ವಿಶ್ವ ಹಿಂದೂ ಪರಿಷದ್ ಮಾತೃಶಕ್ತಿ, ದುರ್ಗಾವಾಹಿನಿ ಚಿತ್ತಾಪೂರ ಪ್ರಖಂಡ
ಕಲಬುರಗಿ ಜಿಲ್ಲೆಯ ಚಿತ್ತಾಪೂರ ಪಟ್ಟಣದ ಅಮರಾವತಿ ಮೈದಾನದಲ್ಲಿರುವ ಐತಿಹಾಸಿಕವಾಗಿರುವ ಶ್ರೀ ನಾಗರ ದೇವತೆಗಳನ್ನು ಕೆಲ ವರ್ಷಗಳ ಹಿಂದೆ ಕಿಡಿಗೇಡಿಗಳು ದ್ವಂಸ ಮಾಡಿ ಎಲ್ಲೆಂದರಲ್ಲಿ ಬಿಸಾಕಿದ್ದರು. ಅದನ್ನು ಗಮನಿಸಿದ ಸ್ವಯಂಸೇವಕರ ತಂಡ ಅವುಗಳನ್ನು ಆರಿಸಿ ತಂದು ಒಂದು ಕಡೆ ಸೇರಿಸಿ ಅಳಿವಿನ ಅಂಚಿನಲ್ಲಿದ್ದ ಪುರಾತನ ಜಾಗದಲ್ಲೇ ನಾಗರ ದೇವತೆಗಳಿಗಾಗಿ ಕಟ್ಟೆಯನ್ನು ಕಟ್ಟಿ ವಿ. ಹಿಂ. ಪ. ವತಿಯಿಂದ ಪ್ರತಿ ವರ್ಷ ಶ್ರೀನಾಗದೇವರಿಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.
ಅದರಂತೆ ಇಂದು ಸಹ ನಾಗದೇವತೆಗಳಿಗೆ ವಿ. ಹಿಂ. ಪ ಚಿತ್ತಾಪೂರ ಪ್ರಖಂಡ ಅಧ್ಯಕ್ಷರಾದ ಶ್ರೀನಿವಾಸ ಹಳ್ಳಿ ಮತ್ತು ಮಾತೃ ಶಕ್ತಿ ಪ್ರಮುಖರಾದ ಶ್ರೀಮತಿ ರೇಣುಕಾ ಬಿರೆದಾರ ಹಾಗೂ ಜಿಲ್ಲಾ ಅರ್ಚಕ ಪುರೋಹಿತ ಪ್ರಮುಖರಾದ ವೇ. ಮೂ. ಶ್ರೀ ಮಂಜುನಾಥ್ ಶಾಸ್ತ್ರೀಗಳು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಈ ಪೂಜೆಯಲ್ಲಿ ಪ್ರಾಂತ ಸಹ ಸೇವಾ ಪ್ರಮುಖರಾದ ಶ್ರೀ ಅಂಬರೀಷ್ ಸಲೇಗಾಂವ, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀ ಮಹಾದೇವ ಅಂಗಡಿ, ಜಿಲ್ಲಾ ಮಾತೃ ಶಕ್ತಿ ಪ್ರಮುಖರಾದ ಶ್ರೀಮತಿ ಸುವರ್ಣ ಶಿಲ್ಪಿ, ಪ್ರಖಂಡದ ಅಧ್ಯಕ್ಷರಾದ ಶ್ರೀನಿವಾಸ ಹಳ್ಳಿ, ಕಾರ್ಯದರ್ಶಿಗಳಾದ ಸಾಬಣ್ಣ ಪೂಜಾರಿ, ಬಜರಂಗ ದಳದ ಸಂಯೋಜಕರಾದ ಮಲ್ಲಿಕಾರ್ಜುನ್ ಉಪ್ಪಾರ, ಮಾತೃಶಕ್ತಿ ಪ್ರಮುಖರಾದ ರೇಣುಕಾ ಬಿರಾದಾರ, ದುರ್ಗವಹಿನಿ ಪ್ರಮುಖರಾದ ಶ್ರುತಿ ತಾವರೆ, ನಗರ ಬಿಜೆಪಿ ಅಧ್ಯಕ್ಷರಾದ ಆನಂದ ಪಾಟೀಲ್ ನರಬೋಳಿ , ಮಂಡಲ ಪ್ರದಾನ ಕಾರ್ಯದರ್ಶಿಗಳಾದ ನಾಗರಾಜ್ ಹೂಗಾರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಮೇಘರಾಜ ಗುತ್ತೇದಾರ್. ವಿ.ಹಿಂ.ಪ ಮಾಜಿ ಅಧ್ಯಕ್ಷರಾದ ಹಾಗೂ ನ್ಯಾಯವಾದಿಗಳಾದ ಅಶ್ವತ್ಥ್ ರಾಥೋಡ್, ಚಂದು ದೊಡ್ಮನಿ ,ಮಂಜುನಾಥ ಶಾಸ್ತ್ರೀ, ಲಕ್ಷ್ಮಿ ಮಟ್ಟಿ, ನಿರ್ಮಲ ಭಂಗಿ, ವಿಜಯಲಕ್ಷ್ಮಿ ಬೀರೆದಾರ್, ಯಲ್ಲಪ್ಪ ಪುಂಗಿ, ಮಲ್ಲಿಕಾರ್ಜುನ ಮುಗುಳನಾಗವಿ, ಅಳ್ಳೆಪ್ಪ ಉಪ್ಪರ್ ಯಲ್ಲಾಲಿಂಗ ಸುಳ್ತಾನಪೂರ್ ಹಾಗೂ ವಿ.ಹಿಂ.ಪ ಎಲ್ಲಾ ಕಾರ್ಯಕರ್ತರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶಾಸ್ತ್ರೀ, ಚಿತ್ತಾಪುರ