ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಭೀಮಾಂಬಿಕಾದೇವಿ ಮಠ ದಮ್ಮೂರಿನಲ್ಲಿ ೩೬೪ ನೇ ಶಿವಾನುಭವ ಗೋಷ್ಠಿ ,ಪ್ರತಿಭಾ ಪುರಸ್ಕಾರ,ಸಂಗೀತ ಕಾರ್ಯಕ್ರಮ

ಯಲಬುರ್ಗಾ:ಗುರು ಎಂದರೆ ಯಾರು?ಯಾರಿಗೆ ಗುರು ಎನ್ನುತ್ತೇವೆ, ಅಂದರೆ ನಮ್ಮ ಬಾಳಿನ ಅಂದಕಾರವನ್ನು ಕಳೇದು ಹಾಕಿ ಬೆಳಕನ್ನು ನೀಡುತ್ತಾರೆ ಅವರಿಗೆ ನಾವು ಗುರು ಎಂದು ಕರೆಯುತ್ತೇವೆ,ನಾವೆಲ್ಲರೂ ಶರಣರ ವಚನಗಳನ್ನು ಆಲಿಸಬೇಕು,ಸತ್ಸಂಗದಿಂದ ಹತ್ತಿರವಿದ್ದಾಗ ಸುವಿಚಾರಗಳನ್ನು ಅರಿತುಕೊಂಡು ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯ ಎಂದು ಗಿಣಿಗೇರಾ ಆನೆಗುಂದಿ ಪೀಠದ ಶ್ರೀಕಂಠಸ್ವಾಮಿಗಳು ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೪ ನೇ ಶಿವಾನುಭವಗೋಷ್ಠಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀ ಗುರು ವಚನೋಪದೇಶ ಚಿಂತನ ವಿಷಯ ಕುರಿತು ಮಾತನಾಡಿದರು. ಸಂಸಾರದ ಜಂಜಾಟದ ಬದುಕಿನಲ್ಲಿ ನಮ್ಮ ಚಿಂತೆಗಳು ದೂರವಾಗಬೇಕಾದರೆ ಪ್ರತಿಯೊಬ್ಬರೂ ಶಿವಾನುಭವ ,ಧಾರ್ಮಿಕ ಕಾರ್ಯಕ್ರಮದಲ್ಲಿ ಶರಣರ ನುಡಿಗಳನ್ನು ಅರಿತುಕೊಳ್ಳಬೇಕು ಆಗ ನಮ್ಮ ಚಿಂತೆಗಳು ದೂರವಾಗಿ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಮಿತಿಯ ಗುರುಮೂರ್ತಿ ಬಡಿಗೇರ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್.ಪಾಟೀಲ, ನಿಂಗಪ್ಪ ಹಳ್ಳಿಕೇರಿ,ರಸೂಲಸಾಬ ಹಿರೇಮನಿ ಅವರು ಮಾತನಾಡಿದರು.ಧರ್ಮರ ಮಠದ ಹನುಮಂತ್ಪಜ್ಞ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಈ ವೇಳೆ ಕನ್ನಡ ಕೋಗಿಲೆ ಅರ್ಜುನ ಇಟಗಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಸಹ ಕಲಾವಿದರಾದ ಡಿ.ಮೌನೇಶ ಬಡಿಗೇರ, ಯಮನೂರಪ್ಪ ಹಳ್ಳಿಕೇರಿ, ನೀಲಕಂಠಪ್ಪ ರೊಡ್ಡ‌ರ್, ಕಳಕಪ್ಪ ಹಡಪದ,ಮುತ್ತಪ್ಪ ಬಡಿಗೇರ ಸಂಗೀತ ಸೇವೆ ನಿಡಿದರು. ಕಾರ್ಯಕ್ರಮದಲ್ಲಿ ಮಾಜಿ ಪ.ಪಂಚಾತಯತ ಸದಸ್ಯರಾದ ಬಸಪ್ಪ ಕಮ್ಮಾರ,ಮುಖಂಡರಾದ ಯಮನೂರಸಾಬ ಭೂನಕೊಪ್ಪ, ನೀಲಪ್ಪ ಗುರಿಕಾರ, ಹನುಮಂತ್ಪ ಕಮ್ಮಾರ, ಮಹೇಶ್ವರ ಜಕ್ಕಲಿ, ಈರಪ್ಪ ರಾವಣಕಿ, ಯಮನೂರಪ್ಪ ಡಿ.ಹರಿಜನ, ಡಾ.ಬಸವರಾಜ ಪ್ರಭಣ್ಣನವರ, ಭೀಮಣ್ಣ ಜರಕುಂಟಿ, ದುರಗೇಶ ಹರಿಜನ ಡಾ. ಪ್ರಕಾಶ ರಾವಣಕಿ, ಭೀಮಣ್ಣ ಚಿಕ್ಕಗೌಡ್ರ,ಬಸವರಾಜ ಮರಗಪ್ಪನವರ,ಶರಣೇಗೌಡ ದ್ಯಾಮನಗೌಡ್ರ, ಬಸವರಾಜ ಹಳ್ಳಿಕೇರಿ,ಗ್ರಾಮ ಪಂಚಾಯತ,ಶಿವಾನುಭವ,ನವಜೀವನ ಸಮಿತಿ ಸದಸ್ಯರು,ಗ್ರಾಮದ ಹಿರಿಯರು ಇದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿಯ ಸದಸ್ಯರು ಶ್ರೀ ಮಂಜುನಾಥ್ ಸ್ವಾಮೀಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಭಜನೆ ಮಾಡಿದರು.ಈ ವೇಳೆ ದಮ್ಮೂರ ಗ್ರಾಮದ ೨೦೨೩- ೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೮೫% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಕು.ವಿದ್ಯಾ ಶ್ರೀ, ರಾವಣಕಿ, ಅನ್ನಪೂರ್ಣ ಮಂಡಾಲಿ,ಶಂಕ್ರಮ್ಮರಾಠೋಡ, ಶೋಭಾ ಕಮ್ಮಾರ, ವಿಶಾಲಾಕ್ಷಿ ಹಳ್ಳಿಕೇರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವರದಿ ಬಸವರಾಜ ಕೆ ಕಳಸಪ್ಪನವರ,ಯಲಬುರ್ಗಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ