ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕು
ಅಕ್ಷರಗಳ ಬೀಜವ,
ಬೆಳೆಯಬೇಕು ಶಿಕ್ಷಣದ ಹೆಮ್ಮರವ//
ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕು
ಮಕ್ಕಳ ಭವಿಷ್ಯದಲಿ//
ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕು
ಸಾಲು ಸಾಲು ಬೆಳೆಯಂತೆ,
ಬೆಳೆದು ಮಾನವನಾಗಿ
ದೇಶ ಕಟ್ಟುವಂತೆ//
ಹೂತ ಬೀಜಗಳೆಲ್ಲ ಎದ್ದು
ಆಕಾಶದೆಡೆಗೆ ಚಿಮ್ಮಬೇಕು
ಡಾ.ಬಿ.ಆರ್.ಅಂಬೇಡ್ಕರರಂತೆ
ಭಾವಿ ಸಸಿಗಳೆಲ್ಲ
ಸಧೃಡವಾಗಿ ನಿಲ್ಲುವಂತೆ//
ರೈತನಾಗಬೇಕು ಶಿಕ್ಷಕ
ಮಕ್ಕಳ ಬಾಳಿನಲಿ
ಹದವರಿತು ಬಿತ್ತನೆ ಮಾಡಲು,
ಹರುಷಪಡಬೇಕು ಬೆಳೆದ ಬೆಳೆಯ ಕಂಡು ಬದುಕಿನಲಿ
ಸಾರ್ಥಕತೆ ಮೆರೆಯಲು//
ರಚನೆ:ಹನುಮಂತರಾವ್ ನಾಗಪ್ಪಗೋಳ ಸಾಹಿತಿಗಳು,ಗೋಕಾಕ ಜಿ:ಬೆಳಗಾವಿ