ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಿವಯೋಗದ ಮಹತ್ವ ಮತ್ತು ಅಕ್ಕ ನಾಗಮ್ಮನವರು ಬಸವಣ್ಣನವರ ಮೇಲೆ ಬೀರಿದ ಪ್ರಭಾವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ಮೈಸೂರು:09/08/2024 ಸಂಜೆ ಬಸವಭಾರತ ಪ್ರತಿಷ್ಠಾನ ಮತ್ತು ಮೈಸೂರಿನಲ್ಲಿರುವ ಶಿವಶ್ರೀ ವಿದ್ಯಾರ್ಥಿ ನಿಲಯ ಸಹಯೋಗದಲ್ಲಿ ಶಿವಯೋಗದ ಮಹತ್ವ ಮತ್ತು ಅಕ್ಕ ನಾಗಮ್ಮನವರು ಬಸವಣ್ಣನವರ ಮೇಲೆ ಬೀರಿದ ಪ್ರಭಾವದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಪ್ರಾಧ್ಯಾಪಕರಾದ ಡಾ.ಜ್ಯೋತಿ ಶಂಕರರವರು ಅಕ್ಕ ನಾಗಲಾಂಬಿಕೆ ಬಸವಣ್ಣನವರಿಗೆ ಬಸವನ ಬಾಗೇವಾಡಿಯಿಂದ ಹಿಡಿದು ಕಲ್ಯಾಣದಲ್ಲಿ ನಡೆದ ಸಮಾಜೋಧಾರ್ಮಿಕ ಕಾರ್ಯಕ್ರಮದ ಹೇಗೆ ಬೆನ್ನೆಲುಬಾಗಿದ್ದರು ಎಂದು ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಕಲ್ಯಾಣದ ಹತ್ಯಾಕಾಂಡ ನಂತರ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ವಹಿಸಿದ ಪಾತ್ರ,ಶರಣ ಚನ್ನಬಸವಣ್ಣನವರನ್ನು ಕಳೆದುಕೊಂಡು ತರೀಕೆರೆಯಲ್ಲಿ ಲಿಂಗೈಕ್ಯ ಆಗುವವರೆಗೆ ತೋರಿದ ಹೋರಾಟ ಮನೋಭಾವ ಅನುಕರಣೀಯವೆಂದು ಹೇಳಿದರು.

ತಮ್ಮ ಓದಿನ ಜೊತೆ ವಿದ್ಯಾರ್ಥಿನಿಯರು ದಿನದ 10 ನಿಮಿಷವಾದರು ವಚನಗಳ ಬಗ್ಗೆ ತಿಳಿದುಕೊಳ್ಳಿ ಅವೆ ನಮ್ಮ ಕಷ್ಟಕಾಲದಲ್ಲಿ ಕೈಹಿಡಿಯುವುದು ಎಂಬ ಕಿವಿ ಮಾತು ಹೇಳಿದರು.

ಪೂಜ್ಯ ಬಸವಯೋಗಿ ಪ್ರಭುಗಳು ಶಿವಯೋಗದ ಬಗ್ಗೆ ವಿವರವಾಗಿ ತಿಳಿಸಿದರು ನಮ್ಮೂಳಗೆ ಶಿವನಿದ್ದಾನೆ,ಭವ ರೋಗಕ್ಕೆ ಶಿವಯೋಗವೇ ಮುದ್ದು ಎಂದು ಹೇಳಿದರು . ಇಷ್ಟಲಿಂಗದ ಹಿಂದೆ ವಿಜ್ಞಾನವಿದೆ ಶರಣರ ಪ್ರಕಾರ ಆತ್ಮಕ್ಕೆ ಹೆಣ್ಣು ಗಂಡು ಎಂಬುದಿಲ್ಲ ಆದುದರಿಂದ ಇಷ್ಟಲಿಂಗದ ಧಾರಣೆ ಮಾಡಿಕೊಂಡು ಶಿವಯೋಗ ಮಾಡಿದರೆ ಸಾಕು ಯಾವುದೇ ಕಾಲ್ಪನಿಕ ದೇವರ ಹಂಗು ಬೇಕಿಲ್ಲವೆಂದು ಹೇಳಿದರು.
ಶರಣೆ ಚೂಡಾಮಣಿ ವಚನ ಗಾಯನ ಮಾಡಿದರು ಶಿವಶ್ರೀ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು,ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಿದರು.

ಶಿವಶ್ರೀ ವಿದ್ಯಾರ್ಥಿನಿಲಯದ ರೂವಾರಿಗಾಳಾದ ಶರಣೆ ಪ್ರಭಾಮಣಿ ಯವರು (ತಮ್ಮ ಮನೆಯನ್ನೆ ವಿದ್ಯಾರ್ಥಿ ನಿಲಯವಾಗಿ ಪರಿವರ್ತನೆ ಮಾಡಿ ತಮ್ಮೆಲ್ಲಾ ಸಂಪಾದನೆಯನ್ನು ಇದಕ್ಕೆ ಸಮರ್ಪಣೆ ಮಾಡಿದ್ದಾರೆ. ಇವರು ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ,ಉಚಿತವಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಸುಮಾರು 100 ವಿದ್ಯಾರ್ಥಿನಿಯರು ಪ್ರಯೋಜನೆ ಪಡುತ್ತಿದ್ದಾರೆ)
ಮತ್ತು ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಉಪಸ್ಥಿತರಿದ್ದರು.

ಬಸವಪ್ರಭುಸ್ವಾಮೀಗಳು ಜ್ಯೋತಿ ಶಂಕರ್ ಮತ್ತು ಚೂಡಾಮಣಿಯವರನ್ನು ಸನ್ಮಾನಿಸಲಾಯಿತು .

ಈ ಕಾರ್ಯಕ್ರಮದ ರೂವಾರಿಗಳಾದ, ದಾಸೋಹಿಗಳಾದ ಮತ್ತು ಶಿವಶ್ರೀ ಟ್ರಸ್ಟ್ ನ ಅಧ್ಯಕ್ಷರಾದ ಪ್ರಭಾಮಣಿಯವರನ್ನು ಬಸವಭಾರತ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ