ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಾಡಂಚಿನ ಗ್ರಾಮಗಳಿಗೆ ಜಿಯೋ ನೆಟ್ವರ್ಕ್ ಸೇವೆಗೆ ಶಾಸಕ ಎಂ ಆರ್ ಮಂಜುನಾಥ್ ಚಾಲನೆ

ಹನೂರು :ಕಾಡಂಚಿನ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತಲೆದೂರುತ್ತಿದ್ದು ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದಾಗಿ ಜಿಯೋ ನೆಟ್ವರ್ಕ್ ಅನ್ನು ಅಳವಡಿಸಿರುವುದು ಸಂತೋಷದ ವಿಷಯ ಎಂದು ಶಾಸಕ ಎಂ ಆರ್ ಮಂಜುನಾಥ್ ಹೇಳಿದರು.
ತಾಲೂಕಿನ ಕಾಡಂಚಿನ ಗ್ರಾಮ ಮಿಣ್ಯಂ ಹಾಗೂ ಹೂಗ್ಯಂ ಗ್ರಾಮಗಳಲ್ಲಿ ನೂತನವಾಗಿ ನೆಟ್ವರ್ಕ್ ಸಂಪರ್ಕಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಸ್ಯಾಟಲೈಟ್, ಕಂಪ್ಯೂಟರ್ ಯುಗದಲ್ಲಿ ನಾವಿದ್ದೇವೆ, ಪ್ರಪಂಚ ವೇಗವಾಗಿ ಬೆಳವಣಿಗೆಯಾಗುತ್ತಿದೆ, ಆದರೆ ಇಲ್ಲಿಯವರೆಗೂ ಸಹ ನಮ್ಮ ಕಾಡಂಚಿನ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಯಿಂದ ಹಲವು ತೊಂದರೆಯಾಗುತ್ತಿತ್ತು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಭಾಗದ ಜನರಿಗೆ ನೆಟ್ವರ್ಕ್ ಸಮಸ್ಯೆ ಯನ್ನು ಬಗೆಹರಿಸಿದ್ದೇನೆ ಹಾಗೂ ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಸಮಸ್ಯೆ ಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂದಿನಿಂದ ಇಂದಿನವರೆಗೂ ಅಂದರೆ ಸ್ವತಂತ್ರ ಪೂರ್ವದಲ್ಲಿ ಏಗಿತ್ತೋ ಆಗೆ ಬದುಕುತಿದ್ದಾರೆ,ನೆಟ್ವರ್ಕ್ ಪ್ರಪಂಚದ ಮೂಲೆ ಮೂಲೆಯಲ್ಲಿ ವೇಗವಾಗಿ ಬೆಳೆಯುತ್ತಿದ್ದರು ಕೂಡಾ ಈ ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಈಗಲೂ ಇತ್ತು .ಸತತವಾಗಿ ಅಧಿಕಾರಿಗಳು ಮತ್ತು ಕಂಪನಿ ಜೊತೆ ನಿಕಟವಾಗಿ ಅವರನ್ನ ಸಂಪರ್ಕ ಇಟ್ಟುಕೊಂಡು ಆದಷ್ಟು ಬೇಗ ಈ ಕೆಲಸ ಪೂರೈಸಬೇಕೆಂದು ಒತ್ತಾಯ ಮಾಡಿ ಕೊನೆಗೆ ಇಂದು ಸುದಿನ ಎಂದು ಭಾವಸಿ ಜಿಯೋ ನೆಟ್ವರ್ಕ್ ಸಂಪರ್ಕ ಕಲ್ಪಿಸಿದ್ದು, ಸುಸಜ್ಜಿತವಾಗಿ ಯಾರಿಗೆ ಬೇಕೊ ಅವರಿಗೆ ಕರೆ ಮಾಡಬಹುದು. ಏನೇ ಒಂದು ಸಮಸ್ಯೆಯಾದರೂ ಎಲ್ಲರಿಗೂ ತಿಳಿಸಲು ಒಂದು ಅವಕಾಶವಾಗಿದೆ.ಕರೆ ಮಾಡಿ ಮಾತನಾಡಲು ಒಂದು ಅವಕಾಶ ಸಿಕ್ಕಿದೆ. ಈ ಗ್ರಾಮಗಳಿಗೆ ನೆಟ್ವರ್ಕ್ ಬಂದಿರುವುದು ಹೆಮ್ಮೆಯ ವಿಷಯ, ಇದುವರೆಗೂ ಆಗದೆ ಇರುವ ಒಂದು ಕೆಲಸವನ್ನು , ಈ ಕಾರ್ಯಕ್ರಮ ಸಣ್ಣದಾದರೂ ಇದರ ಮಹತ್ವ ದೊಡ್ಡ ವಿಚಾರ ಎಂದರು.

ಗ್ರಾಮಸ್ಥ ಯರಂಬಡಿ ಹುಚ್ಚಯ್ಯ ಮಾತನಾಡಿ ಶಾಸಕ ಎಂ ಆರ್ ಮಂಜುನಾಥ್ ಹಾಗೂ ಅರಣ್ಯ ಇಲಾಖೆ ಮತ್ತು ಜಿಯೋ ಅಧಿಕಾರಿಗಳ ಜೊತೆ ಸತತವಾಗಿ ಚರ್ಚೆ ನಡೆಸಿ ಹೋರಾಟ ನಡೆಸಿ ಈ ಭಾಗದ ಜನರಿಗೆ ನೆಟ್ವರ್ಕ್ ಸಮಸ್ಯೆ ಯನ್ನು ಬಗೆಹರಿಸಿದರು, ನಮಗೆ ಏನೇ ಸಮಸ್ಯೆ ಗಳಿದರು ನೆಟ್ವರ್ಕ್ ಇಲ್ಲದ ಕಾರಣ ಸಮಸ್ಯೆ ಗಳನ್ನು ಹೊತ್ತು ನೇರ ಅಧಿಕಾರಿಗಳು ಇರುವ ಸ್ಥಳಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿತ್ತು, ಶಾಸಕ ಎಂ.ಆರ್ ಮಂಜುನಾಥ್ ಅವರ ಸತತವಾಗಿ ಪರಿಶ್ರಮ ದಿಂದ ಇಲ್ಲಿನ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಜಿಯೋ ನೆಟ್ವರ್ಕ್ ನಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಆನ್ಲೈನ್ ಸೇವೆಗೂ ಸಹ ಸಹಕಾರಿಯಾಗಲಿದೆ, ಇವರಿಗೆ ಈ ಭಾಗದ ಗ್ರಾಮಸ್ಥರಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಳೆದ 10 ವರ್ಷಗಳಿಂದ ಇದ್ದ ಸಚಿವರು ಹಾಗೂ ಸಂಸದರಿಗೆ ನೆಟ್ವರ್ಕ್ ಸಮಸ್ಯೆಗಳ ಬಗ್ಗೆ 10 ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜವಾಗಲಿಲ್ಲ, ಪ್ರತಿಯೊಂದು ಅಧಿಕಾರಗಳನ್ನ ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ, ಬೇರೆ ಬೇರೆ ಕಡೆ ಹೋಗಿ ದೂರವಾಣಿ ಸಂಪರ್ಕ ಮೂಲಕ ಮಾತನಾಡಬೇಕಾದ ಪರಿಸ್ಥಿತಿ ಇತ್ತು. ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಮಾಡಲು ಆಗದೆ,ತಮ್ಮ ಜೇಬಿನಲ್ಲಿ ಇದ್ದ ಹಣ ಖರ್ಚು ಮಾಡಿ ಭೇಟಿ ಮಾಡಬೇಕಾದ ಪರಿಸ್ಥಿತಿ ಇತ್ತು, ಶಾಸಕರಿಗೆ ಮನವಿ ಸಲ್ಲಿಸಿ, ನೇರವಾಗಿ ಭೇಟಿ ಮಾಡಿ ಜಿಯೋ ನೆಟ್ವರ್ಕ್ ಹಾಗೂ ಮ್ಯಾನೇಜರ್ ಗಳನ್ನ ಖುದ್ದಾಗಿ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಜಿಯೋ ನೆಟ್ವರ್ಕ್ ಅಳವಡಿಸಲು ಶಾಸಕ ಮಂಜುನಾಥ್ ಅವರು ಕೂಡ ಶ್ರಮ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಜಿಯೋ ಸಂಸ್ಥೆಯ ಫೈಬರ್ ವರ್ಕ್ ಇಂಜಿನಿಯರ್ ಆನಂದ್, ಸೂಪರ್ವೈಸರ್ ಶಶಿ. ಕೊಳ್ಳೇಗಾಲ ಜಿಯೋ ಮ್ಯಾನೇಜರ್ ಮಹಾವೀರ್. ಅಧ್ಯಕ್ಷರಾದ ಮಾದೇಶ್,ಮುಖಂಡರಾದ ಯಾರಂಬಡಿ,ಶಿವಣ್ಣ,ನಾಗರಾಜ್ , ಪಲನಿಸ್ವಾಮಿ, ತಂಗವೇಲು, ಮುರುಗೇಶ್, ಹುಚ್ಚಯ್ಯ,ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ್, ಎವಿಟಿ ಮಹಾದೇವ್ ,ಮಂಜೇಶ್ ಗೌಡ, ಎಸ್ ಆರ್ ಮಹದೇವು,ಮುನಿಯಪ್ಪ,ರಾಜೇಂದ್ರ, ವಸಂತ್ ಕುಮಾರ್,ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ