುದು ದೊಡ್ಡ ವಿಷಯವಾಗಿರಲಿಲ್ಲ ಆದರೆ ಈಗಿನ ಕೆಕೆಆರ್‌ಡಿಬಿ ಅಧ್ಯಕ್ಷರು ತಾಲೂಕಿನ ಶಾಸಕರಾದ ಡಾ.ಅಜಯ್ ಸಿಂಗ್ ಅವರಿಗೆ ಇಚ್ಛಾಶಕ್ತಿಯ ಕೊರತೆ ಇದೆ ಇವರಿಂದ ಅಭಿವೃದ್ಧಿ ಕಾರ್ಯ ನಿರೀಕ್ಷಿಸುವುದು ಕಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾದ ಚನ್ನಯ್ಯ ಸ್ವಾಮಿ ವಸ್ತ್ರದ್ ಅವರು ಈ ಅವ್ಯವಸ್ಥೆಯ ವಿರುದ್ಧ ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.