ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಮುಗದಾಳ ಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಕೆ ಟಿ ಹಳ್ಳಿ ವೃತ್ತ ಮಟ್ಟದ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಡಿ ಪಿ ಓ ಸುನೀತಾ ರವರು ಮಾತನಾಡಿ ತಾಯಿಯ ಎದೆ ಹಾಲಿನಲ್ಲಿ ಪೌಷ್ಟಿಕ ಅಂಶಗಳು ಮತ್ತು ಮಕ್ಕಳ ಬೆಳವಣಿಗೆ ಬೇಕಾಗುವ ಗುಣಮಟ್ಟದ ಪೋಷಣ ಅಂಶಗಳು ಕ್ರೂಢೀಕರಣವಾಗಿರುತ್ತದೆ ಪ್ರತಿಯೊಬ್ಬ ತಾಯಿ ಜನನವಾದ ಒಂದು ಎರಡು ಗಂಟೆಗಳಲ್ಲಿ ತಾಯಿ ತನ್ನ ಮಗುವಿನ ಎದೆ ಹಾಲು ಉಣಿಸಬೇಕು ತಾಯಿ ಎದೆ ಹಾಲಿನಿಂದ ಮಕ್ಕಳು ಗುಣ ಮಟ್ಟದ ಬೆಳವಣಿಗೆ ಸಹಕಾರವಾಗುತ್ತದೆ ಎಂದು ತಾಯಿಯ ಎದೆ ಹಾಲಿನ ಮಹತ್ವ ತಿಳಿಸಿದರು ಮತ್ತು ಬಾಲ್ಯ ವಿವಾಹ ಮಹಾ ಅಪರಾಧ ಪ್ರತಿಯೊಬ್ಬ ತಂದೆ ತಾಯಿ ತನ್ನ ಮಗುವಿನ ಭವಿಷ್ಯ ಅರೋಗ್ಯದ ಕಡೆ ಗಮನ ಹರಿಸಬೇಕು ಬಾಲ್ಯ ವಿವಾಹ ಮಾಡುವುದರಿಂದ ಹಲವಾರು ತೊಂದರೆ ಉಂಟಾಗುತ್ತದೆ ಮತ್ತು ಕಾನೂನು ಬಾಹಿರ ಚಟುವಟಿಕೆ ಕೂಡಾ ಅಂತಹ ವಿಷಯ ಸಾರ್ವಜನಿಕವಾಗಿ ಯಾರಿಗಾದರೂ ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತಂದು ಅಂತಹ ಬಾಲ್ಯ ಮಕ್ಕಳ ರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕೂಡಾ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು ಜಯಲಕ್ಷ್ಮಿ ಪಂಚಾಯತ್ ಕಾರ್ಯದರ್ಶಿ ಪರಮೇಶ್ ಅಂಗನವಾಡಿ ಕಾರ್ಯಕರ್ತೆ ಕವಿತಾ ಮತ್ತು ನಾಗಮಣಿ ರೈತಮುಖಂಡ ಗುಡಿಪಾಲಪ್ಪ ಲಕ್ಷ್ಮಿ ಕಾಂತ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರೆಯರು ಗ್ರಾಮದ ಬಾಂಣಂತಿಯರು ಗರ್ಭಿಣಿಯರು ಸ್ತ್ರಿ ಶಕ್ತಿ ಸಂಘ ಸದಸ್ಯರು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ವರದಿ :ಕೆ.ಮಾರುತಿ ಮುರಳಿ