ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲ್ಯಾಣ ಕಾರುಣ್ಯ ಒಂದು ಅವಲೋಕನ…

ಹೈದ್ರಾಬಾದ ಕರ್ನಾಟಕದ ಲೇಖಕರೂ ಹಾಗೂ ಉಪನ್ಯಾಸಕಿ ಡಾ.ಶೀಲಾದೇವಿ ಬಿರಾದಾರ ಯವರು ಬಂಡಾಯ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಇವರು ನಾಲ್ಕಾರು ಕೃತಿರಚನೆ ಮಾಡಿದ್ದಾರೆ. ಅನ್ಯಾಯ ಮೋಸ ಅನಾಚಾರ ಅತ್ಯಾಚಾರ ಹೀಗೆ ಹಲವಾರು ಸಮಸ್ಯೆಗಳನ್ನು ಕವನ ಲೇಖನಗಳಲ್ಲಿ ಅಳವಡಿಸಿಕೊಂಡು ರಚನೆ ಮಾಡಿರುವುದು ಬಹಳ ವಿಶೇಷವಾದದು. ಪ್ರತಿಯೊಂದು ಕವನದಲ್ಲಿ ಭಾವ ಜೊತೆ ಭಾವನೆ ಇದೆ ನಾಡು ಸಂಸ್ಕೃತಿ ಸಾಧನೆ ಸಾಧಕರ ಬಗ್ಗೆ ಬರೆದಿರುವುದು ಸಾಹಿತ್ಯ ಮೇಲೆ ಹಿಡಿತ ಹೊಂದಿರುವುದು ಕವನ ಓದಿದಾಗ ಗೊತ್ತಾಗುತ್ತದೆ.
ಇಂಗ್ಲೀಷ್ ಹಾವಳಿಕಡಿಮೆ ಮಾಡಿ
ಕನ್ನಡ ಮೋಹ ಮೆರೆಸಬನ್ನಿ
ಕನ್ನಡ ಶಾಲೆ ತೆರೆಸೋಣ ಬನ್ನಿ
ಕನ್ನಡ ಅಕ್ಷರ ಬಿತ್ತೋಣ ಬನ್ನಿ
ಇಂದು ಇಂಗ್ಲಿಷ್ ಮಾಧ್ಯಮ ಶಾಲೆಗಳ ಅವಾಂತರ ಹೇಳತೀರದು
ಹಳ್ಳಿ ಹಳ್ಳಿ ಗಲ್ಲಿಗಲ್ಲಿಗಳಲ್ಲಿ
ಬೀದಿ ನಾಯಿಗಳಂತೆ ಹೆಚ್ಚಾಗುತ್ತಿರುವುದು
ಕನ್ನಡ ಭಾಷೆಗೆ ಕಂಟಕವಾಗಿ ಕಾಡುತ್ತಿದೆ
ಇದಕ್ಕೆ ಕಾರಣ ಸರ್ಕಾರದ ಕೆಲವು ತಪ್ಪುನಿರ್ಧಾರದಿಂದ ಕನ್ನಡ ಶಾಲೆಗಳು ನಲುಗಿ ಹೋಗುತ್ತಿವೆ ಎರಡು ಸಾವಿರ ಇತಿಹಾಸ ಹೊಂದಿರುವ ಕನ್ನಡ ಎಲ್ಲಾ ಭಾಷೆಗಳ ರಾಣಿ ಎಂದು ಕರೆಯುತ್ತಾರೆ.ಸ್ವಂತ ಲಿಪಿ ಹೊಂದಿರುವ ಕನ್ನಡ ಶ್ರೀಮಂತ ಭಾಷೆ ಸರಳ ಹಾಗೂ ಸುಂದರ ಬೇರೆ ದೇಶಗಳ ಅನೇಕರು ಕನ್ನಡವನ್ನು ಕಲಿತ್ತಿದ್ದಾರೆ ಹಾಗೂ ಕಲಿಯುತ್ತಿದ್ದಾರೆ. 8 ಜ್ಞಾನಪೀಠ ಪಡೆದ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ. ಇನ್ನಾದರೂ ಪ್ರತಿಯೊಬ್ಬ ಕನ್ನಡಿಗ ಕನ್ನಡ ಮಾತನಾಡಬೇಕು ಬೆಳೆಸಬೇಕು ಸ್ವಾಭಿಮಾನ ಜೊತೆ ಅಭಿಮಾನ ಅಂದಾಗ ಮಾತ್ರ ಇಂಗ್ಲೀಷ್ ಶಾಲೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಕನ್ನಡ ಶಾಲೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಗುಣಮಟ್ಟದ ಶಿಕ್ಷಣಕ್ಕೆ ಗಮನ ನೀಡಬೇಕು ಇನ್ನೂ ಹತ್ತು ಹಲವು ಯೋಜನೆಗೆ ಚಾಲನೆ ನೀಡಬೇಕು ಅಂದಾಗ ಮಾತ್ರ ಕನ್ನಡ ಶಾಲೆಗಳು ತುಂಬಿ ತುಳುಕುವುದಲ್ಲಿ ಸಂಶಯವಿಲ್ಲ.
ಗೌರವದಿಂದಲೇ ಗೌರವ ಸಿಗುವುದು.
ಅಗೌರವದಿಂದ ಅಗೌರವ ಬರುವುದು.
ಅಧಿಕಾರದ ದರ್ಪದಿ ಮೆರೆಯುವವ ಬಿದ್ದರೆ ಒ೦ದಿನ ಮಣ್ಣ ಮಕ್ಕವವ,
ಬಡವ ಅಥವಾ ಬಲ್ಲಿದ ಬೇಧಭಾವ ಮಾಡದೆ ಸರಿಸಮಾನದಿಂದಗೌರವ ನೀಡುವನು ಅವನೇ ಒಬ್ಬ ವ್ಯಕ್ತಿ ಎಂದು ಕರೆದುಕೊಳ್ಳುತ್ತಾನೆ ಸಮಾಜದಲ್ಲಿ ಗಣ್ಯವ್ಯಕ್ತಿ ಎಂದು ಕರೆಸಿಕೊಳ್ಳುತ್ತಾನೆ. ಆದರೆ ಕೆಲವರು ಅಧಿಕಾರ ಮದದಿಂದ ಅನ್ಯಾಯ ದಬ್ಬಾಳಿಕೆ ಮಾಡುತ್ತಾರೆ ಅಧಿಕಾರವನ್ನು ಸಮಾಜ ಹಾಗೂ ನಾಡಿನ ಜನಸಾಮಾನ್ಯರಿಗೆ ಸಹಾಯ ಮಾಡಬೇಕು ತಪ್ಪು ಮಾಡುವ ಮುನ್ನ ವಿಚಾರ ಮಾಡಬೇಕು ಇಲ್ಲದಿದ್ದರೆ ಅಧಿಕಾರದಿಂದ ಒದ್ದು ಓಡಿಸುತ್ತಾರೆ.
ರಾಜಧಾನಿ ನಗರಬೆಂಗಳೂರು,
ಕನ್ನಡ ಅನ್ನ ಕನ್ನಡ ನೀರು,
ಕರೆದು ನೀಡುವುದು. ಕೈ ಬೀಸಿ ಕರೆಯುವದು.
ಬೆಂಗಳೂರು ಐಟಿ ಬಿಟಿ ನಗರಿ ಎಂದು ಕರೆಯುತ್ತಾರೆ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದೆ. ಕನ್ನಡಿಗರಕ್ಕಿಂತ ಹೆಚ್ಚು ಹೊರ ರಾಜ್ಯದ ಹೊರದೇಶದ ಜನರೇ ಹೆಚ್ಚು ಕನ್ನಡಿಗರ ವಿಶಾಲ ಮನೋಭಾವ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಡೆದಾಡಿದ ಪುಣ್ಯ ಭೂಮಿ, ಅಷ್ಟೆ ಅಲ್ಲದೆ ಆಶ್ರಯ ನೀಡಿ ಅನ್ನ ನೀರು ನೀಡಿದ ಬೆಂಗಳೂರು ಪ್ರಪಂಚದ ಭೂಪಟದಲ್ಲಿ ಪ್ರಮುಖವಾಗಿ ಕಂಡುಬರುವ ಪ್ರದೇಶ ಕನ್ನಡಿಗರ ಅಭಿಮಾನದ ಬೆಂಗಳೂರು,
ನಿಂದಕರೂ ಇರಬೇಕು ಹಂದಿ ಹಂಗ ಅರಿತು ನಡೆಯಬೇಕು.
ಅವಮಾನಗಳ ಮೆಟ್ಟಿ ನಿಂತು ಬಲ್ಲವರೆಲ್ಲ ತಿಳಿದು ನಡೆ
ನಿಂದನೆ ಮಾಡುವುದು ಆದರೆ ಆರೋಗ್ಯಕರವಾಗಿರಲಿ ಆದರೆ ಕೆಲವರು ಪ್ರತಿಯೊಂದು ಹಂತದಲ್ಲೂ ಕೊಂಕು ಮಾತು ಮಾತಾಡಿ ಮನಸ್ಸಿಗೆ ಬೇಜಾರು ಆಗುತ್ತದೆ. ಹಿರಿಯರು ಒಂದು ಮಾತು ಹೇಳುತ್ತಾರೆ. ನಿಂಧಕರು ಹಂದಿಯ ಸಮಾನ ರು. ಎಂದು ಇವರ ಪ್ರಶ್ನೆಗೆ ಸಾಧನೆ ಮೂಲಕ ಉತ್ತರ ನೀಡಬೇಕಾಗಿದೆ. ಅಂದಾಗ ಮಾತ್ರ ನಮ್ಮ ಜೀವನ ಪರಿಪೂರ್ಣವಾಗಬಲ್ಲದು.
ಕಿತ್ತು ತಿನ್ನುವ ದುಡ್ಡಿನ ಹಗರಣ,
ಕಂಡು ಕಾಣದಂತಿದ್ದು ಮೂಗನಾಗಿರ ಬೇಕಣ್ಣ,
ಇಂದು ನಡೆಯುತ್ತಿರುವ ಹಗರಣಗಳ ಬಗ್ಗೆ ಕೇಳಿದರೆ ಕೋಟಿ ಕೋಟಿ ಲೆಕ್ಕ ಪ್ರತಿಯೊಂದು ಇಲಾಖೆಯಲ್ಲಿ ಹಣ ನುಂಗುವ ಅಧಿಕಾರಿಗಳು ತುಂಬಿ ತುಳುಕುತ್ತಿರುವಾಗ ಅಭಿವೃದ್ಧಿ ಹೀಗೆ ಸಾಧ್ಯ? ನೀವೇ ಹೇಳಿ ಹಳ್ಳಿಯಿಂದ ದಿಲ್ಲಿ ವರೆಗೆ ಭ್ರಷ್ಟಾಚಾರ ಆರ್ಭಟ ಹೇಳತೀರದು. ಮತದಾರರಿಗೆ ಹಂಚಿಕೆಯಾದ ಹಣವನ್ನು ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಾರೆ ರಾಜಕಾರಣಿಗಳ ಪಾತ್ರ ಜೊತೆ ಮತದಾರರ ಪಾತ್ರವಿದೆ. ಹಗರಣಗಳಲ್ಲಿ ಮಾಡಿದ ಲಕ್ಷಾಂತರ ಕೋಟಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ ಇಂದಿಗೂ ಹಳ್ಳಿ ಪ್ರದೇಶಗಳಲ್ಲಿ ಮೂಲ ಭೂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಬೇಲಿಯೇ ಹೋಲ ಮೇದ್ದಂತೆ ಆಗಿದೆ ಇಂದಿನ ಪರಿಸ್ಥಿತಿ ಒಬ್ಬರುಇಬ್ಬರಿಂದ ಸಾಧ್ಯವಿಲ್ಲ ಆಂದೋಲನ ನಡೆಯಬೇಕಾಗಿದೆ ಇಲ್ಲವಾದರೆ ಜನರನ್ನು ಹಾದಿಗೆ ತಳ್ಳುವುದು ಖಚಿತ.
ಇದ್ದ ಸಮಯಕ್ಕೆ ಸಾಧನೆ ಬೇಕು.
ಅಂತ್ಯಕ್ಕೆ ಅಧ್ಯಾತ್ಮ ಭಜಿಸಲು ಬೇಕು.
ಸಾಧನೆ ಇಲ್ಲದೇ ಸತ್ತರೆ ಹುಟ್ಟಿಗೇನು ಬೆಲೆ ಇದೆ.
ಜೀವನ ಎಂಬುದು ಕಾಲಚಕ್ರದಂತೆ ತಿರುಗುತ್ತದೆ ಅದೇ ರೀತಿ ಸಾಧನೆ ಸಹ ಪ್ರಮುಖ ಪಾತ್ರ ವಹಿಸುತ್ತದೆ ಕ್ಷೇತ್ರ ಯಾವುದೇ ಇರಲಿ ಅದರಲ್ಲಿ ಶ್ರದ್ಧೆ ಭಕ್ತಿ ಇರಬೇಕು ನಮ್ಮ ಜೀವನಕ್ಕೆ ಅರ್ಥ ಬರುತ್ತದೆ. ಪುಸ್ತಕ ಬ್ರಹ್ಮ ರವಿಬೆಳಗರೆಯವರು ಒಂದು ಮಾತು ಹೇಳಿದ್ದಾರೆ. ನೀನು ಹಣಕ್ಕಾಗಿ ಕೆಲಸ ಮಾಡಬೇಡನಿಷ್ಠೆಯಿಂದ ಮಾಡು ಹಣ ಜೊತೆ ಹೆಸರು ಸಹ ಬರುತ್ತದೆ. ಸಾಧನೆ ಸುಮ್ಮನೆ ಬರುವುದಿಲ್ಲ ನಿರಂತರ ಪ್ರಯತ್ನ ಹಠಕ್ರಿಯಾಶೀಲದಿಂದ ಪ್ರಯತ್ನದಿಂದ ಸಾಧ್ಯ ಸುಮ್ಮನೆ ಕುಳಿತರೆ ಯಾವುದು ಆಗುವುದಿಲ್ಲ ಸಾಧನೆ ಇಲ್ಲದೇ ಸತ್ತರೆ ಕಲ್ಲಿಗೂ ನಮಗೂ ಏನು? ವ್ಯತ್ಯಾಸ ಹೇಳಿ?
ನಾರಿ ದಾರಿ ಸಾಧನೆ ಬೇಕು ಸಾಹಿತ್ಯ ಸಿರಿ ದಯಾನಂದ ಪಾಟೀಲ್ರ ಸಿರಿಗನ್ನಡಂ ಗೆಲ್ಗೆ ಮುಂತಾದ ಕವನಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಲೇಖಕರಾದ ಡಾ. ಶೀಲಾ ದೇವಿ ಬಿರಾದಾರ ಯವರ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲಿ ಆಕಾಶದಲ್ಲಿ ಮಿನುಗುವ ನಕ್ಷತ್ರವಾಗಿ ಮಿಂಚಲಿ ಶುಭಾಶಯಗಳೊಂದಿಗೆ…

ಲೇಖಕರು-ದಯಾನಂದ ಪಾಟೀಲ ಅಧ್ಯಕ್ಷರು, ಭಾರತೀಯ ಕನ್ನಡ ಸಾಹಿತ್ಯ ಬಳಗ,ಮಹಾರಾಷ್ಟ್ರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ