ಕಲ್ಬುರ್ಗಿ ಸುದ್ದಿ ಬಾಂಗ್ಲಾದೇಶದಲ್ಲಿರುವ ಹಿಂದುಗಳನ್ನು ರಕ್ಷಣೆ ಮಾಡಬೇಕು ಎಂದು ಜೇವರ್ಗಿ ತಾಲೂಕ ಶ್ರೀರಾಮ ಸೇನಾ ತಾಲೂಕ ಅಧ್ಯಕ್ಷರಾದ ಮಲಕಣ್ಣ ಹಿರಿ ಪೂಜಾರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಹಿಂದೂ ಮನೆಗಳು ದೇವಾಲಯಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಅತ್ಯಂತ ನಾಚಿಕೆ ಗೆಡೀತನದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಿಂದುಗಳ ಮೇಲಿನ ದಾಳಿಯನ್ನು ತಡೆಯುವಂತೆ ಬಾಂಗ್ಲಾದೇಶದ ಸೇನೆಗೆ ಭಾರತ ಸರ್ಕಾರವು ನಿರ್ದೇಶನ ನೀಡಬೇಕು ಅಲ್ಲಿರುವ ಹಿಂದುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ತಕ್ಷಣವೇ ಅವರಿಗೆ ಭದ್ರತೆ ಒದಗಿಸಬೇಕೆಂದು ಶ್ರೀರಾಮ ಸೇನಾ ತಾಲೂಕ ಅಧ್ಯಕ್ಷರಾದ ಮಲಕಣ್ಣ ಹಿರೇ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
