ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಾಗಲಮಡಿಕೆಯಲ್ಲಿ ನೆಲಸಿರುವ ಶ್ರೀ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗಪಂಚಮಿ ಪ್ರಯುಕ್ತ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ, ನಾಗಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ, ಹುತ್ತಕ್ಕೆ ಹಾಲನ್ನೆರೆದು ಭಕ್ತಿಯಿಂದ ನಮಿಸಿದರು.
ಪ್ರತಿ ವರ್ಷ ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಾರಿ ಜಾತ್ರೆ ನಡೆಯುತ್ತದೆ, ಈ ಜಾತ್ರಾ ಮಹೋತ್ಸವದಲ್ಲಿ ತೇರು ಎಳೆಯಲು ಎಷ್ಟೊಂದು ಜನ ಸಮೂಹ ಬರುತ್ತದೆ, ಬರೀ ಕರ್ನಾಟಕ ರಾಜ್ಯದಿಂದ ಅಲ್ಲದೇ ಆಂದ್ರ ತೆಲಂಗಾಣ ತಮಿಳುನಾಡು ಮೊದಲಾದ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.
ಭಕ್ತರು ನಾಗರ ಪಂಚಮಿಯಂದು ನಾಗರ ವಿಗ್ರಹಕ್ಕೆ, ಹುತ್ತಕ್ಕೆ ಹಾಲನ್ನು ಹಾಕಿ ಪೂಜಿಸಿದರೆ ನಾಗ ದೋಷ, ನಾಗ ಪೀಡೆ ನಿವಾರಣೆ ಆಗುತ್ತದೆ ಎಂಬ ನಂಬಿಕೆಯಿಂದ ನೂರಾರು ಭಕ್ತರು,ವಿಶೇಷವಾಗಿ ಮಹಿಳೆಯರು ಹಾಲನ್ನು ಹುತ್ತಕ್ಕೆ ಎರೆದು ಭಕ್ತಯಿಂದ ಕೈ ಮುಗಿದು ಸಂತೃಪ್ತರಾದರು.
ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಬದ್ರಿನಾಥ್ ಸ್ವಾಮಿಗಳು ಮಾತನಾಡಿ ನಾಗರ ಪಂಚಮಿಯಂದು ಹಾಲಿನ ಅಭಿಷೇಕ, ಕುಂಕುಮಾರ್ಚನೆ ಇನ್ನೂ ಇನ್ನಿತರೆ ವಿಶೇಷ ಪೂಜೆ ಕೈಂಕರ್ಯಗಳನ್ನು ಮಾಡಿ ನಾಗ ದೋಷ, ನಾಗ ಪೀಡೆ, ಕಿವಿ ಸೋರುವಿಕೆಯಂತಹ ಸಮಸ್ಯೆಗಳು ನಿವಾರಣೆ ಆಗಲಿ ಎಂದು ಪೂಜಿಸಲಾಯಿತು ಎಂದರು.
ಸುಬ್ರಹ್ಮಣ್ಯ ದೇವಸ್ಥಾನದ ಪೂಜಾರಿಗಳಾದ ಬದ್ರಿನಾಥ್ ರವರು ಮಾತನಾಡಿ ನಾಗರಪಂಚಮಿ ದಿನ ಪೂಜೆ, ಅಭಿಷೇಕ ಮಾಡುವುದರಿಂದ ಮಾಡಿದ ಪಾಪಗಳು ನಿವಾರಣೆಯಾಗುತ್ತದೆ, ಜೊತೆಗೆ ದೇವರು ಒಳ್ಳೆಯ ಆರೋಗ್ಯ, ಆಯುಷ್ಯ, ಕರುಣಿಸುತ್ತಾರೆ ಎಂದು ತಿಳಿಸಿದರು.
ವರದಿ :ಕೆ.ಮಾರುತಿ ಮುರಳಿ