ಪಾವಗಡ:ಶನಿಮಹಾತ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಬರುವ ಭಕ್ತಾದಿಗಳಲ್ಲಿ ಶನಿಮಹಾತ್ಮ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಟ್ರಸ್ಟ್ ರವರು ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಹೇಳಿದರು.
ಆದರೆ ತೆಂಗಿನಕಾಯಿ ಮಾರುವಂತಹ ಅಂಗಡಿಗಳು ಬರುವ ಭಕ್ತಾದಿಗಳನ್ನು ಎರಡು ತೆಂಗಿನಕಾಯಿಗಳಿಗೆ 400 ರಿಂದ 500 ಗಳು ತೆಗೆದುಕೊಂಡು ಇದ್ದರೆ ಎಂದು ಭಕ್ತಾದಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ತೆಂಗಿನಕಾಯಿ ಹೊಡೆಯದಿದ್ರೆ ನಿಮಗೆ ಶಾಪ ಆಗುತ್ತೆ ಅಂತ ಭಕ್ತಾದಿಗಳಲ್ಲಿ ಅಪನಂಬಿಕೆಯನ್ನು ಹುಟ್ಟಿಸಿ ಕೆಲವೊಂದು ಮಾತುಗಳು ಆಡುವ ಮುಖೇನ ಭಕ್ತಾದಿಗಳಲ್ಲಿ ಭಯವನ್ನು ಹುಟ್ಟಿಸಿ ತೆಂಗಿನಕಾಯಿ ತಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಸ್ವತಹ ಭಕ್ತಾದಿಗಳೇ ಹೇಳಿಕೊಂಡಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಕ್ತಾದಿಗಳು ವಿನಂತಿಸಿಕೊಂಡಿದ್ದಾರೆ.
ವರದಿ :ಕೆ.ಮಾರುತಿ ಮುರಳಿ