ಬದುಕೊಂದು ತೂಗುವ ಉಯ್ಯಾಲೆ
ಸಿಹಿ ಕಹಿಗಳು ತುಂಬಿದ ಸರಮಾಲೆ
ವಿರಸವು ಮೂಡಿದೊಡೆ ಅಗ್ನಿ ಜ್ವಾಲೆ
ಸರಸ ಮಿಶ್ರಿತ ಸುಂದರ ಹೂಮಾಲೆ.
ನಗು ನಗುತಾ ಸಾಗುತಿರಲು ಬಾಳು
ಇರದು ಬದುಕಲಿ ಯಾವ ಗೋಳು
ಸಹಜವೇ ತಾನೆ ನಿತ್ಯ ಏಳು ಬೀಳು
ತಾಳ್ಮೆಯ ವಹಿಸುತ ಮೇಲೆ ಏಳು.
ಹೃದಯ ಪ್ರೇಮದ ಸ್ವಚ್ಛ ಬಂಧನ
ಪ್ರೀತಿ ವಾತ್ಸಲ್ಯ ಸಿಹಿಯ ಸಿಂಚನ
ಹೊಂದಿ ಬಾಳಲು ಸಮರಸ ದಿನ
ಸುಂದರ ನಿನ್ನಯ ನಿತ್ಯ ಜೀವನ.
ನಿನ್ನ ಪಾಲಿಗೆ ಸಿಕ್ಕ ಪಂಚಾಮೃತ
ಸ್ವೀಕರಿಸಿ ನಡೆ ತಲೆಯ ಬಾಗುತ
ನೊಂದ ಮನಕೆ ನೀ ಸ್ಪಂದಿಸುತ
ನಗುತಾ ಬಾಳು ನೀ ಇರುವ ತನಕ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ,ಎಸ್.
ಪಾವಗಡ ತಾಲ್ಲೂಕು.



















