ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಆಶ್ರಮವಾಸಿಗಳ ಮಧ್ಯೆ ಆಚರಣೆ ಮಾಡಲಾಯಿತು ಪೂಜೆಯೊಂದಿಗೆ ಪ್ರಾರಂಭಗೊಂಡಿತು ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಗದೀಶ ಗಿರಡ್ಡಿ ಮಾತನಾಡಿ ಮಾನವರನ್ನು ವ್ಯಸನದಿಂದ ಮುಕ್ತ ಮಾಡುವ ಸಲುವಾಗಿ ಹುಟ್ಟಿಕೊಂಡ ಜೋಳಿಗೆ ಮಹಾಂತ ಜೋಳಿಗೆಯಾಗಿದೆ ಮಹಾಂತ ಜೋಳಿಗೆ ಯಾವತ್ತೂ ದುಡ್ಡು ದುಗ್ಗಾಣಿ ದವಸ ಧಾನ್ಯ ಬೇಡಲಿಲ್ಲ ಬದಲಾಗಿ ಮಾನವರು ವ್ಯಸನದಿಂದ ಹಾಳಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಮಹಾಂತ ಸ್ವಾಮೀಜಿ ಮೊದಲಿಗೆ ನನ್ನ ಸುತ್ತಮುತ್ತಲಿರುವ ಜನರನ್ನು ವ್ಯಸನ ಮುಕ್ತಗೊಳಿಸಬೇಕು ಎನ್ನುವ ಉದ್ದೇಶಕ್ಕಾಗಿ ಜೋಳಿಗೆ ಹಾಕಿಕೊಂಡು ಮನೆ ಮನೆಗೆ ತೆರಳಿ, ರಾಜ್ಯಾದ್ಯಂತ ಜೋಳಿಗೆಯು ವ್ಯಾಪಿಸುವಂತೆ ಮಾಡಿದರು ಅದರ ಫಲವಾಗಿ ನಾಡಿನಾದ್ಯಂತ ಸಾಕಷ್ಟು ಜನರನ್ನು ವ್ಯಸನದಿಂದ ಮುಕ್ತವಾಗಿ ಹಸನಾದ ಬದುಕು ಸಾಗಿಸುವಂತೆ ಮಾಡಿ ಪುಣ್ಯ ಕಟ್ಟಿಕೊಂಡ ಪುಣ್ಯಾತ್ಮ ಎಂದು ಅದೆಷ್ಟೋ ಕುಟುಂಬಗಳು ಶ್ರೀಗಳನ್ನು ಸ್ಮರಣೆ ಮಾಡುತ್ತಿವೆ ಹಾಗೂ ಅನೇಕರ ಬಾಳಲ್ಲಿ ಮಹಾಂತ ಜೋಳಿಗೆ ಹೋಳಿಗೆಯಾಗಿ ಪರಿವರ್ತನೆಯಾಗಿದೆ ಮಹಾಂತ ಸ್ವಾಮೀಜಿಯವರ ಕರುಣೆಯ ಕಂದ ಗುರು ಮಹಾಂತ ಶ್ರೀಗಳು ಜೋಳಿಗೆ ಮುನ್ನಡೆಸಿಕೊಂಡು ಹೋಗುತ್ತಿದ್ದು ತಾವು ತೆರಳುವ ಪ್ರತಿ ಕಾರ್ಯಕ್ರಮದಲ್ಲೂ ಹಾಗೂ ಮನೆಯ ಪೂಜೆ ಕಾರ್ಯಗಳಲ್ಲಿ ತೊಡಗಿದಾಗಲೂ ವ್ಯಸನಿಗಳನ್ನು ವ್ಯಸನ ಮುಕ್ತ ಮಾಡುವ ಸಲುವಾಗಿ ನಾಡಿನದ್ಯಂತ ಸಂಚರಿಸಿ ಭಕ್ತರ ಬಾಳಿಗೆ ಬೆಳಕಾಗುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಜೆಡಿ ಗೋರ್ಕಲ್ ಮಾತನಾಡಿ ಮಹಾಂತ ಶ್ರೀಗಳು ವ್ಯಸನ ಮುಕ್ತ ಮಾಡುವ ಸಲುವಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ದರಕ ವಹಿಸಿದ್ದರು ಮುಖ್ಯ ಸಂಸ್ಥೆಯ ಕಾರ್ಯದರ್ಶಿಗಳಾದ ಬಾಲಚಂದ್ರ ರವರು ವೇದಿಕೆ ಮೇಲಿದ್ದರೂ ಎಲ್ಲಾ ಆಶ್ರಮಾವಾಸಿಗಳು ಮಹಾಂತ ಶ್ರೀಗಳ ವ್ಯಸನಮುಕ್ತ ದಿನಾಚರಣೆಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.