ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಮೈಲೇಶ್ವರ ಆರಾಧ್ಯ ದೇವರಾದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿ. 05-08-2024 ರಿಂದ 09-09-24 ರವರೆಗೆ ಬಸವ ಪುರಾಣವನ್ನು ಊರಿನ ಶ್ರೀ ಮ.ನಿ.ಪ್ರ.ಕಾಶಿನಾಥ ಮಹಾ ಸ್ವಾಮಿಗಳು ಮತ್ತು ಶ್ರೀ ಮ.ನಿ.ಪ್ರ.ಚನ್ನಬಸವ ಮಹಾ ಸ್ವಾಮಿಗಳು ಹಾಗೂ ಗುಂಡಕನಾಳದ
ಶ್ರೀ ಷ.ಪ್ರಭುಲಿಂಗ ಶಿವಾಚಾರ್ಯ ಹೀರೆಮಠ ಹಾಗೂ ದೇ.ಹಿಪ್ಪರಗಿ ಶಾಸಕರುಗಳಾದ ಶ್ರೀ ಮಾನ್ಯ ರಾಜುಗೌಡ.ಬ.ಪಾಟೀಲ,ಕು.ಸಾಲವಾಡಗಿ ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟಿಸಿದರು.
ಮಾನ್ಯ ರಾಜುಗೌಡರು ಈ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಈ ಕಲ್ಯಾಣ ಮಂಟಪವು ಭಕ್ತರ ದೇಣಿಗೆ ಮತ್ತು.ಎಂ.ಪಿ.,ಶಾಸಕರು,ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ ಸದಸ್ಯರಿಂದ ಒಟ್ಟು ಸಂಗ್ರಹವಾದ ₹1.10 ಕೋಟಿ ಅನುದಾನದ ಕ್ರೂಡಿಕರಣದಿಂದ ಭವ್ಯವಾದ ಕಲ್ಯಾಣ ಮಂಟವನ್ನು ನಿರ್ಮಿಸಿದ ಬಸವೇಶ್ವರ ಸಮಿತಿಗೆ ಹಾಗೂ ಗ್ರಾಮದ ಗುರುಹಿರಿಯರಿಗೆ ಅಭಿನಂದನೆಗಳು ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಸರ್ಕಾರ ಗ್ಯಾರಂಟಿ ಯೋಜನೆಗೆ 90%ಹಣವನ್ನು ಖರ್ಚು ಮಾಡುತ್ತಿರುವದರಿಂದ ಅವರ ಪಕ್ಷದ ಶಾಸಕರಿಗೆ ಮತ್ತು ವಿರೋಧ ಪಕ್ಷದ ನಮಗೆ ಅನುದಾನ ಸರಿಯಾಗಿ ದೊರಕದಿರುವ ಕಾರಣ ನಮ್ಮ ಕ್ಷೇತ್ರದಲ್ಲಿ ಜನಸಾಮಾನ್ಯರ ಕುಂದುಕೊರತೆಗಳನ್ನು ಬೇಡಿಕೆಗ ಈಡೇರಿಸಲು ನಮಗೆ ಬಹಳ ಸಮಸ್ಯೆ ಇದೆ ಆದರೂ ಕೂಡಾ ನಮ್ಮ ಶಾಸಕರ ಅನುದಾನದಲ್ಲಿ ಶೀಘ್ರದಲ್ಲೇ 5,00,000 ರೂಗಳು ಈ ದೇವಸ್ಥಾನದ ಸಮಿತಿಯವರ ಕೈ ಸೆರಲಿದೆ ಎಂದು ಹೇಳಿದರು.ಇವರುಗಳಲ್ಲದೆ ಈ ಸಮಾರಂಭದಲ್ಲಿ ಮಾಜಿ ಜಿ.ಪಂ.ಸದಸ್ಯರುಗಳಾದ ಶ್ರೀ ಬಸನಗೌಡ ವಣಕ್ಯಾಳ,,ತಾ.ಪಂ.ಮಾಜಿ ಸದಸ್ಯರುಗಳಾದ ಶ್ರೀ ಸೋಮನಗೌಡ ಹಾದಿಮನಿ,ಶ್ರೀ ಮಲ್ಲನಗೌಡ ಎಸ್ ಪಾಟೀಲರು ಗ್ರಾಮ ಪಂ ಅಧ್ಯಕ್ಷರು ಬೊಮ್ಮನಹಳ್ಳಿ ಸ್ಥಳೀಯ ಬ್ರಿಲಿಯಂಟ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹೈಸ್ಕೂಲ ಅಧ್ಯಕ್ಷರಾದ ನಾನಾಗೌಡ ನಡುವಿನಮನಿ,ಶ್ರೀ ವಿನಾಯಕ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಶ್ರೀ ಸಂಗಮೇಶ ದೇಸಾಯಿ,ತಾಳಿಕೋಟಿ ವಿಕಾಸ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಶ್ರೀ ರಾಮನಗೌಡ ಬಾಗೇವಾಡಿ‌,ಗವಾಯಿಗಳಾದ ಶಾಂತಗೌಡ ಮಾಲಿ ಪಾಟೀಲ ಸಾ.ಕಡಕಲ್ಲ ಸೇರಿದಂತೆ
ಗ್ರಾಮದ ಸಕಲ ಸದ್ಭಕ್ತರು ಬಾಗವಹಿಸಿದ್ದರು.
ಈ ಸಭೆಯ ನಿರೂಪಣೆಯನ್ನು ಸಾಹೇಬಗೌಡ.ಯ.ಬಿರಾದರ ಮಾಡಿದರು,
ಶ್ರೀ ಪ್ರಭು.ಬ.ಚನ್ನೂರ ಪಿಡಿಒ ಗ್ರಾ.ಪಂ.ಬೊಮ್ಮನಹಳ್ಳಿ ಅವರು ವಂದಿಸಿದರು

ವರದಿ-ಸಂಗಪ್ಪ.ಸಿ.ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ