ರಾಯಚೂರು:ಮಗುವಿಗೆ ತಾಯಿಯ ಹಾಲು ಅಮೃತಕ್ಕೆ ಸಮಾನ ಹಾಲನ್ನು ಮಗುವಿಗೆ ಕುಡಿಸಬೇಕು ಎಂದು ತಾಲೂಕ ಮಟ್ಟದ ಪ್ರೋಗ್ರಾಂ ವ್ಯವಸ್ಥಾಪಕ ಅಧಿಕಾರಿ ಕುಮಾರಿ ತ್ರಿವೇಣಿ ಅವರು ಹೇಳಿದರು.
ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಗುಂಜಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ,ಜಿ.ಪಂ ಹಾಗೂ ತಾಲ್ಲೂಕ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕ ಮಟ್ಟದ ಪ್ರೋಗ್ರಾಂ ವ್ಯವಸ್ಥಾಪಕ ಅಧಿಕಾರಿ ಕುಮಾರಿ ತ್ರಿವೇಣಿ ಮಾತನಾಡಿ ಹೆರಿಗೆಯಾದ ತಕ್ಷಣ ಮಗುವಿಗೆ ತಾಯಿ ತನ್ನ ಎದೆ ಹಾಲನ್ನು ಕುಡಿಸಬೇಕು ತಾಯಿಯ ಎದೆ ಹಾಲನ್ನು ಕುಡಿಸುವುದರಿಂದ ಮಗುವಿಗೆ ಬರುವ ರೋಗಗಳು ಬಾರದಂತೆ ತಡೆಗಟ್ಟುವ ಜೊತೆಗೆ ತಾಯಿಯ ಹಾಲು ಮಗುವಿಗೆ ಜೀವ ರಕ್ಷಕ ಇದ್ದಂತೆ ಇದರಿಂದ ತಾಯಿಯ ಸೌಂದರ್ಯ ಹೆಚ್ಚಿಸುವ ಜೊತೆಗೆ ತಾಯಿ ಮಗುವಿನ ಬಾಂಧವ್ಯ ಬೆಳೆಯುತ್ತದೆ.ತಾಯಿ ಹಾಲನ್ನು ಮಗುವಿಗೆ ಕುಡಿಸಿದರೆ ತನ್ನ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣ ನೀಡಿ ಹಾಲನ್ನು ಕುಡಿಸದೆ ನಿರ್ಲಕ್ಷ್ಯ ಮಾಡಿದರೆ ಸ್ತನ ಕ್ಯಾನ್ಸರ್ ಬಂದು ಜೀವಕ್ಕೆ ಅಪಾಯವಾಗುತ್ತದೆ ಆದ್ದರಿಂದ ಎಲ್ಲಾ ತಾಯಂದಿರು ತಮ್ಮ ಮಗುವಿಗೆ ತಪ್ಪದೆ ಎದೆ ಹಾಲನ್ನು ಕುಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಮಟ್ಟದ ಪ್ರೋಗ್ರಾಂ ವ್ಯವಸ್ಥಾಪಕ ಅಧಿಕಾರಿ ಕುಮಾರಿ ತ್ರಿವೇಣಿ,PHCO ಮೋದೀನ್ ಬೀ,ಅಂಗನವಾಡಿ ಕಾರ್ಯಕರ್ತೆಯರಾದ ವಜ್ರಮ್ಮ, ಬಡೇಮಾ,ಬಸಮ್ಮ,ಅಮೃತಾ,ಆಶಾ ಕಾರ್ಯಕರ್ತೆಯರಾದ ನಬೇಬಿ ಯಂಕಮ್ಮ,ಊರಿನ ಗರ್ಭಿಣಿಯರು,ಬಾಣಂತಿಯರು ಮಹಿಳೆಯರು ಇದ್ದರು.