ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ಮಿತಾ ಅಮೃತರಾಜ್ ಅವರಿಗೆ ‘ಅಪ್ಪ ಪ್ರಶಸ್ತಿ’ ಪ್ರದಾನ

ಮಡಿಕೇರಿ : ತಾಲೂಕಿನ ಚೆಂಬು ಗ್ರಾಮದ ಪ್ರತಿಭಾವಂತ ಕವಯತ್ರಿ ಹಾಗೂ ಲೇಖಕಿ ಸ್ಮಿತಾ ಅಮೃತರಾಜ್ ಅವರ ‘ನೆಲದಾಯ ಪರಿಮಳ’ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಮಟ್ಟದ ‘ಅಪ್ಪ ಪ್ರಶಸ್ತಿ’ ದೊರೆತಿದ್ದು, ಭಾನುವಾರ ತುಮಕೂರಿನ ಕನ್ನಡ ಭವನದಲ್ಲಿ ನಡೆದ ‘ಮುಂಗಾರು ಕವಿಗೋಷ್ಠಿ’ಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಧ್ವನಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಚೊಚ್ಚಲ ವರ್ಷದ ಈ ‘ಅಪ್ಪ ಪ್ರಶಸ್ತಿ’ಯನ್ನು ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ ಮತ್ತು ಸಂಘಟಕ ಟಿ. ಸತೀಶ್ ಜವರೇಗೌಡ, ಲೇಖಕಿ ಬಾ.ಹ. ರಮಾಕುಮಾರಿ, ಹಡವನಹಳ್ಳಿ ವೀರಣ್ಣಗೌಡ ಸ್ಮಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಐದು ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪತ್ರ ಒಳಗೊಂಡಿದೆ.

ಸ್ಮಿತಾ ಅಮೃತರಾಜ್ ಅವರು ಈ ವರೆಗೆ ಒಟ್ಟು ಏಳು ಪುಸ್ತಕಗಳನ್ನು ರಚಿಸಿದ್ದಾರೆ. ಕಾಲ ಕಾಯುವುದಿಲ್ಲ, ತುಟಿಯಂಚಿನಲ್ಲಿ ಉಳಿದ ಕವಿತೆಗಳು, ಮಾತು ಮೀಟಿ ಹೋಗುವ ಹೊತ್ತು (ಕವನ ಸಂಕಲನ), ಅಂಗಳದಂಚಿನ ಕನವರಿಕೆಗಳು, ಒಂದು ವಿಳಾಸದ ಹಿಂದೆ, ನೆಲದಾಯ ಪರಿಮಳ (ಲಲಿತ ಪ್ರಬಂಧ) ಹಾಗೂ ಹೊತ್ತು ಹೊತ್ತಗೆ (ಪುಸ್ತಕ ಪರಿಚಯ) ಪ್ರಕಟಿತ ಗಮನಾರ್ಹ ಕೃತಿಗಳಾಗಿವೆ.

ಕನ್ನಡದ ಸೃಜನಶೀಲ ಬರಹಗಾರ್ತಿಯಾಗಿರುವ ಸ್ಮಿತಾ ಅಮೃತರಾಜ್ ೨೦೨೧ರಲ್ಲಿ ದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಹೈದರಾಬಾದಿನಲ್ಲಿ ನಡೆದ ಹೊರನಾಡ ಕನ್ನಡಿಗರ ಕವಿಗೋಷ್ಠಿ, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಮೈಸೂರು ಕವಿಗೋಷ್ಠಿ, ಮಡಿಕೇರಿ, ಬೆಂಗಳೂರು ಆಕಾಶವಾಣಿ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿರುವುದು ವಿಶೇಷ.

ಇವರ ಸಾಹಿತ್ಯ ಸೇವೆಗೆ ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ, ಜಿಲ್ಲಾ ಕಸಾಪದ ಕೊಡಗಿನ ಗೌರಮ್ಮ ಪ್ರಶಸ್ತಿ, ಸಾಭಿಮಾನಿ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ