ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೇವರ್ಗಿ ಮತ್ತು ಯಡ್ರಾಮಿ ಯುವ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು ಯುವ ಘಟಕ ಉದ್ಘಾಟನೆ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವು ಗಾಣಿಗ ಗುರು ಪೀಠ ವನಶ್ರೀ ಸಂಸ್ಥಾನ ವಿಜಯಪುರದ ಪೀಠಾಧಿಪತಿಗಳಾದ ಜಯಬಸವ ಕುಮಾರ ಮಹಾ ಸ್ವಾಮಿಜಿಯವರು ಸಾರೋಟ ಮೆರವಣಿಗೆ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿವಿಧ ವಾದ್ಯ ಮೇಳಗಳಿಂದ ಗಾಣಿಗ ಜಯ ಘೋಷಣೆ ಹಾಕುತ್ತಾ ಮತ್ತು ನೃತ್ಯಗಳ ಮೂಲಕ ಪೂಜ್ಯರಿಗೆ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು.
ಕಾರ್ಯಕ್ರಮವು ಗಾಣಿಗ ಯುವ ಘಟಕ ಜೇವರ್ಗಿ ತಾಲೂಕು ಅಧ್ಯಕ್ಷರಾದ ಸುರೇಶ ಪಾಟೀಲ್ ನೇದಲಗಿಯವರು ಸಮಾಜದಲ್ಲಿರುವ ಪ್ರಮುಖ ಹಿರಿಯರ ಮಾರ್ಗದರ್ಶನದಿಂದ ಸಮಾಜದ ಕೆಲಸ ಮತ್ತು ಇತರೆ ಕಾರ್ಯಗಳನ್ನು ಮಾಡುತ್ತೇವೆ ಯಾವಾಗಲೂ ಸಮಾಜದ ಹಿರಿಯರು ನಮ್ಮ ಜೊತೆಗಿದ್ದಾರೆ ಎಂದು ಪ್ರಾಸ್ತವಿಕ ನುಡಿಗಳನ್ನು ಆಡಿದರು.
ಸಮಾಜದ ಇನ್ನೋರ್ವ ಹಿರಿಯ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ್ ಯಲಗೋಡ್ ರವರು ಯುವ ಘಟಕದ ವತಿಯಿಂದ ಆಯೋಜಿಸಿದ ಕಾರ್ಯಕ್ರಮವನ್ನು ನೋಡಿ ಹಿರಿಯರಾದವರು ನಾವು ಕಲಿಯಬೇಕು,ಮೂರ್ತಿ ಚಿಕ್ಕದಿದ್ದರೂ ಕೀರ್ತಿ ದೊಡ್ಡದಿದೆ ಎಂದು ಸಂತಸ
ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ವಿಜಯಪುರದ ಗಾಣಿಗ ಗುರು ಪೀಠಾಧಿಪತಿಯವರಾದ ಪರಮ ಪೂಜ್ಯ ಜಯ ಬಸವ ಕುಮಾರ ಮಹಾ ಸ್ವಾಮಿಯವರು ಜಾತಿಯಲ್ಲಿನ ನೀತಿ ಕಲಿತರೆ ಜ್ಯೋತಿಯಾಗಿ ಬೆಳೆಯಲು ಸಾಧ್ಯ! ಹಾಗಾಗಿ ಸಮಾಜ ಸಂಘಟನೆಯ ಜೊತೆಗೆ ಉತ್ತಮವಾದ ಶಿಕ್ಷಣವನ್ನು ಪಡೆಯಿರಿ ಎಂದು ಪೂಜ್ಯರು ಆಶೀರ್ವಚನವನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಘಟ್ಟವಾದ ಮಾಜಿ ಎಮ್ ಎಲ್ ಎ ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ್ ರವರು,ಜ್ಯೋತಿ ಬೆಳಗಿಸಿದರು ಮತ್ತು ಶ್ರೀ ಶಿವರಾಜ ಪಾಟೀಲ್ ರದ್ದೇವಾಡಗಿ,ಆರ್ ಭೀಮರಾವ್,ಸಂಗನಗೌಡ ಪಾಟೀಲ್ ,ಶ್ರೀಶೈಲ್ ಗೌಡ ಪಾಟೀಲ್ ಮಾಗಣಗೇರಾ,ಮಾಜಿ ಶಾಸಕ ರಮೇಶ ಭೂಸನೂರ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ,ಹಿರಿಯರಾದ
ಮಡಿವಾಳಪ್ಪಗೌಡ ಪಾಟೀಲ್ ಮಾಗಣಗೇರ ಸಂತಸದಿಂದ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ಮಡಿವಾಳಪ್ಪಗೌಡ ಪಾಟೀಲ್ ಮಾಗಣಗೇರ,ಸುನೀಲ್ ಸಜ್ಜನ,ಶಿವಾನಂದ ದ್ಯಾಮಗೊಂಡ,ಶರಣಕುಮಾರ ಬಿಲ್ಲಾಡ,ಆರ್ ಭೀಮರಾವ್,ಮಲ್ಲಣ್ಣ ಬಂಗಾರಿ,ಜೇವರ್ಗಿ ತಾಲೂಕ ಕಸಾಪ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ,ಯಡ್ರಾಮಿ ತಾಲೂಕ ಕಸಾಪ ಅಧ್ಯಕ್ಷರಾದ ನಾಗಪ್ಪ ಎಮ್ ಸಜ್ಜನ,ದಯಾಸಾಗರ ಪಾಟೀಲ್ ಇಂಡಿ,ಸುರೇಶ ಆರ್ ಸಜ್ಜನ, ಶ್ರೀ ಕಾಶಿರಾಯಗೌಡ ಯಲಗೋಡ್ ,ಸಿಂದಗಿ ಗಾಣಿಗ ಸಮಾಜದ ಅಧ್ಯಕ್ಷರಾದ ಮಲ್ಲಣ್ಣ ಮನಗೂಳಿ,ಡಾ.ವಿಶ್ವನಾಥ ಪಾಟೀಲ್ ಮಾಗಣಗೇರ,ಸಿ ಎಸ್ ಬಿರಾದಾರ,ಶರಣಗೌಡ ಎಸ್ ಮದರಿ,ಶ್ರೀ ಮಲಿಕಾರ್ಜುನ್ ಕೋಣಸಿರಸಗಿ ಯತ್ನಾಳ,ಬಾಗು ಮುತ್ತಪಗೋಳ,ಸಂಗಮೇಶ ಸಂಕಾಲಿ, ಸಂತೋಷ ಸಿ ಬಿರಾದಾರ,ಜೇವರ್ಗಿ ಮತ್ತು ಯಡ್ರಾಮಿ ಗಾಣಿಗ ಸಮಾಜ ಅಧ್ಯಕ್ಷರಾದ ಶ್ರೀ ಸುರೇಶ ಪಾಟೀಲ್ ನೇದಲಗಿ ಮತ್ತು ಶ್ರೀ ಸಿದ್ದನಗೌಡ ಪಾಟೀಲ್ ಮಾಗಣಗೇರ, ಜಿ ಎಸ್ ಬಿರಾದಾರ,ಶಂಕರಗೌಡ ಸುಂಬಡ,ರಾಜಶೇಖರ ಭಂಟನೂರ,ಭಗವಂತ್ರಾಯ ನಾರಾಯಣಪೂರ,ರವಿ ಕಿರಣಗಿ ನೆಲೋಗಿ,ಮಹಾಂತೇಶ ಮದರಿ ಹರವಾಳ,ಬಸವರಾಜ ಸಂಕಾಲಿ,ವಿನೋದ ಬಾಸಗಿ,ಬಾಪುಗೌಡ ಕುಕನೂರ,ಶಂಕರಗೌಡ ಕುಕನೂರ,ಬಸವರಾಜ ಹಳಿಮನಿ ಕುರನಳ್ಳಿ,ಮಲ್ಲಿನಾಥ ಟೋಕ್ರಿ,ಬಸುಗೌಡ ಚನ್ನೂರ,ಮಲ್ಲು ಮಂಗಾ,ಮುತ್ತಣ್ಣ ಭೂದಿಹಾಳ,ರಾಮು ಕನ್ನೊಳ್ಳಿ ಹಾಗೂ ಇತರರೆಲ್ಲರೂ ಇದ್ದರು. ಕಾರ್ಯಕ್ರಮದ ನಿರೂಪಣೆ ಮಾಡಿ ಗುರುನಾಥ ಗೋಬರಡಗಿಯವರು ವಂದಿಸಿದರು.

ವರದಿ:ಚಂದ್ರಶೇಖರ ಪಾಟೀಲ್(ಗುಡೂರ ಎಸ್ ಎನ್)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ