ಪಾವಗಡ :ಗೋಕಾಕ್ ತಾಲೂಕಿನ ಅತ್ಯಂತ ಕುಗ್ರಾಮಗಳಾದ ಮಸಾಗುಪ್ಪೆ, ಹುಣಸೆಹಾಳ್ ಗ್ರಾಮಗಳ ಸರಿಸುಮಾರು 1,000 ರೈತಾಪಿ ಹಾಗೂ ಕೂಲಿ ಕಾರ್ಮಿಕರಿಗೆ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸ್ವಾಮಿ ಜಪಾನಂದಜಿ ಮಹಾರಾಜ್ ರವರ ನೇತೃತ್ವದಲ್ಲಿ ಮೊದಲ ಹಂತದ ಪರಿಹಾರ ಯೋಜನೆ ಆರಂಭವಾಯಿತು.
ಸಾರ್ವಜನಿಕರು ಪೂಜ್ಯ ಸ್ವಾಮೀಜಿ ರವರ ಹೃದಯವಂತಿಕೆ ಹಾಗೂ ಇನ್ಫೋಸಿಸ್ ಫೌಂಡೇಶನ್ ನ ಸಹಾಯವನ್ನು ಶ್ಲಾಘಿಸಿದರು. ಸ್ಥಳೀಯ ವಿದ್ಯಾರ್ಥಿಪರಿಷತ್ ನ ಸ್ವಯಂ ಸೇವಕರು ಅದ್ಭುತವಾಗಿ ಸಹಕಾರ ನೀಡಿದರು. ಜೊತೆಗೆ ಗ್ರಾಮಸಭೆಯ ಅಧ್ಯಕ್ಷರು ಮತ್ತು ಇತರರು ಸೇವಾಕಾರ್ಯದಲ್ಲಿ ಭಾಗಿಯಾದರು. ಒಟ್ಟಿನಲ್ಲಿ ಎತ್ತಣ ಕೋಗಿಲೆ, ಎತ್ತಣ ಮಾಮರ ಎಂಬಂತೆ ಸುಮಾರು 500 ಕಿ ಮೀ. ಇಂದ ಶ್ರೀ ರಾಮಕೃಷ್ಣ ಸೇವಾಶ್ರಮ, ವಿವೇಕಾನಂದ ತಂಡ ಹಾಗೂ ಇನ್ಫೋಸಿಸ್ ಫೌಂಡೇಶನ್ ರವರು ಸಹಕರಿಸಿದರ ಫಲವಾಗಿ ಪೂಜ್ಯ ಸ್ವಾಮಿ ಜಪಾನಂದಜಿ ರವರು ಈ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಸ್ವಾಮಿ ವಿವೇಕಾನಂದರು ಬಯಸಿದ ತ್ಯಾಗ – ಸೇವೇಯೇ ಜೀವನದ ಮೂಲ ಉದ್ದೇಶವಾಗಿಟ್ಟುಕೊಂಡು ಆಹರ್ನಿಷಿ ಸೇವಾಯಜ್ಞವನ್ನು ನಡೆಸುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜಿ ರವರಿಗೆ ದೇಶದ ನಾನಾ ರಾಜ್ಯಗಳಲ್ಲಿ ಗೌರವ ದೊರೆಯುತ್ತಿರುವುದು ನಿಜಕ್ಕೂ ಸ್ವಾಮಿ ವಿವೇಕಾನಂದರ ಶಕ್ತಿಯಲ್ಲದೆ ಮತ್ತೇನು ಎನ್ನಬಹುದು.
ಈ ಸಂದರ್ಭದಲ್ಲಿ ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸ್ಥಳೀಯ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ :ಕೆ.ಮಾರುತಿ ಮುರಳಿ