ಹೊನ್ನಾಳಿ,ದಾವಣಗೆರೆ ನಗರದ ಎ.ವಿ.ಕೆ. ಕಾಲೇಜ ರಸ್ತೆಯಲ್ಲಿರುವ ಜಿಲ್ಲಾ ಗುರು ಭವನದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಅಡಿಯಲ್ಲಿ ನಿವೃತ್ತರಾದ ರಾಜ್ಯ ನೌಕರರ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಈ ತಿಂಗಳಿಂದ ಜಾರಿಯಾಗುತ್ತಿರುವ ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯದಲ್ಲಿ ಅನ್ಯಾಯವಾಗುತ್ತಿರುವ ಕುರಿತು ಹಾಗೂ ಮುಂದಿನ ನಡೆ ಕುರಿತು ಆರ್ಥಿಕ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸುವ ದಿಸೆಯಲ್ಲಿ ಸುದೀರ್ಘವಾಗಿ ಚರ್ಚೆಸಲಾಗುವುದು. ಹೀಗಾಗಿ, ನಿವೃತ್ತ ನೌಕರರು ಆಗಮಿಸಿ ಸಲಹೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರ ಸಂಘದ ಅಧ್ಯಕ್ಷರಾದ ಎಂ ಪಿ ಎಂ ಷಣ್ಮುಖಯ್ಯನವರು ತಿಳಿಸಿದರು.
ಸಂಪರ್ಕ ಸಂಖ್ಯೆ 9449100521



















