ಶನೇಶ್ವರಸ್ವಾಮಿ ಮೊದಲ ಶ್ರಾವಣಕ್ಕೆ ಸಕಲ ಸಿದ್ದತೆ
ಪಾವಗಡ: ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶನೀಶ್ವರನ ದೇವಸ್ಥಾನಗಳಿದ್ದರೂ ಸಹ ತುಮಕೂರು ಜಿಲ್ಲೆಯ ಪಾವಗಡ ಪ್ರಮುಖ ಶನಿಮಹಾತ್ಮ ದೇವರ ಕ್ಷೇತ್ರ. ಶನೇಶ್ವರ ದೇವಸ್ಥಾನದ ವಿಶಿಷ್ಠತೆ ಕರ್ನಾಟಕ ಸೇರಿದಂತೆ ಆಂದ್ರ, ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳಿಗೂ ಪ್ರಭಾವ ಬೀರಿದೆ. ಶನಿ ದೋಷ ನಿವಾರಣೆಗೆ ಶನಿ ದೇವರನ್ನು ಆರಾಧಿಸುವ ರೂಢಿಯಾಗಿದೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿವಿಧ ರಾಜ್ಯಗಲಿಂದ ಸುಮಾರು 50,000 ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ಶನೇಶ್ವರ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಸಾಮಾನ್ಯ ಜನರು, ರಾಜಕಾರಣಿಗಳು, ಸಿನಿಮಾ ತಾರೆಯರು, ಉದ್ಯಮಿಗಳು. ಸರ್ಕಾರಿ ಅಧಿಕಾರಿಗಳು ಎಲ್ಲ ವರ್ಗಗಳ ಜನರೂ ಶನೀಶ್ವರ ಸ್ವಾಮಿ ದರ್ಶನ ಪಡೆಯುತ್ತಾರೆ. ಉದ್ಯೋಗ ಆಕಾಂಕ್ಷಿಗಳು, ಮಕ್ಕಳಿಲ್ಲದವರು, ಮದುವೆ ಯೋಗ ಇಲ್ಲದವರು ಸ್ವಾಮಿಯ ದೇವಾಲಯಕ್ಕೆ ಹರಕೆ ಹೊತ್ತು ಬರುತ್ತಾರೆ. 3 ತಿಂಗಳಲ್ಲಿ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವಿಶಿಷ್ಟ ಶಕ್ತಿದೇವತೆ ಸೀತಲಾ ದೇವಿಯು ಸಹ ದೇವಸ್ಥಾನದ ಪ್ರಾಂಗಣದ ಸನ್ನಿಧಿಯಲ್ಲಿದೆ.
ಸ್ವಾಮಿಯ ದರ್ಶನಕ್ಕೆ ಭಕ್ತರ ಸಾಗರವೇ ಬರುವುದರಿಂದ ದರ್ಶನಕ್ಕೆಂದು ಬರುವ ಭಕ್ತಾಧಿಗಳಿಒಗೆ ವಿಶೇಷವಾಗಿ ಮಳೆ, ಬಿಸಿಲು ಸಮಸ್ಯೆ ಆಗದಂತೆ ಸರತಿಯಲ್ಲಿ ನಿಂತು ದರ್ಶನಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ಸುಗಮವಾಗಿ ಬರುವಂತೆ ಗ್ರಿಲ್ ಗಳು ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಒಳಗಡೆ ಹಾಗೂ ಅಕ್ಕಪಕ್ಕದಲ್ಲಿ ತೆಂಗಿನ ಕಾಯಿ ಹೊಡೆಯವುದನ್ನು ನಿಷೇಧಿಸಲಾಗಿದೆ.
ಸೇವೆಗಳು:
ಶನೀಶ್ವರ ದೇವಸ್ಥಾನದಲ್ಲಿ ನಿತ್ಯ ನಡೆಯುವ ‘ಸರ್ವ ಸೇವೆ’ ಪ್ರಮುಖವಾದದು. ಭಕ್ತರು ಇಲ್ಲಿಗೆ ಬರುವುದು ಸರ್ವ ಸೇವೆಗಾಗಿ. ಶನೇಶ್ವರ ಸ್ವಾಮಿಗೆ ಪ್ರಧಾನ ಪೂಜೆ, ಸೀತಲಾಂಬೆಗೆ ಕುಂಕುಮಾರ್ಚನೆ, ನವಗ್ರಹಗಳಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ ಇತ್ಯಾದಿಗಳೂ ‘ಸರ್ವ ಸೇವೆ’ಯಲ್ಲಿ ಒಳಗೊಂಡಿವೆ.
ಮುಂಜಾನೆ 3 ಗಂಟೆಯಿಂದ ವಿಶೇಷ ಪೂಜೆ ರಾತ್ರಿ 7 ಗಂಟೆಗೆ ಮಹಾ ಮಂಗಳ ಆರತಿ ಬೆಳಗಿಸಿ ಪೂಜೆಯನ್ನು ಮಾಡಲಾಗುತ್ತಿದೆ.
ಬರುವ ಭಕ್ತಾಧಿಗಳಿಗೆ ತುರ್ತು ಆರೋಗ್ಯ ಸೇವೆಯನ್ನು ಸಹ ಆರೋಗ್ಯ ಇಲಾಖೆ ವತಿಯಿಂದ ವ್ಯವಸ್ಥೆ ಮಾಡಲಾಗಿರುತ್ತದೆ.
ಶನೇಶ್ವರ ದೇವಸ್ಥಾನಕ್ಕೆ ಮಾರ್ಗ:
ಪಾವಗಡಕ್ಕೆ ಕೆ,ಎಸ್,ಆರ್,ಟಿ ಬಸ್‌ಗಳ ಸೌಕರ್ಯವಿದೆ. ಪಾವಗಡ ತುಮಕೂರಿನಿಂದ 100 ಕಿ.ಮೀ, ಚಿತ್ರದುರ್ಗದಿಂದ 95 ಕಿ.ಮೀ,ಆಂದ್ರದ ಅನಂತಪುರದಿಂದ 100 ಕಿ.ಮೀ, ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ.
ಬೆಂಗಳೂರಿನಿಂದ ಬರುವವರು ಹಿಂದೂಪುರ ಮಾರ್ಗ ಹಾಗೂ ಕೊರಟಗೆರೆ, ಮಧುಗಿರಿ ಮಾರ್ಗವಾಗಿ ಬರಬಹುದು.
ದೇವಸ್ಥಾನದ ಟ್ರಸ್ಟಿನ ವಸತಿ ಗೃಹಳಿವೆ 300,400,500 ರೂ ಮತ್ತು ಎ.ಸಿ ರೂಂಗೆ 950 ರೂ ದರದ ಕೊಠಡಿಗಳ ವಸತಿ ಗೃಹಗಳಿವೆ.
ನಾಳೆ ಶ್ರಾವಣ ಮಾಸದ ಮೊದಲನೇ ಶನಿವಾರ ಆಗಿರುವುದರಿಂದ ನಮ್ಮ ನಿರೀಕ್ಷೇ 50,000 ರಿಂದ 60,000 ಭಕ್ತಾಧಿಗಳು ಬರುವ ನಿರಿಕ್ಷೆ ಇದೆ,ಆಗಮಿಸುವ ಭಕ್ತಾಧಿಗಳೆಲ್ಲರಿಗೂ ಸುಸಜ್ಜಿತವಾದ ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಕಳೆದ ಭಾರಿಯ ಸಮಸ್ಯೆಗಳನ್ನು ಈ ಭಾರಿ ಭಕ್ತತಾಧಿಗಳಿಗೆ ಆಗದಂತೆ ಕ್ರಮವಹಿಸಲಾಗಿದೆ. ಭಕ್ತರಿಗೆ ಶುಕ್ರವಾರ ಸಂಜೆ, ಶನಿವಾರ ಬೆಳಿಗ್ಗೆ ಮತ್ತು ಸಂಜೆ, ಭಾನುವಾರ ಬೆಳಿಗ್ಗೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಆನಂದ್ ರಾವ್ . ಅಧ್ಯಕ್ಷರು ದೇವಸ್ಥಾನದ ಕಾರ್ಯಕಾರಿ ಸಮಿತಿ ಇವರು ತಿಳಿಸಿದರು.
ಶನೇಶ್ವರ ದೇವಸ್ಥಾನದ ನೂರು ಮೀಟರ್ ದೂರದಿಂದಲೇ ಮೊಬೈಲ್,ಆಭರಣ, ಹಣ ಹಾಗೂ ಜೇಬು ಕಳ್ಳತನ ಆಗದಂತೆ 360 ಡಿಗ್ರಿಯಲ್ಲಿ ಕಾರ್ಯನಿರ್ವಹಿಸುವ ಒಟ್ಟು 26 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಮ್ಮ ಸಿಬ್ಬಂಧಿಯ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು
ವೃತ್ತ ನಿರೀಕ್ಷಕರು ಪಾವಗಡ ಪೊಲೀಸ್ ಠಾಣೆ ಇವರು ತಿಳಿಸಿದರು.
ವರದಿ:ಕೆ.ಮಾರುತಿ ಮುರಳಿ