ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೈಸೂರಿಗೆ ಪಾದಯಾತ್ರೆ

ಬೆಂಗಳೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ವನ್ನು ಇಂಗ್ಲಿಷಿನಲ್ಲಿ Mysore Urban Development Authority ಎಂದು ಕರೆಯುತ್ತಾರೆ ಇದನ್ನು ಸುಲಭವಾಗಿ ಸರಳವಾಗಿ MUDA ಎಂದು ಕರೆಯುತ್ತಾರೆ.(ಮುಡಾ)

ಈ ಸಂಸ್ಥೆ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಂತೆ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತದೆ.

ಇತ್ತೀಚೆಗೆ ರಾಜ್ಯದ ಈಗಿನ ಮುಖ್ಯಮಂತ್ರಿಗಳ ಕುಟುಂಬಕ್ಕೆ ಮುಡಾದಿಂದ ಕಾನೂನು ಬಾಹಿರವಾಗಿ ನಿವೇಶನಗಳು ಕೊಡಲ್ಪಟ್ಟಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿವೆ.

” ಈ ನಿವೇಶನಗಳು ಬಹು ಕೋಟಿ ರೂ. ಬೆಲೆ ಬಾಳ ತಕ್ಕವು ಮತ್ತು ಈ ರೀತಿಯ ನಿವೇಶನಗಳು ಪಡೆಯುವುದಕ್ಕೆ ಅವಕಾಶವಿರುವುದಿಲ್ಲ, ಕೇವಲ ರಾಜಕೀಯ ಪ್ರಭಾವದ ಕಾರಣಕ್ಕಾಗಿ ಈ ರೀತಿ ಭಾರಿ ಬೆಳೆಬಾಳುವ ನಿವೇಶನಗಳನ್ನು ಮೌಲ್ಯಯುತ ಬಡಾವಣೆಯಲ್ಲಿ ಕೊಡಲಾಗಿದೆ”
ಎಂಬುದು ಈ ಎಲ್ಲಾ ಆರೋಪಗಳ ತಿರುಳು.

ಈ ಕುರಿತು ಸಾಕಷ್ಟು ವಾದ ವಿವಾದಗಳು ಇಡೀ ರಾಜ್ಯದಲ್ಲಿ ಬೀದಿ ಮಟ್ಟದಲ್ಲಿ ನಡೆದಿವೆ.ಮಾಧ್ಯಮಗಳ ಮೂಲಕವೂ ಈ ಬಗ್ಗೆ ವಾದ ಪ್ರತಿವಾದ ನಡೆಯುತ್ತಾ ಬಂದಿದೆ.

ಇದೇ ಜುಲೈ 15, ಸೋಮವಾರದಿಂದ ಕರ್ನಾಟಕದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಯಿತು.

ಈ ಹಿನ್ನೆಲೆಯಲ್ಲಿ ಜುಲೈ ಹತ್ತರಂದು ಖಾಸಗಿ ಹೋಟೆಲ್ ಒಂದರಲ್ಲಿ ನಮ್ಮ ಪಕ್ಷದ ಕೆಲವು ಪ್ರಮುಖರು ಕುಳಿತು ವಿಧಾನ ಮಂಡಲದಲ್ಲಿ ಚರ್ಚಿಸಬೇಕಾದ, ಪ್ರಸ್ತಾಪಿಸಬೇಕಾದ ಜ್ವಲಂತ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದೆವು.

*ಬಹುಕೋಟಿ ಹಗರಣ ಉಂಟಾಗಿರುವ,ರಾಜ್ಯದ ಸಚಿವರೇ ಬಂಧನಕ್ಕೆ ಒಳಗಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ,

  • ರಾಜ್ಯಾದ್ಯಂತ ಬೆಚ್ಚಿ ಬೀಳಿಸಿರುವ ಡೆಂಗ್ಯೂ ಪ್ರಕರಣ,
  • ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಿಟ್ಟಿರುವ ಹಣದಲ್ಲಿ ಸಾವಿರಾರು ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗಾಗಿ ದುರುಪಯೋಗ ಪಡಿಸಿಕೊಂಡಿರುವ ತೀವ್ರತರ ಪ್ರಮಾದ,
  • ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಕುರಿತು ಹಾಗೂ
    *ಮುಡಾದಲ್ಲಿ ನಡೆದಿರುವ ಬದಲಿ ನಿವೇಶನಗಳ ಹೆಸರಿನಲ್ಲಿ ಬದಲಿ ನಿವೇಶನಗಳ ಹಂಚಿಕೆ ಹೆಸರಿನ ಹಗರಣ

ಈ ಕುರಿತು ಈ ಕುರಿತು ನಮಗೆ ಸಿಗುವ ಕೇವಲ ಹತ್ತೇ ದಿನಗಳಲ್ಲಿ ಇನ್ನಿತರೆ ವಿಷಯಗಳೊಂದಿಗೆ ಚರ್ಚಿಸಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿತ್ತು.

ನನಗೇಕೋ ಮುಡಾ ವಿಚಾರವನ್ನು ಸದನದಲ್ಲಿ ಚರ್ಚೆಗೆ ಬಿಡುವ ಅವಕಾಶ ದೊರಕುವುದಿಲ್ಲ ಎಂದು ಮನಸ್ಸಿಗೆ ಅನಿಸಿ, ಅಧಿವೇಶನದಲ್ಲಿ ಅವಕಾಶ ದೊರಕದಿದ್ದರೆ, ಈ ಮಹತ್ವದ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ, ಅಂದರೆ ಬೆಂಗಳೂರಿನಿಂದ ಮೈಸೂರಿನ ಮೂಡ ಕಚೇರಿಗೆ ಪಾದಯಾತ್ರೆ ಮೂಲಕ ಹೋಗುವ ಸಲಹೆಯನ್ನು ಆ ಸಭೆಯಲ್ಲಿ ನೀಡಿದ್ದೆ.

ಆ ಸಲಹೆಗೆ ಎಲ್ಲರ ಸಹಮತಿ ದೊರಕಿತು.

ಜುಲೈ 15 ರಂದು, ಅಧಿವೇಶನದ ಪ್ರಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಆಯೋಗದ ಹಗರಣ ಕುರಿತು ದೀರ್ಘ ಚರ್ಚೆ ನಡೆಯಿತು.ಚರ್ಚೆಗೆ ಸರ್ಕಾರ ತನ್ನದೇ ದಾಟಿಯಲ್ಲಿ ಉತ್ತರ ನೀಡಿತು. ಅದರಿಂದ ಅಸಮಾಧಾನಗೊಂಡ ವಿರೋಧಪಕ್ಷಗಳು ಧರಣಿ, ಸಭಾತ್ಯಾಗ ಕ್ರಮಗಳನ್ನು ಅನುಸರಿಸಬೇಕಾಯಿತು.

ಮಾರ್ಚ್ 24ರಂದು ಮೈಸೂರಿನ ಮುಡಾ ನಿವೇಶನಗಳ ಹಗರಣದ ವಿಚಾರ ಪ್ರಸ್ತಾಪ ಮಾಡಿದಾಗ ರಾಜ್ಯದ ಕಾನೂನು ಸಚಿವರು ಮೂಡ ಹಗರಣ ಕುರಿತು ವಿಚಾರಣೆ ನಡೆಸಲು, ಈಗಾಗಲೇ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ಒಂದನ್ನು ರಚಿಸಿರುವ ಹಿನ್ನೆಲೆಯಲ್ಲಿ ಈ ಚರ್ಚೆಗೆ ನಿಯಮಾವಳಿಗಳ ಅಡಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಾರಿಬಿಟ್ಟರು.

ಅದಕ್ಕೆ ಪ್ರತ್ಯುತ್ತರವಾಗಿ ಅಂದು ನಾನು ಹೇಳಿದ ಅಂಶಗಳು ಈ ಕೆಳಕಂಡಂತೆ ಇವೆ.

•ನಮ್ಮ ಸದನ ಪ್ರಾರಂಭವಾಗಿದ್ದು ಜುಲೈ 15 2024 ಸೋಮವಾರದಂದು.

•ಕಾನೂನು ಸಚಿವರು ಹೇಳಿರುವ ಪ್ರಕಾರ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದ ಏಕ ಸದಸ್ಯ ಆಯೋಗ ರಚನೆಯಾಗಿದ್ದು ಜುಲೈ 14, ಭಾನುವಾರ ದಂದು (ಈ ಆಯೋಗ ರಚನೆಯಾಗಿದ್ದು ಭಾನುವಾರ ಮಧ್ಯಾಹ್ನವೋ, ಸಾಯಂಕಾಲವೋ, ಮಧ್ಯರಾತ್ರಿಯೋ…ಯಾವಾಗ ಆಯಿತೋ ಗೊತ್ತಿಲ್ಲ)

•ಅಂದರೆ ಮುಡಾ ವಿಚಾರ ರಾಜ್ಯದಲ್ಲಿ Talk of the State, Talk of the Country ಆಗಿರುವಾಗ ಅಧಿವೇಶನದಲ್ಲಿ ಈ ಚರ್ಚೆ ಖಂಡಿತ ಬಂದೇ ಬರುತ್ತದೆ ಎಂದು ತಿಳಿದುಕೊಂಡೇ ಅಧಿವೇಶನ ಪ್ರಾರಂಭವಾಗುವ ಹಿಂದಿನ ದಿನ ಈ ಆಯೋಗವನ್ನು ರಚಿಸಿ, ಚರ್ಚೆ ನಡೆಸದಂತೆ ಮಾಡುವ ಹುನ್ನಾರ ಸರ್ಕಾರದ್ದಾಗಿದ್ದು ಸ್ಪಷ್ಟ.

  • ಅಂದರೆ ಸರ್ಕಾರ ರಕ್ಷಣೆಗಾಗಿ ಈ ಆಯೋಗದ ರಚನೆ ಒಂದು ರೀತಿ Anticipatory bail ತೆಗೆದುಕೊಂಡ ರೀತಿ ಆಗಿತ್ತು.
  • ಈ ಒಟ್ಟು ಪ್ರಕರಣದಲ್ಲಿ ಸಂಶಯದ ಮುಳ್ಳು (Needle of suspicion) ರಾಜ್ಯದ ಮುಖ್ಯಮಂತ್ರಿ ಕುಟುಂಬದ ಕಡೆ ತೋರುತ್ತಿರುವುದರಿಂದ ನಿಯಮಾವಳಿಗಳ ಅಡಿ ರಕ್ಷಣೆ ಪಡೆಯದೇ ಚರ್ಚೆಗೆ ಅವಕಾಶ ಮಾಡಿಕೊಟ್ಟು ಸರ್ಕಾರವು ಅದಕ್ಕೆ ತಕ್ಕ ಉತ್ತರ ಕೊಟ್ಟು ಸಂಶಯದ ಸುಳಿಯಿಂದ ಆಚೆ ಬರಬೇಕು ಎಂದೆಲ್ಲಾ ನನ್ನ ವಾದ ಮುಂದಿಟ್ಟರೂ ಸರ್ಕಾರ ಚರ್ಚೆಗೆ ಸಿದ್ದ ಆಗಲಿಲ್ಲ .
  • ಸಭಾಧ್ಯಕ್ಷರೂ ಸಹ ಬೇರೆ ಯಾವುದಾದರೂ ಸ್ವರೂಪದಲ್ಲಾದರೂ ಚರ್ಚೆಗೆ ಅವಕಾಶ ಕೊಡುವಂತೆ ಕೋರಿದರೂ ಈ ವಿಚಾರದಲ್ಲಿ ಅವಕಾಶ ಕೊಡಲು ನಿರಾಕರಿಸಿದ ಕಾರಣ ನಾವು ಅನಿವಾರ್ಯವಾಗಿ ಅಹೋ ರಾತ್ರಿಯ ಧರಣಿ ನಡೆಸಬೇಕಾಗಿತ್ತು .

ಮಾರನೇಯ ದಿನ ಅಂದರೆ ಜುಲೈ 24 ರಂದು ಗುರುವಾರ ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಯಿತು.

ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಗಳಿಗೆ ಜನರ ಬಳಿ ಹೋಗಿ ಮೂಡ ನಿವೇಶನಗಳ ಹಗರಣಗಳ ಕುರಿತು ನಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುವುದೊಂದೇ ದಾರಿಯಾಗಿ ಉಳಿದಿದೆ.

  • “ನಮ್ಮ ಕುಟುಂಬಕ್ಕೆ ದೊರಕಿರುವ ನಿವೇಶನಗಳು ಕಾನೂನುಬಾಹಿರವಾಗಿಲ್ಲ” ಎಂದು ಪ್ರತಿನಿತ್ಯ ಪತ್ರಿಕಾಗೋಷ್ಠಿಗಳ ಮೂಲಕ ತಿಳಿಸುತ್ತಿರುವ, ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ತಿಳಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿಯೇ ಚರ್ಚೆಗೆ ಅವಕಾಶ ನೀಡಿ, ನಂತರ ಉತ್ತರಕೊಟ್ಟು ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?

ಅದಕ್ಕಾಗಿ ನಾಳೆಯಿಂದ ಬಿಜೆಪಿ-ಜೆಡಿಎಸ್ (ಎನ್ ಡಿ ಎ)ಪಕ್ಷಗಳಿಂದ ಈ ಪಾದಯಾತ್ರೆ ಪ್ರಾರಂಭವಾಗುತ್ತಿದೆ.

ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಮುಡಾ ಹಗರಣ ಕುರಿತು ತಮ್ಮ ಪಾತ್ರ ಏನು ಇಲ್ಲ ಎಂದು ರುಜುವಾತು ಮಾಡುವ ಬದಲಿಗೆ ಪ್ರತಿ ಪಕ್ಷಗಳ ಕುರಿತು ಇರುವ ಆರೋಪಗಳ ಬಗ್ಗೆ ಹಿಂದೆ ಆಗಿ ಹೋಗಿರುವ ಹಗರಣಗಳ ಬಗ್ಗೆ ಚರ್ಚಿಸಲು ಪಾದಯಾತ್ರೆಗೆ ಮುನ್ನ ಅದೇ ಹಾದಿಯಲ್ಲಿ ಸಮಾವೇಶ ನಡೆಸಲು ಯೋಜಿಸಿ ಹೊರಟಿದೆ.

ಕಾಂಗ್ರೆಸ್ ಪಕ್ಷದವರಿಗೆ ಒಂದು ಪ್ರಶ್ನೆ:

  • ನೀವು ಹಿಂದೆ “40% #ಭ್ರಷ್ಟಾಚಾರ”, “ಪೇ_ಸಿಎಂ” ಎಂಬ ಆರೋಪಗಳನ್ನು ನಮ್ಮ ಸರಕಾರದ ವಿರುದ್ಧ ಮಾಡಿದ್ರಲ್ಲಾ, ಆ ಕುರಿತು ಇಡೀ ರಾಜ್ಯದಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದರಲ್ಲಾ…,
    ಅದರಿಂದ ಲಾಭ ತೆಗೆದುಕೊಂಡು ಚುನಾವಣೆ ಗೆದ್ದು ಈಗ ಆಡಳಿತ ನಡೆಸುತ್ತಿದ್ದೀರಲ್ಲವೇ…

ಈ ಒಂದು ವರ್ಷದಲ್ಲಿ 40% ಭ್ರಷ್ಟಾಚಾರ , ಪೇ ಸಿಎಂ ಆರೋಪ ಕುರಿತು ಯಾವ ಸತ್ಯ ಹೊರಗೆ ತೆಗೆದಿದ್ದೀರಿ?

ಆಳುವ ಪಕ್ಷ ತನ್ನ ಮೇಲೆ ಬಹಳ ಘನಘೋರವಾದ ಆರೋಪ ಬಂದಾಗ ಆ ಕುರಿತು ಸೂಕ್ತವಾಗಿ ಸ್ಪಂದಿಸಬೇಕೆ ವಿನಃ ವಿರೋಧ ಪಕ್ಷಗಳ ಆಡಳಿತ ಇದ್ದಾಗ ಏನಾಗಿತ್ತು ಎಂದು ಪ್ರತಿ ಆರೋಪ ಮಾಡುವ ಮೂಲಕ ರಕ್ಷಣೆ ಪಡೆಯಬಾರದು.

ಆಳುವ ಪಕ್ಷ ಇಂದು ಮಾಡುತ್ತಿರುವುದು ಒಂದು ರೀತಿಯ ರಾಜಕೀಯ ಬ್ಲಾಕ್ ಮೇಲ್ ಎಂದು ಹೇಳಬೇಕಾಗುತ್ತದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾದಯಾತ್ರೆಯ ಮೂಲಕ ಜನತೆಯ ಬಳಿಗೆ ಹೋಗುವುದು ಹೊಸತೇನೂ ಅಲ್ಲ .

ನಮ್ಮ ಪಕ್ಷದ ಹಿರಿಯ ನಾಯಕರಾದ ಶ್ರೀ ಬಿ.ಎಸ್‌. ಯಡಿಯೂರಪ್ಪನವರು ರೈತರ ಹಿತಕ್ಕಾಗಿ,ಕೃಷಿ ಕಾರ್ಮಿಕರ ಒಳಿತಿಗಾಗಿ,ನ್ಯಾಯಕ್ಕೋಸ್ಕರ ಮಾಡಿರುವ ಪಾದಯಾತ್ರೆಗಳು ಅದೆಷ್ಟೋ!

ಈ ಹಿಂದೆ ಇದೇ ಸಿದ್ದರಾಮಯ್ಯನವರು 14 ದಿನಗಳ ಕಾಲ ಪಾದಯಾತ್ರೆಯನ್ನು ಬಳ್ಳಾರಿಗೆ ನಡೆಸಿದ್ದು ನೆನಪಿನಲ್ಲಿ ಇದೆ.

ಆದ್ದರಿಂದ ನಮ್ಮ ಪಾದಯಾತ್ರೆ ಮೂಡದಲ್ಲಿ ಆಗಿರುವ ಹಗರಣಗಳು ಯಾರು ತಪ್ಪಿತಸ್ಥರು ಆ ಕುರಿತು ಜನತಾ ನ್ಯಾಯಾಲಯದಲ್ಲಿ ನ್ಯಾಯಯುತ ತೀರ್ಪು ಕೇಳುವುದಕ್ಕಾಗಿ.

ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ