ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾಜ್ಯದ ಅನೇಕ ಜಿಲ್ಲೆಗಳಿಂದ ಹರಿದು ಬಂದ ಸಾವಿರಾರು ಭಕ್ತಾದಿಗಳು ಶನಿವಾರ ವಿಶೇಷ ಪೂಜೆ ನೆರೆವೇರಿಸಿದರು.
ಈ ಬಾರಿ ಶ್ರಾವಣ ಮಾಸವು ನಾಲ್ಕು ಶನಿವಾರಗಳು ಬಂದಿದ್ದು ಶನೇಶ್ವರ ಸ್ವಾಮಿಗೆ ಪ್ರಿಯವಾದ ಮೊದನೇ ಶನಿವಾರವೇ ಭಕ್ತಾದಿಗಳ ಸಂಖ್ಯೆ ಹೆಚ್ಚಿತ್ತು.ಆಂಧ್ರ, ತೆಲಾಂಗಣ, ತಮಿಳುನಾಡು ಸೇರಿದಂತೆ ದಾವಣಗೆರೆ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಹಾಸನ, ಚಿಕ್ಕಮಂಗಳೂರು,ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ 35,000 ರಿಂದ 40,000 ಸಾವಿರಕ್ಕೂ ಹೆಚ್ಚು ಭಕ್ತ ಸಾಗರ ಹರಿದು ಬಂದಿದ್ದು ಮುಂಜಾನೆ 3:30 ಗಂಟೆಯಿಂದಲೇ ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಶನೇಶ್ವರಸ್ವಾಮಿ ಜಾತ್ರೆಯ ಅಂಗವಾಗಿ ದೇವಸ್ಥಾನದ ಸಮಿತಿಯಿಂದ ಕ್ರಮ ಕೈಗೊಂಡಿದ್ದು ಕುಡಿಯುವ ನೀರು, ಅನ್ನದಾಸೋಹ, ವಸತಿ ಸೇರಿದಂತೆ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಳ್ಳತನ ತಡೆಯುವುದಕ್ಕೆ 360 ಡಿಗ್ರಿ ಕಾರ್ಯನಿರ್ವಹಿಸುವ 26 ಸಿ ಸಿ ಕ್ಯಾಮೆರಾ, ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು, ಕಳೆದ ಶ್ರಾವಣದಲ್ಲಿ ಕುಡಿಯುವ ನೀರನ ಸಮಸ್ಯೆ ಇತ್ತು, ಈ ಭಾರಿ ಕುಡಿಯುವ ನೀರಿನ ಟ್ಯಾಂಕ್ ಇರಿಸಲಾಗಿತ್ತು.
ಶನಿ ದೇವರಿಗೆ ತೈಲಾಭಿಷೇಕ, ನವಗ್ರಹ ಪೂಜೆ ಮತ್ತು ಸೀತಾಂಬೆಗೆ ಕುಂಕುಮಾರ್ಚನೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿ. ದೇವಾಲಯದ ಸಮಿತಿಯು ತೆಂಗಿನಕಾಯಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದರಿಂದ ದೇವಾಲಯದ ಮುಂಭಾಗದಲ್ಲಿ ನಡೆಯುವ ಹೋಮದಲ್ಲಿ ಕಪ್ಪು ಮಸಿ ಮತ್ತು ಎಣ್ಣೆಯನ್ನು ಸುರಿದು ಭಕ್ತಿಯಿಂದ ಪ್ರಾರ್ಥಿಸಿ, ಸಮೀಪದಲ್ಲೇ ಇರುವ ಕೋಟೆ ಆಂಜನೇಯಸ್ವಾಮಿಯ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಹಿಂದಿರುಗುತ್ತಾರೆ.
ವರದಿ :ಕೆ.ಮಾರುತಿ ಮುರಳಿ