ಬಾಗಲಕೋಟೆ:ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಆದರ್ಶತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ವೇಮ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ,ಹಿಂದೆ ಹೇಮರಡ್ಡಿ ಮಲ್ಲಮ್ಮಳನ್ನು ಕೇವಲ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೆವು. ಆದರೆ ಇಂದು ಪೂಜ್ಯ ವೇಮನಾನಂದ ಮಹಾಸ್ವಾಮಿಗಳು ಏರೆಹೊಸಲ್ಲಿಯಲ್ಲಿ ಪೀಠ ಸ್ಥಾಪಿಸಿದ ಮೇಲೆ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನರ ದೇವಸ್ಥಾನಗಳು ನಿರ್ಮಾಣವಾಗಿ ಇಬ್ಬರೂ ಮಹಾತ್ಮರನ್ನು ನಿತ್ಯವೂ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಪೂಜ್ಯರ ಪರಿಶ್ರಮ ಕಾರಣ ಎಂದರು.ಮಹಾಯೋಗಿ ವೇಮನರು ಜಗತ್ತು ಕಂಡ ಮಹಾನ್ ಯೋಗಿಯಾಗಿದ್ದು ಅವರ ಸಾಹಿತ್ಯ, ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಅವರು ನೀಡಿದ ಸಂದೇಶ ಪಾಲಿಸಿ ಸಮಾಜವನ್ನು ಮುನ್ನಡೆಸಿ ಇತರೆ ಸಮಾಜಕ್ಕೆ ಮಾದರಿಯಾಗೋಣ ಎಂದು ಹೇಳಿದ ಏಚ್.ಕೆ.ಪಾಟೀಲ, ನಮ್ಮ ಸಮಾಜದ ಕುಲಕಸುಬು ಒಕ್ಕಲುತನವನ್ನು ಮರೆಯುವುದು ಬೇಡ. ಕೃಷಿ ನಮ್ಮತನವನ್ನು ಸದಾ ನೆನಪಿಸುತ್ತದೆ. ಅನ್ಯಾಯದ ವಿರುದ್ಧ ಹೋರಾಡುವ ನಮ್ಮ ಸಮಾಜದ ಗುಣ ಮುಂದುವರೆಯಲಿ. ಈ ನಿಟ್ಟಿನಲ್ಲಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರು ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಲಿ ಎಂದು ಹೇಳಿದರು. ಮೆಟಗುಡ್ಡ ಗ್ರಾಮದಲ್ಲಿ ಸಮಾಜದ ರಚನಾಕಾತ್ಮಕ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಹಿರಿಯರು, ಯುವಕರ ಕಾರ್ಯ ಅಭಿನಂದನಾರ್ಹ ವಾಗಿದೆ ಎಂದು ಪಾಟೀಲ ಹೇಳಿದರು. ಪೂಜ್ಯ ವೇಮನಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಅನೇಕ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್.ಪಾಟೀಲ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಪಿ.ಏಚ್.ಪೂಜಾರ, ಶಾಸಕ ಎನ್.ಏಚ್.ಕೋನರಡ್ಡಿ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಆರ್.ವಿ.ಪಾಟೀಲ, ಹಿರಿಯರಾದ ಶಿವನಗೌಡ ನಾಡಗೌಡ, ಕಲ್ಲಪ್ಪ ನಾಯಕ, ವೆಂಕಟೇಶ ನಾಡಗೌಡ, ಕಲ್ಲಪ್ಪ ಅರಳಿಕಟ್ಟಿ, ರಮೇಶ ಅಣ್ಣಿಗೇರಿ, ಶಿವಾನಂದ ಮರೆಗುದ್ದಿ, ರೇಣುಕಾ ಗಿರಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.